ದೊಡ್ಡಕನ್ನಲ್ಲಿ ಶಕ್ತಿ ಕೇಂದ್ರಗಳ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆ ಸಭೆ ನಡೆಸಿ ನಿವಾಸಿಗಳ ಕುಂದುಕೊರತೆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಕೊಡತಿ ರೈಲ್ವೇ ಬ್ರಿಡ್ಜ್ ನ ಸಮೀಪ ಸನ್ ಸಿಟಿ ಗ್ಲೋರಿಯಾ ಅಪಾರ್ಟ್ಮೆಂಟ್ ನಲ್ಲಿ ಈ ಸಭೆಯಲ್ಲಿ ಕೆಳಗಿನ ಸಮಸ್ಯೆಗಳ ಕುರಿತು ಸಂಬಂಧಪಟ್ಟವರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
1. ಕಾವೇರಿ ನೀರಿನ ಪೈಪ್ ಮತ್ತು UGD ಪೈಪ್ ಅಳವಡಿಸುವುದು.
2. ವಿದ್ಯುತ್ ಸಮಸ್ಯೆಗೆ ಬೆಸ್ಕಾಂ ಇಂಜಿನೀಯರ್ ನೊಂದಿಗೆ ಸ್ಥಳದಲ್ಲೇ ಮಾತನಾಡಿ ನಿವಾಸಿಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ತಿಳಿಸಲಾಯಿತು.
3. ಬಿಬಿಎಂಪಿಯಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವ ಸಲುವಾಗಿ ಸಮಸ್ಯೆಗೆ ಸೂಕ್ತ ಪರಿಹಾರ.
4. ಸರ್ಜಾಪುರ ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ ಮತ್ತು ರಸ್ತೆ ಅಗಲೀಕರಣ.
5. ದೊಡ್ಡಕನ್ನಲ್ಲಿಯಲ್ಲಿ ಸ್ಥಳೀಯ ನಿವಾಸಿಗಳ ಬೇಡಿಕೆಯಂತೆ ಬೆಂಗಳೂರು ಒನ್ ಕೇಂದ್ರ ಮತ್ತು ಆಧಾರ್ ಕೇಂದ್ರದ ಸ್ಥಾಪನೆಯ ಬಗ್ಗೆ.