ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಪ್ರಧಾನ ಮಂತ್ರಿಗಳು ಅನೇಕ ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಯಾತ್ರೆಯ ಉಸ್ತುವಾರಿಯನ್ನು ಶ್ರೀ ಅರವಿಂದ ಲಿಂಬಾವಳಿ ಅವರು ವಹಿಸಿಕೊಂಡಿದ್ದಾರೆ.
ಶ್ರೀ ನರೇಂದ್ರ ಮೋದಿಯವರ ಮೈಸೂರು ಕಾರ್ಯಕ್ರಮಗಳ ಪಟ್ಟಿ:
1. ವಿದ್ಯುಚ್ಛಾಲಿತ ಮೈಸೂರು – ಬೆಂಗಳೂರು ದ್ವಿಪಥ ರೈಲು ಹಳಿ ಉದ್ಘಾಟನೆ
2. ಮೈಸೂರು – ರಾಜಸ್ಥಾನದ ನಡುವೆ ಹೊಸ ರೈಲಿಗೆ ಚಾಲನೆ
3. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರೂ. 789.29 ಕೋಟಿ ಬಜೆಟ್ ನೊಂದಿಗೆ ನಾಗನಹಳ್ಳಿ ರೈಲು ನಿಲ್ದಾಣವನ್ನು ಅಧಿಕೃತವಾಗಿ ಉಪನಗರಿ ಟರ್ಮಿನಲ್ ನಿಲ್ದಾಣವಾಗಿ ಘೋಷಣೆ
4. ಮೈಸೂರು – ಬೆಂಗಳೂರು ಅಷ್ಟಪಥ ಹೆದ್ದಾರಿಗೆ ಚಾಲನೆ
5. ಕೆ ಆರ್ ಎಸ್ ರಸ್ತೆ ಬಳಿ ಇ ಎಸ್ ಐಯ ಹೊಸ ಸಂಕೀರ್ಣ ಉದ್ಘಾಟನೆ