ಮಾರತಹಳ್ಳಿಯ ದ ಪಾರ್ಕ್ ಪ್ಲಾಜ಼ ಹೋಟೆಲ್ ನಲ್ಲಿ ನಡೆದ ಮಹದೇವಪುರ ಕ್ಷೇತ್ರದ ಅಭಿವೃದ್ಧಿ ಕುರಿತ ಪ್ರಣಾಳಿಕೆ ಕುರಿತ ಸಭೆ ನಡೆಯಿತು.
ಸಭೆಯಲ್ಲಿ ಮಹದೇವಪುರ ಕ್ಷೇತ್ರದ ಮತದಾರರು ಈ ಕ್ಷೇತ್ರ ಇನ್ನಷ್ಟು ಬೆಳವಣಿಗೆ ಕಾಣಲು ಏನೆಲ್ಲ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂಬ ಕುರಿತು ಸಲಹೆ – ಸೂಚನೆಗಳನ್ನು ನೀಡಿದರು.
ಫ್ಲೈ ಓವರ್ – ಅಂಡರ್ ಪಾಸ್ ಗಳ ನಿರ್ಮಾಣ, ಕೆರೆಗಳ ಶುದ್ಧೀಕರಣ ಮತ್ತು ಅಭಿವೃದ್ಧಿ, ಉದ್ಯಾನವನಗಳ ಅಭಿವೃದ್ಧಿ, ಇಡೀ ಕ್ಷೇತ್ರಕ್ಕೆ ಕಾವೇರಿ ನೀರು ಪೂರೈಕೆ – ಮುಂತಾದ ಸಲಹೆಗಳು ಸಭೆಯಲ್ಲಿ ಕೇಳಿ ಬಂದವು.
ಮುಂದಿನ ದಿನಗಳಲ್ಲಿ ಮಹದೇವಪುರ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸುವಾಗ ಈ ಎಲ್ಲಾ ಸಲಹೆ – ಸೂಚನೆಗಳನ್ನು ಪರಿಗಣಿಸುವುದಾಗಿ ನಾನು ನೆರೆದವರಿಗೆ ಭರವಸೆ ನೀಡಿದೆ.
ಇದೇ ವೇಳೆ ಮಹದೇವಪುರ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿವರ ನೀಡುವ ಜನಹಿತ – 2 ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಮಹದೇವಪುರ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.