ಮಹದೇವಪುರ ಶಾಸಕ ಮತ್ತು ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿ ಅವರು ವರ್ತೂರು ಹೋಬಳಿಯ ಹಾಲನಾಯಕನಹಳ್ಳಿಯಲ್ಲಿ ಶ್ರೀ ಪ್ರಸನ್ನ ಕೋದಂಡಸ್ವಾಮಿಯ 110ನೇ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡರು.
ಇದೇ ವೇಳೆ ಶಾಸಕರು ಅಲ್ಲಿನ ಧರ್ಮಕರ್ತರಾದ ಶಾರದಮ್ಮ ಮತ್ತು ಎಚ್.ಎಂ ರಾಮಪ್ಪ ರೆಡ್ಡಿ ಅವರಿಂದ ಆಶೀರ್ವಚನ ಪಡೆದರು. ಜತೆಗೆ ಭಕ್ತಾದಿಗಳ ಜೊತೆ ಮಾತನಾಡಿದ ಶ್ರೀ ಅರವಿಂದ ಲಿಂಬಾವಳಿ ಅವರು ಪ್ರಸಾದ ವಿತರಣೆಯನ್ನೂ ಮಾಡಿದರು.