ಮಹದೇವಪುರ ವಿಧಾನಸಭಾ ಕ್ಷೇತ್ರ: ಅಭಿವೃದ್ಧಿ ಪರ್ವ

ನಾನು ಕಳೆದ ಹತ್ತು ವರ್ಷಗಳಿಂದ ಪ್ರತಿನಿಧಿಸುತ್ತಿರುವ ಮಹದೇವಪುರ ಕ್ಷೇತ್ರದಲ್ಲಿ ನಡೆದಿರುವ/ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಕಾಮಗಾರಿಗಳ ಒಂದು ಸ್ಥೂಲ ಚಿತ್ರಣವನ್ನು ನಿಮ್ಮ ಮುಂದಿಡಲು ಸಂತಸವಾಗುತ್ತಿದೆ.

ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆ

  • ಭಾರತವನ್ನು ಜಗತ್ತಿನ ಕೌಶಲ್ಯ ಕೇಂದ್ರವನ್ನಾಗಿ ರೂಪಾಂತರಿಸಲೆಂದೇ ವೃತ್ತಿ ಶಿಕ್ಷಣವನ್ನು ಇನ್ನಷ್ಟು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯವು ದೇಶದ ಪ್ರತಿಯೊಂದೂ ಜಿಲ್ಲೆಯಲ್ಲಿ ಮಾದರಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಅತ್ಯಾಧುನಿಕವಾದ ಸೌಲಭ್ಯಗಳನ್ನು ಹೊಂದಿರುವ ಈ ಕೇಂದ್ರಗಳನ್ನು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ (ಪಿಎಂಕೆಕೆ) ಎಂದು ಕರೆಯಲಾಗಿದೆ.
  • ಅರ್ಹತೆ ಆಧಾರಿತ ಕೌಶಲ್ಯ ತರಬೇತಿ ನೀಡಿಕೆ, ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟ, ಸುಸ್ಥಿರತೆ ಸಾಧಿಸುವುದು, ಸುಸ್ಥಿರ ಸಾಂಸ್ಥಿಕ ಮಾದರಿಯನ್ನು ರೂಪಿಸುವುದು – ಇವೇ ಪಿಎಂಕೆಕೆಯ ಉದ್ದೇಶಗಳು.
  • ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಿಎಂಕೆಕೆ ಕೇಂದ್ರವು ಮಹದೇವಪುರ ವಿಧಾನಸಭಾ ಕ್ಷೇತ್ರದ ಕುಂದಲಹಳ್ಳಿಯಲ್ಲಿ ೨೦೧೮ರ ಜನವರಿ ೬ರಂದು ಉದ್ಘಾಟನೆಗೊಂಡಿದೆ.

ಕೆರೆಗಳ ಅಭಿವೃದ್ಧಿ

ಕೈಕೊಂಡರಹಳ್ಳಿ ಕೆರೆ, ಅಂಬಲೀಪುರ ಕೆರೆ, ಹರಳೂರು ಕೆರೆ, ಕಸವನಹಳ್ಳಿ ಕೆರೆ, ದೊಡ್ಡಕನ್ನಲ್ಲಿ ಕೆರೆ, ಮುನ್ನೆಕೊಳಾಲು ಕೆರೆ, ಚಿನ್ನಪ್ಪನಹಳ್ಳಿ ಕೆರೆ, ದೊಡ್ಡನೆಕ್ಕುಂದಿ ಕೆರೆ, ಕುಂದಲಹಳ್ಳಿ ಕೆರೆ ಹಾಗೂ ಶೀಲವಂತನ ಕೆರೆಗಳ ಅಭಿವೃದ್ಧಿಯಾಗಿದೆ, ಸಿದ್ಧಾಪುರ ಕೆರೆ, ಪಣತ್ತೂರು ಕೆರೆ, ಹೂಡಿ ಕೆರೆ, ದೇವರಬಿಸನಹಳ್ಳಿ ಕೆರೆ, ಗರುಡಾಚಾರ್‌ಪಾಳ್ಯ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿನ ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳಿಸಿ ತಂತಿಬೇಲಿ ಕಾಂಪೌಂಡ್ ನಿರ್ಮಿಸಲಾಗಿದೆ. ಹೂಡಿ ಕೆರೆ, ಸಾದರಮಂಗಲ ಕೆರೆ ಹಾಗೂ ಭೋಗನಹಳ್ಳಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ. ಉಳಿದ ಕೆರೆಗಳನ್ನು ಸಹ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು.

130ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣ

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದನ್ನು ಅರಿತು ಸುಮಾರು ೧೩೦ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ಸರ್ಕಾರ ಮತ್ತು ಪಿ.ಪಿ.ಪಿ ಮಾದರಿಯಲ್ಲಿ ನಿರ್ಮಿಸಿ ಕೊಠಡಿಗಳ ಸಮಸ್ಯೆಯನ್ನು ಪರಿಹರಿಸಲಾಗಿದೆ.

ಆಂಗ್ಲ ಮಾಧ್ಯಮ ತರಗತಿಗಳು

ಕ್ಷೇತ್ರದಲ್ಲಿನ ಬಹುತೇಕ ಎಲ್ಲಾ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗಿದೆ.

ಸಾಧನೆಗಳು ೨೦೧೩-೧೮

  • ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು - ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು ಮಹದೇವಪುರ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳಿಂದ ಸಾವಿರಾರು ಜನ ಪ್ರಯೋಜನ ಪಡೆದಿದ್ದಾರೆ. ಸಾಧನೆಗಳು ೨೦೧೩-೧೮… Continue Reading
  • ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… - ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… ಅಡುಗೆ ಅನಿಲ ವಿತರಣೆ ಸೂಲಿಕುಂಟೆ ಗ್ರಾಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ವಿತರಣೆ. ಆರೋಗ್ಯ… Continue Reading
  • ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… - ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… ಆರೋಗ್ಯ ವಿಮೆ ದೊಡ್ಡನೆಕ್ಕುಂದಿ ವಾರ್ಡಿನ ಸರ್ಕಾರಿ ಶಾಲೆಯ ಸುಮಾರು ೯೫೩ ಶಾಲಾ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಆರೋಗ್ಯ ವಿಮೆ… Continue Reading
  • ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… - ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್‌ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ… Continue Reading
  • ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… - ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… ಶಾಂತಿಯುತ ಸಹಬಾಳ್ವೆಯ ಮಹದೇವಪುರ ಬೆಂಗಳೂರು ನಗರದಲ್ಲಿ ಅಪರಾಧದ ಪ್ರಮಾಣ ಹೆಚ್ಚಿದ್ದರೂ ಮಹದೇವಪುರ ಕ್ಷೇತ್ರದಲ್ಲಿ ಅಪರಾಧ ಪ್ರಮಾಣ ಕಡಿಮೆ ಇದ್ದು ಎಲ್ಲಾ ಧರ್ಮಗಳ… Continue Reading
  • ನೀರು, ಶೌಚಾಲಯ, ಕೊಳವೆ ಬಾವಿ… - ನೀರು, ಶೌಚಾಲಯ, ಕೊಳವೆ ಬಾವಿ… ಕುಡಿಯುವ ನೀರು, ಶೌಚಾಲಯ ಹೂವೈ ಸಾಫ್ಟ್‌ವೇರ್ ಸಂಸ್ಥೆಯ ಸಹಯೋಗದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಶಾಸಕರ ನಿಧಿ ಹಾಗೂ ಸಂಸ್ಥೆಯ ತಲಾ ನಾಲ್ಕು ಲಕ್ಷ… Continue Reading
  • ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… - ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಲನಾಯಕನಹಳ್ಳಿ, ಕೊಡತಿ, ಮಾರತ್ತಹಳ್ಳಿ, ಮಂಡೂರು, ಬಿದರಹಳ್ಳಿ ಹಾಗೂ ಕಣ್ಣೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಕಟ್ಟಡ… Continue Reading
  • ವಸತಿ, ಬಸ್ ತಂಗುದಾಣ, ಮೇಲು ಸೇತುವೆ… - ವಸತಿ, ಬಸ್ ತಂಗುದಾಣ, ಮೇಲು ಸೇತುವೆ… ವಸತಿ ಸೌಕರ್ಯ ೯೪(ಸಿ) ಮತ್ತು ೯೪ (ಸಿಸಿ) ಅಡಿಯಲ್ಲಿ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ನೋಂದಣಿ ಮಾಡಿಸುವ… Continue Reading
  • ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು - ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು ಪಾದಚಾರಿ ಮೇಲು ಸೇತುವೆಗಳು ಪಾದಚಾರಿಗಳ ಹಿತದೃಷ್ಟಿಯಿಂದ ಮಾರತ್ತಹಳ್ಳಿ ಬ್ರಿಡ್ಜ್ ಬಳಿ, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ ಇಕೋ ಸ್ಪೇಸ್… Continue Reading
  • ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… - ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿ… Continue Reading

Sharing is caring!