ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮ್ಮಿಶ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ತಾರತಮ್ಯವಿಲ್ಲದೆ ಜಾರಿಯಾಗಿವೆ

ಮಹದೇವಪುರ. ಕ್ಷೇತ್ರದಲ್ಲಿ ಗ್ರಾಮೀಣ ಸೊಗಡಿನ ಹಳ್ಳಿಗಳಿವೆ;  ಆಧುನಿಕತೆಯ ಪ್ರಭಾವದ ನಗರಪ್ರದೇಶಗಳಿವೆ; ಹಳ್ಳಿಯೋ ನಗರವೋ ಎಂದು ಗೊತ್ತಾಗದ ಅರೆಪಟ್ಟಣಗಳಿವೆ. ಇಲ್ಲಿ ಸ್ಥಳೀಯ ಉದ್ದಿಮೆಗಳೂ ಹರಡಿವೆ; ನೂರಾರು ವಿಶ್ವಖ್ಯಾತಿಯ ಕಂಪೆನಿಗಳೂ ಸ್ಥಾಪನೆಯಾಗಿವೆ. ತಳಮಟ್ಟದ ಕಾರ್ಮಿಕರಿಂದ ಹಿಡಿದು ಬಹುರಾಷ್ಟ್ರೀಯ ಸ್ತರದ ಉದ್ಯೋಗಿಗಳು ಕ್ಷೇತ್ರದೆಲ್ಲೆಡೆ ಇದ್ದಾರೆ. ಭಾಷೆ, ಪಂಥ, ಆಚರಣೆ, ಧಾರ್ಮಿಕ ವೈವಿಧ್ಯ – ಹೌದು. ಮಹದೇವಪುರವೂ ಭಾರತದಂತೆಯೇ ವೈವಿಧ್ಯಗಳ ಆಗರ. ಅನಿವಾಸಿ ಭಾರತೀಯರೂ ಇಲ್ಲೇ ಹೆಚ್ಚು ಎಂದಮೇಲೆ ಈ ಕ್ಷೇತ್ರದ ವ್ಯಾಪ್ತಿಯನ್ನು ಊಹಿಸಿಕೊಳ್ಳಿ! ಈಶ್ವರನ ಹೆಸರು ಹೊತ್ತ ಈ ಪ್ರದೇಶದಲ್ಲಿ ನಿಜಕ್ಕೂ ಕಾಯಕವೇ ಕೈಲಾಸ!

ಇಂಥ ವೈವಿಧ್ಯಮಯ ಕ್ಷೇತ್ರವು ನಾಲ್ಕು ವರ್ಷಗಳ ಹಿಂದೆ ಬಹುಮುಖೀ ಅನುಭವದ ನೆಲೆಯಲ್ಲಿ ಬೆಳೆದ ಅರವಿಂದ ಲಿಂಬಾವಳಿಯವರನ್ನು ಆಯ್ಕೆ ಮಾಡಿದ್ದು ಸಹಜವೇ ಆಗಿತ್ತು. ತನ್ನ ಆಯ್ಕೆಗೆ ನ್ಯಾಯ ಒದಗಿಸಲು ಅರವಿಂದ ಲಿಂಬಾವಳಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇವೆಲ್ಲ ಕೆಲಸಗಳನ್ನೂ ಪಾರದರ್ಶಕ ವ್ಯವಸ್ಥೆಯ ಮೂಲಕ, ಗುಣಮಟ್ಟಕ್ಕೆ ರಾಜಿ ಇಲ್ಲದಂತೆ ಪೂರ್ಣಗೊಳಿಸಲಾಗಿದೆ ಎಂಬುದು ಅರವಿಂದ ಲಿಂಬಾವಳಿಯವರ ವಿನಮ್ರ ಹೇಳಿಕೆ.

ರಸ್ತೆಗಳ ಡಾಂಬರೀಕರಣ, ಕಾಂಕ್ರಿಟೀಕರಣ, ಸೇತುವೆ ನಿರ್ಮಾಣ, ಚರಂಡಿ – ಒಳಚರಂಡಿಗಳ ದುರಸ್ತಿ ಮತ್ತು ನಿರ್ಮಾಣ, ಪಾದಚಾರಿ ಮಾರ್ಗಗಳ ನಿರ್ಮಾಣ, ಬೀದಿ ದೀಪ, ಕೊಳವೆ ಬಾವಿಗಳು,  ಕೆರೆ ಅಭಿವೃದ್ಧಿ, ಸಮುದಾಯ ಭವನಗಳು, ಶೌಚಾಲಯಗಳು, ಗ್ರಾಮಗಳ ರಸ್ತೆಗಳು, ಹೈ ಮಾಸ್ಟ್‌ಗಳು, ಸ್ತ್ರೀ ಶಕ್ತಿ ಸಮುದಾಯ ಭವನಗಳು, ಶಾಲಾ ಕೊಠಡಿಗಳು, – ಹೀಗೆ ಸರ್ವಾಂಗೀಣ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸಮಾಜದ ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳಿಂದ ಹಿಡಿದು ಸರ್ವಸ್ಪರ್ಶಿಯಾಗಿ ನಡೆದ ಈ ಕಾಮಗಾರಿಗಳೇ ಅರವಿಂದ ಲಿಂಬಾವಳಿಯವರ ಶಾಸಕತ್ವದ ಹೊಣೆಗಾರಿಕೆಯ ಯಶಸ್ವೀ ನಿರ್ವಹಣೆಗೆ ನಿದರ್ಶನ. ಹೀಗೆ ಪೂರ್ಣಗೊಂಡ ಹಲವು ಕಾಮಗಾರಿಗಳು ಮತ್ತು ವಿವಿಧ ಹಂತಗಳಲ್ಲಿ ಮುಂದುವರಿದಿರುವ ಕಾಮಗಾರಿಗಳೇ ಅರವಿಂದ ಲಿಂಬಾವಳಿಯವರಿಗೆ ಖುಷಿ ತಂದ ಕೆಲಸ. ಕಾರ್ಯಕರ್ತರು ಮತ್ತು ಸಾರ್ವಜನಿಕರ ಪರಿವೀಕ್ಷಣೆ, ಅಧಿಕಾರಿಗಳ ಬೆಂಬಲದಿಂದ ಈ ಎಲ್ಲ ಕಾಮಗಾರಿಗಳೂ ಸಕಾಲದಲ್ಲೇ ಪೂರ್ಣಗೊಂಡ ಸಮಾಧಾನವೂ ಅರವಿಂದ ಲಿಂಬಾವಳಿಯವರಿಗೆ ಇದೆ.

ಮೊದಲು ಹಳ್ಳ-ದಿಣ್ಣೆಗಳಿಂದ ಕೂಡಿದ ಕಳಪೆ ರಸ್ತೆಗಳಿದ್ದ ಮಹದೇವಪುರದಲ್ಲಿ ಈಗ ಡಾಂಬರು ರಸ್ತೆಗಳದ್ದೇ ದರ್ಬಾರು. ನಿರ್ವಹಣೆ ಇಲ್ಲದೇ ಬರಡಾಗಿದ್ದ ಪ್ರದೇಶಗಳಲ್ಲಿ ಸಾರ್ವಜನಿಕ ಉದ್ಯಾನಗಳಿವೆ. ಹೂಳು ತುಂಬಿ ಹಾಳಾಗಿದ್ದ ಚರಂಡಿಗಳೀಗ ದುರಸ್ತಿಗೊಂಡಿವೆ. ಸಾರ್ವಜನಿಕ ನೈರ್ಮಲ್ಯ ಎದ್ದು ಕಾಣುತ್ತಿದೆ.

ಮಹದೇವಪುರದ ಸಾಮಾಜಿಕ ಸ್ವಾಸ್ಥ್ಯವೂ ಮಾದರಿ ಪ್ರಮಾಣದಲ್ಲಿ ಸುಧಾರಿಸಿದೆ.  ಇಡೀ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಂದೂ ಜಾತಿ ವಿದ್ವೇಷದ ಪ್ರಕರಣ ದಾಖಲಾಗಿಲ್ಲ. ಅಪರಾಧ ಪ್ರಮಾಣವೂ ಕುಗ್ಗಿರುವುದಕ್ಕೆ ಅಂಕಿ – ಅಂಶಗಳೇ ನಿದರ್ಶನ.  ಒಟ್ಟಾರೆ ಮಹದೇವಪುರವೀಗ ಹೊಸ ಸೃಷ್ಟಿಯ ಬೀಡು ಎನ್ನಬಹುದು.

ಇದು ಅರವಿಂದ ಲಿಂಬಾವಳಿಯವರು ಹಟ ಹಿಡಿದು ಜನಪರ ಕೆಲಸ ಮಾಡಿಸಿದ್ದಕ್ಕೆ ಒಂದು ಪುಟ್ಟ ನಿದರ್ಶನ. ಮಹದೇವಪುರದ ಎಲ್ಲ ವಾರ್ಡ್‌ಗಳಲ್ಲಿ ಇಂಥ ಅಸಂಖ್ಯ ಕಾಮಗಾರಿಗಳಿಗೆ ಜೀವ ತಂದು ಸಮರ್ಪಕವಾಗಿ ಪೂರ್ಣಗೊಳಿಸಲಾಗಿದೆ.

ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿನ ಹಲವಾರು ಸಂಘ ಸಂಸ್ಥೆಗಳು ನೀಡಿದ ಸಹಕಾರವೂ ಮುಖ್ಯವಾಗಿತ್ತು. ಹಲವು ಸಾರ್ವಜನಿಕರು, ಅಧಿಕಾರಿಗಳು ಮತ್ತು ಕಾರ್ಯಕರ್ತರು ನೀಡಿದ ಸಹಕಾರ, ಭಾಗಿತ್ವ – ಎಲ್ಲವನ್ನೂ ಅರವಿಂದ ಲಿಂಬಾವಳಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಎಲ್ಲರ ಅಭಿಮಾನ, ಪ್ರೀತಿ ಮತ್ತು ಕ್ರಿಯಾಶೀಲ ಬೆಂಬಲ – ಇವೇ ತನ್ನ ಸಾಧನೆಯ ಹಿಂದಿನ ಗುಟ್ಟು ಎಂದು ಅರವಿಂದ ಲಿಂಬಾವಳಿ ಹೃತ್ಪೂರ್ವಕವಾಗಿ ತಿಳಿಸುತ್ತಾರೆ

ಸಾಧನೆಗಳು ೨೦೦೮-೧೩

  • ಸಾಧನೆಯ ಹಾದಿಯಲ್ಲಿ ಶಿಕ್ಷಣ ಕ್ಷೇತ್ರ - ಕರ್ನಾಟಕ ರಾಜ್ಯವು ಹಲವು ದಶಕಗಳಿಂದಲೂ ದೇಶದಲ್ಲೇ ಮುಂಚೂಣಿಯಲ್ಲಿರುವ ಉನ್ನತ ಶಿಕ್ಷಣ ಕೇಂದ್ರವಾಗಿದೆ. ಅದರಲ್ಲೂ ಎಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ನೂರಾರು ಕಾಲೇಜುಗಳು ಸ್ಥಾಪನೆಗೊಂಡಿವೆ. ೨೦೦೮ರ ಹೊತ್ತಿಗೆ ಶಿಕ್ಷಣ ರಂಗವು ಹಲವು… Continue Reading
  • ಶಿಬಿರ,ಮೇಳ,ಉತ್ಸವಗಳ ಸರಮಾಲೆ - ಮಹದೇವಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹತ್ತು ಹಲವು ಮೇಳಗಳು ನಡೆದಿವೆ. ನಾಡಿನ ಮಹಾಪುರುಷರ ಜಯಂತಿಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗಿದೆ.ಯುಗಾದಿ ಹಬ್ಬವೇ ಮಹದೇವಪುರ ಮೇಳವಾಗಿ ರೂಪಾಂತರಗೊಂಡು ಸಾವಿರಾರು ಕುಟುಂಬಗಳನ್ನು… Continue Reading
  • ಧಾರ್ಮಿಕತೆ, ಸಾಮರಸ್ಯದ ತಂಗಾಳಿ - ಸ್ವಾಮಿ ವಿವೇಕಾನಂದ, ವೇಮನ, ಕೆಂಪೇಗೌಡ, ಬಸವೇಶ್ವರ, ಕನಕದಾಸರು, ಡಾ|| ಬಿ.ಆರ್. ಆಂಬೇಡ್ಕರ್, ಬಾಬು ಜಗಜೀವನರಾಂ, ದ್ರೌಪದಮ್ಮ, ಸಿದ್ಧರಾಮೇಶ್ವರರು, ಸ್ವಾಮಿ ಯೋಗಿನಾರಾಯಣ, ಸೋದರಿ ನಿವೇದಿತಾ, ಪಂ| ದೀನದಯಾಳ ಉಪಾಧ್ಯಾಯ… Continue Reading
  • ಕಾದಿದ್ದರು ೩೦ ವರ್ಷ; ಈಗ ಮೂಡಿತು ಹರ್ಷ! - ಎಲ್ಲೆಲ್ಲೂ ಶಾಂತಿ-ಸೌಹಾರ್ದ; ಅಪರಾಧ ಪ್ರಮಾಣ ಇಳಿಕೆ: ಬೆಂಗಳೂರು ನಗರದ ಸರಾಸರಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅಪರಾಧಪ್ರಮಾಣವು ಏನಿಲ್ಲೆಂದರೂ ಶೇ. ೨೫ರಷ್ಟು ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ… Continue Reading
  • ಸಾಮಾಜಿಕ ಅಭ್ಯುದಯದ ದೃಢ ಹೆಜ್ಜೆಗಳು - ಯುವಕರಿಗೆ ಕೆಲಸ ದೊರಕಿಸಲು ಉದ್ಯೋಗ ಮೇಳ, ಸಾರ್ವಜನಿಕ ಬಳಕೆಗಾಗಿ ಹಲವೆಡೆ ಸಮುದಾಯ ಭವನಗಳು, ಸುರಕ್ಷತೆಗಾಗಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಸುಸಜ್ಜಿತ ವಿದ್ಯುತ್ ಚಿತಾಗಾರ, ದುರ್ಬಲರು, ಅಶಿಕ್ಷಿತರಿಗೆ… Continue Reading
  • ಅಪಾರ್ಟ್ಮೆಂಟ್ ನಿವಾಸಿಗಳ ಬವಣೆ ಪರಿಹಾರ - ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳಿವೆ. ಇಲ್ಲಿನ ನಿವಾಸಿಗಳು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಶನ್ ಸ್ಥಾಪಿಸಿಕೊಂಡಿದ್ದಾರೆ. ಅರವಿಂದ ಲಿಂಬಾವಳಿಯವರ ಬಳಿ ಅವರು ಹಲವು ಸಮಸ್ಯೆಗಳ ಬಗ್ಗೆ ನಿವೇದಿಸಿಕೊಂಡಿದ್ದರು. ಅವುಗಳಲ್ಲಿ… Continue Reading
  • ಇಪಿಐಪಿ ಅಭಿವೃದ್ಧಿಯ ಯಶೋಗಾಥೆ - ವೈಟ್‌ಫೀಲ್ಡ್‌ನ ಇಪಿಐಪಿ ವಲಯದಲ್ಲಿ ರಸ್ತೆ, ಮಳೆ ನೀರು ಕೊಯ್ಲು, ಕಾಲುದಾರಿ ಸುಧಾರಣೆ ಮತ್ತು ಡಾಂಬರೀಕರಣದ ಕೆಲಸಗಳು ಭರದಿಂದ ಸಾಗಿವೆ. ಇಲ್ಲಿನ ನಾಲ್ಕು ಸಾಲಿನ (೪ ಲೇನ್) ೫.೫… Continue Reading
  • ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ - ಕಳೆದ ನಾಲ್ಕು ವರ್ಷಗಳಲ್ಲಿ ಮಹದೇವಪುರದ ಸಾರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ರೂಪಾಂತರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮಹದೇವಪುರಕ್ಕೆ ಪ್ರತಿ ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ (ಸಂಖ್ಯೆ ೩೩೫ಇ) ಸೌಕರ್ಯವನ್ನು… Continue Reading
  • ಆರೋಗ್ಯಕ್ಕೆ ಆದ್ಯತೆ - ಈಗ ಆರೋಗ್ಯ ಸಚಿವರಾಗಿರುವ ಅರವಿಂದ ಲಿಂಬಾವಳಿಯವರು ಮಹದೇವಪುರದ ಶಾಸಕರಾದ ಕ್ಷಣದಿಂದಲೂ ಸ್ವಾಸ್ಥ್ಯವನ್ನು ಅತ್ಯಂತ ಜತನದಿಂದ ನೋಡಿಕೊಂಡಿದ್ದಾರೆ. ಎರಡು ಮೆಗಾ ಹೆಲ್ತ್ ಕ್ಯಾಂಪ್‌ಗಳೂ ಸೇರಿದಂತೆ ಆರು ವೈದ್ಯಕೀಯ ಶಿಬಿರಗಳು… Continue Reading
  • ಅಕ್ಷರ ಕ್ರಾಂತಿಯ ಹೊಸ ಅಧ್ಯಾಯ - ಅರವಿಂದ ಲಿಂಬಾವಳಿ ಶಿಕ್ಷಣ ರಂಗದಲ್ಲೇ ಹೋರಾಟ ಮಾಡುತ್ತಲೇ ಬೆಳೆದ ಯುವ ನಾಯಕರು. ಶಾಸಕರಾದ ಮೇಲೆ ಮಹದೇವಪುರದಲ್ಲಿ ಶಿಕ್ಷಣ ಕ್ರಾಂತಿಗೆ ಅವರು ಮಾಡಿದ ಯತ್ನಗಳನ್ನು ಕಣ್ಣಾರೆ ಕಾಣಬಹುದು. ವರ್ತೂರು… Continue Reading