ಇಂದು ತನ್ನ 75ನೇ ಹುಟ್ಟು ಹಬ್ಬ ಆಚರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಶ್ರೀ ಬಿ.ಎಸ್. ಯಡ್ಯೂರಪ್ಪ ಅವರನ್ನು ನಾನು ಭೇಟಿ ಮಾಡಿ ಶುಭ ಕೋರಿದೆ.
ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಧೀಮಂತ ರೈತನಾಯಕ ಶ್ರೀ ಬಿ.ಎಸ್. ಯಡ್ಯೂರಪ್ಪ ಅವರ ಕನಸು ನನಸಾಗಲಿ ಹಾಗೂ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಮೂಡಿಬರಲಿ, ಜೊತೆಗೆ ದೇವರು ಅವರಿಗೆ ಆಯುರಾರೋಗ್ಯ ನೀಡಲಿ ಎಂದು ಅವರಿಗೆ ಈ ಸಂದರ್ಭದಲ್ಲಿ ಹಾರೈಸಿದೆ.