ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು

ಪಾದಚಾರಿ ಮೇಲು ಸೇತುವೆಗಳು

ಪಾದಚಾರಿಗಳ ಹಿತದೃಷ್ಟಿಯಿಂದ ಮಾರತ್ತಹಳ್ಳಿ ಬ್ರಿಡ್ಜ್ ಬಳಿ, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ ಇಕೋ ಸ್ಪೇಸ್ ಬಳಿ ಪಾದಚಾರಿ ಮೇಲು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಹೊರ ವರ್ತುಲ ರಸ್ತೆ ಮತ್ತು ಇತರೆ ರಸ್ತೆಗಳ ಅಗತ್ಯ ಸ್ಥಳಗಳಲ್ಲಿ ಪಾದಚಾರಿಗಳ ಮೇಲು ಸೇತುವೆ ನಿರ್ಮಾಣ ಮಾಡಲು ಪ್ರಸ್ತಾವನೆ ಪ್ರಗತಿಯಲ್ಲಿದೆ.

 

ರೈಲ್ವೆ ಓವರ್ ಬ್ರಿಡ್ಜ್

ಕಾಡುಗೋಡಿ ಮತ್ತು ಹೂಡಿಯಲ್ಲಿ ಆರ್.ಓ.ಬಿ (ರೈಲ್ವೆ ಓವರ್ ಬ್ರಿಡ್ಜ್) ಮತ್ತು ಸರ್ಜಾಪುರ ರಸ್ತೆಯಲ್ಲಿ ರೈಲ್ವೇ ಮೇಲು ಸೇತುವೆ ನಿರ್ಮಾಣ ಮಾಡಿ ಸಂಚಾರವನ್ನು ಸುಗಮಗೊಳಿಸಲಾಗಿದೆ, ಕಾಡುಗೋಡಿಯಲ್ಲಿ ರೈಲ್ವೇ ಪಾದಚಾರಿ ಮೇಲು ಸೇತುವೆ ನಿರ್ಮಾಣ ಮಾಡಲಾಗಿದೆ.

ಚಿಕ್ಕಗೇಟ್ ರೇಲ್ವೆ ಅಂಡರ್ ಪಾಸ್ ಕಾಮಗಾರಿ ಆರಂಭವಾಗಿದೆ.

ಹಾಗೆಯೇ ಚಿನ್ನಪ್ಪನಹಳ್ಳಿ ಮತ್ತು ಕಾಡುಗೋಡಿಗಳಲ್ಲಿ – ಒಟ್ಟು ೨ ಕಡೆಗಳಲ್ಲಿ ರೇಲ್ವೆ ಓವರ್ ಬ್ರಿಜ್ ಮಂಜೂರಾಗಿದ್ದು ಡಿಪಿಆರ್ ಪ್ರಗತಿಯಲ್ಲಿದೆ.

ಪಣತ್ತೂರಿನಲ್ಲಿ ಸಿಡಿಪಿ ರಸ್ತೆಯಲ್ಲಿ ರೇಲ್ವೆ ಓವರ್ ಬ್ರಿಜ್ ನಿರ್ಮಿಸಲಾಗುವುದು.

ಸಾಧನೆಗಳು ೨೦೧೮ – 2