ಕಸವನಹಳ್ಳಿಯ ಜೈಲು ರಸ್ತೆ ಬಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಮಹಡಿಯ ಕಟ್ಟಡ ಕುಸಿದು ಬಿದ್ದ ಸುದ್ದಿ ತಿಳಿಯುತ್ತಲೇ ಧಾವಿಸಿ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದೆ. ಇದೇ ಸಂದರ್ಭದಲ್ಲಿ ದುರಂತದ ಸ್ಥಳದ ಪರಿಶೀಲನೆ ಹಾಗೂ ವಿಪತ್ತಿನ ಮೂಲವನ್ನು ಗುರುತಿಸಲು ಮೇಲ್ವಿಚಾರಣೆ ನಡೆಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಶ್ರೀ ಎಂ. ಎನ್ ರೆಡ್ಡಿ (ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಉನ್ನತ ಅಧಿಕಾರಿಗಳು), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ ಡಿ ಆರ್ ಎಫ಼್), ತ್ವರಿತ ಪ್ರತಿಕ್ರಿಯೆ ಪಡೆ, ಪೋಲಿಸ್ ಸಿಬ್ಬಂದಿ, ಸಂಚಾರ ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಆರೋಗ್ಯ ಇಲಾಖೆ ಮತ್ತು ರಕ್ಷಣಾ ಕಾರ್ಯದಲ್ಲಿ ಸಹಾಯ ಮತ್ತು ಸೇವೆ ಒದಗಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.