ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಳಿಶಿವಾಳೆ, ಮರಗೊಂಡನಹಳ್ಳಿ, ಕಿಥಗ್ನೂರಿನಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಮಾನ್ಯ ಪಿ.ಸಿ.ಮೋಹನ್ ಅವರೊಂದಿಗೆ ರ‌್ಯಾಲಿಯಲ್ಲಿ ಭಾಗವಹಿಸಿ ಪ್ರಚಾರ ಮಾಡಲಾಯಿತು. ಕೇಂದ್ರ ಸರಕಾರದ ಅನುದಾನವನ್ನು ಅತೀ ಹೆಚ್ಚು ಬಳಸಿಕೊಂಡು ಸ್ವಕ್ಷೇತ್ರವನ್ನು ಅಭಿವೃದ್ಧಿ ಮಾಡಿದವರಲ್ಲಿ ಮಾನ್ಯ ಸಂಸದರಾದ ಮೋಹನ್ ಅವರು ರಾಜ್ಯದಲ್ಲೇ ಮೊದಲಿಗರು. ನಮ್ಮ ಲೋಕಸಭಾ ಕ್ಷೇತ್ರಕ್ಕೆ ಇಂತಹ ಅಭಿವೃದ್ಧಿಪರ ನಾಯಕರು ಬೇಕು. ಇವರನ್ನು ಮತ್ತೊಮ್ಮೆ ಗೆಲ್ಲಿಸುವ ಹೊಣೆ ಎಲ್ಲರದ್ದಾಗಿದೆ ಎಂದು ತಿಳಿಸಿದೆ.