ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ…

ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಹಾಲನಾಯಕನಹಳ್ಳಿ, ಕೊಡತಿ, ಮಾರತ್ತಹಳ್ಳಿ, ಮಂಡೂರು, ಬಿದರಹಳ್ಳಿ ಹಾಗೂ ಕಣ್ಣೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಕಟ್ಟಡ ಕಾಮಗಾರಿಗೆ ನಾನು ಆರೋಗ್ಯ ಸಚಿವನಾಗಿದ್ದಾಗಲೇ ಹಣ ಬಿಡುಗಡೆ ಮಾಡಲಾಗಿತ್ತು. ಬಿದರಹಳ್ಳಿ ಹೊರತುಪಡಿಸಿ ಉಳಿದೆಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ, ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕ್ಷೇತ್ರದಲ್ಲಿನ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ೨೪/೭ ಸೇವೆಯನ್ನು ಒದಗಿಸಲಾಗಿದೆ.

ಹಗದೂರು ಹಾಗು ಗರುಡಾಚಾರ್ ಪಾಳ್ಯದಲ್ಲಿ National Urban Health Mission ಅಡಿಯಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಸಂಸದರ ಆದರ್ಶ ಗ್ರಾಮವಾಗಿ ಯರ್ರಪ್ಪನಹಳ್ಳಿ ಅಭಿವೃದ್ಧಿ

ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್ ಅವರ ಸಂಸದ್ ಅದರ್ಶ ಗ್ರಾಮವಾಗಿ ಯರ್ರಪ್ಪನಹಳ್ಳಿಯನ್ನು ಆಯ್ಕೆ ಮಾಡಿದ್ದು, ಸದರಿ ಗ್ರಾಮದಲ್ಲಿ ಅಗತ್ಯ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ.

ಈ ಬಾರಿ ಕಾಟಂನಲ್ಲೂರು ಗ್ರಾಮವನ್ನು ಸಂಸದರ ಆದರ್ಶ ಗ್ರಾಮದಡಿ ಆಯ್ಕೆ ಮಾಡಿಕೊಂಡಿದ್ದು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

ಸ್ವಚ್ಛಭಾರತ ಅಭಿಯಾನ

ಸ್ವಚ್ಛಭಾರತ ಅಭಿಯಾನದಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ವಿವಿಧ ಸಂಸ್ಥೆಗಳು ಹಾಗೂ ಕಂಪನಿಗಳ ವತಿಯಿಂದ ಎಲ್ಲಾ ಶಾಲೆಗಳಿಗೆ ಶೌಚಾಲಯ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.

ಸಾಧನೆಗಳು ೨೦೧೮ – 2