ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್…

ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ

ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್‌ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಹೂಡಿಯಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿ ಕಾರ್ಯಾರಂಭಗೊಂಡಿದ್ದು ವಿಶೇಷವಾಗಿ ಐ.ಟಿ. ರಂಗದ ಸಂಸ್ಥೆಗಳ ಉದ್ಯೋಗಿಗಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಕಾಡುಗೋಡಿಯಲ್ಲಿ ಬಯಲು ಜಿಮ್

ನ್ಯೂ ಹಾರಿಜನ್ ಕಾಲೇಜಿನ ಸಂಸ್ಥೆಯ ಸಹಕಾರದಲ್ಲಿ ಕಾಡುಗೋಡಿಯಲ್ಲಿ ಬಯಲು ಜಿಮ್ ನಿರ್ಮಿಸಲಾಗಿದ್ದು, ದಿನವೂ ಸಾವಿರಾರು ನಾಗರಿಕರು ಅದನ್ನು ಉಪಯೋಗಿಸುತ್ತಿದ್ದಾರೆ.

ಗ್ಯಾಸ್ ಪೈಪ್-ಲೈನ್ ಕಾಮಗಾರಿ ಆರಂಭ…

ಕೇಂದ್ರ ಸರ್ಕಾರದ ಯೋಜನೆಯಡಿ ಎಲ್ಲಾ ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಲು ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಗೆ ಚಾಲನೆ.

ಪ್ರಗತಿ ಪಥದಲ್ಲಿ ಮೆಟ್ರೋ…

ಬೈಯ್ಯಪ್ಪನಹಳ್ಳಿಯಿಂದ ಐ.ಟಿ.ಪಿ.ಎಲ್ ಮಾರ್ಗ ಕಾಡುಗೋಡಿ ವರೆಗಿನ ೨ನೇ ಹಂತದ ಮೆಟ್ರೋ ಕಾಮಗಾರಿಯು ಪ್ರಗತಿಯಲ್ಲಿದೆ ಹಾಗೂ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಸೇವೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೆಟ್ರೋ ಸೇವೆಯನ್ನು ರಾ.ಹೆ.4 ರಿಂದ ಕಾಟಂನಲ್ಲೂರು ವರೆಗೆ ವಿಸ್ತರಿಸಲು ಉದ್ದೇಶಿಸಿದೆ.

 

ಸಾಧನೆಗಳು ೨೦೧೮ – 2