ನೀರು, ಶೌಚಾಲಯ, ಕೊಳವೆ ಬಾವಿ…

ಕುಡಿಯುವ ನೀರು, ಶೌಚಾಲಯ

ಹೂವೈ ಸಾಫ್ಟ್‌ವೇರ್ ಸಂಸ್ಥೆಯ ಸಹಯೋಗದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಶಾಸಕರ ನಿಧಿ ಹಾಗೂ ಸಂಸ್ಥೆಯ ತಲಾ ನಾಲ್ಕು ಲಕ್ಷ ರೂಗಳ ವೆಚ್ಚದಲ್ಲಿ ಪಣತ್ತೂರು, ಮುಳ್ಳೂರು, ನಲ್ಲೂರಹಳ್ಳಿ ಮತ್ತು ಸೀತಾರಾಮಪಾಳ್ಯಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪೂರ್ಣಗೊಳಿಸಲಾಗಿದೆ. ಈ ಮಾದರಿಯಲ್ಲೇ ಈ ವರ್ಷದಲ್ಲಿ ಅದೂರು, ಗುಂಜೂರುಪಾಳ್ಯ, ವಿಜಯನಗರ, ಇಮ್ಮಡಿಹಳ್ಳಿ, ದೊಡ್ಡನೆಕ್ಕುಂದಿ ಕಾಲೋನಿ ಮತ್ತು ಕಾಡುಗೋಡಿಯ ಪಟಾಲಮ್ಮ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಆರಂಭಗೊಳ್ಳಲಿವೆ. ಹಾಗೆಯೇ ಹತ್ತು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಈ ಸಂಸ್ಥೆಯ ಸಹಕಾರಿಂದ ನಿರ್ಮಿಸಲಾಗಿದೆ ಹಾಗೂ ೨೫೦ ಕಂಪ್ಯೂಟರ್‌ಗಳನ್ನು ಶಾಲೆಗಳಿಗೆ ವಿತರಿಸಲಾಗಿದೆ.

ಗ್ರಾಮಗಳಿಗೆ ಕಾವೇರಿ ನೀರಿನ ಮತ್ತು ಒಳ ಚರಂಡಿ ಸೌಲಭ್ಯ

ಬಿ.ಬಿ.ಎಂ.ಪಿ ಗೆ ಹೊಸದಾಗಿ ಸೇರ್ಪಡೆಯಾದ ೧೧೦ ಗ್ರಾಮಗಳ ಪೈಕಿ ಮಹದೇವಪುರದ ೩೧ ಗ್ರಾಮಗಳಿದ್ದು ಅವುಗಳಿಗೆ ಕಾವೇರಿ ನೀರಿನ ಸೌಲಭ್ಯ ಕಲ್ಪಿಸಲು ಕೇಂದ್ರ ನಗರಾಭಿವೃದ್ಧಿ ಸಚಿವರನ್ನು, ಸಂಸದರನ್ನು ಭೇಟಿ ಮಾಡಿ ಪ್ರಸ್ತಾವನೆಯನ್ನು ಪ್ರಥಮ ಅಧ್ಯತೆಯ ಮೇಲೆ ಅನುಮೋದನೆ ಮಾಡಿಸಿ, ಸದರಿ ಗ್ರಾಮಗಳಿಗೆ ಕಾವೇರಿ ನೀರಿನ ಪೈಪ್ ಲೈನ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಹಾಲಿ ಸದರಿ ಗ್ರಾಮಗಳಿಗೆ ಕೊಳವೆ ಬಾವಿಗಳ ಮೂಲಕ ಸಮರ್ಪಕ ನೀರು ಸರಬರಾಜು ಮಾಡಲಾಗುತ್ತಿದೆ.

ಎಲ್ಲಾ ಗ್ರಾಮಗಳಿಗೆ ಕೊಳವೆ ಬಾವಿಗಳು

ಮಹದೇವಪುರ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿರುವ ಎಲ್ಲಾ ಗ್ರಾಮಗಳಿಗೂ ಅಗತ್ಯ ಕೊಳವೆ ಬಾವಿಗಳನ್ನು ಕೊರೆಸಿ ಸಮರ್ಪಕ ನೀರು ಸರಬರಾಜು ಮಾಡಲಾಗುತ್ತಿದೆ.

ಸಾಧನೆಗಳು ೨೦೧೮ – 2