ಸೇಲಂ ಮಾರ್ಗದ ಕಾರ್ಮೆಲ್‌ರಾಂ ರೈಲ್ವೆ ನಿಲ್ದಾಣದ 132ನೇ ಗೇಟ್ ಅನ್ನು ಮಾನ್ಯ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರ ‘ಸಂಸದರ ಪ್ರದೇಶಾಭಿವೃದ್ಧಿ ನಿಧಿ’ಯಿಂದ 13.50 ಲಕ್ಷ ರುಪಾಯಿ ಅನುದಾನದಲ್ಲಿ ವಿಸ್ತರಣೆಗೊಳಿಸಲಾಗಿದ್ದು, ಇಂದು ಲೋಕಾರ್ಪಣೆ ಮಾಡಲಾಯಿತು. ಈ ಲೆವೆಲ್ ಕ್ರಾಸಿಂಗ್‌ನಲ್ಲಿ ವಾಹನ ದಟ್ಟಣೆ ಉಂಟಾಗಿ ಸ್ಥಳೀಯರಿಗೆ ಉಂಟಾಗುತ್ತಿದ್ದ ಸಮಸ್ಯೆ ಅರಿತು ಮಾನ್ಯ ಸಂಸದರ ನೇತೃತ್ವದಲ್ಲಿ ಗೇಟ್ ವಿಸ್ತರಣಾ ಕಾಮಗಾರಿ ನಡೆಸಿ ಎಲ್ಲರಿಗೂ ಅನುಕೂಲ ಮಾಡಿಕೊಡಲಾಗಿದೆ.