ಒಸಿಸಿಐ ರಾಷ್ಟ್ರೀಯ ಅಧ್ಯಕ್ಷನೂ ಆಗಿರುವ ನಾನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದ ‘ಮಹಾರಾಷ್ಟ್ರ ವಡಾರ ಸಮ್ಮೇಳನ’ದಲ್ಲಿ ಭಾಗವಹಿಸಿದ್ದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ರಾಮದಾಸ್ ಅಥವಾಲೆ, ಮಂತ್ರಿಗಳಾದ ಚಂದ್ರಕಾಂತ ಪಾಟೀಲ, ಸುಭಾಷ್ ದೇಶಮುಖ್, ಶಿಂಧೆ ಇತರರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದ ಕೋಟೆಗಳು ನಿರ್ಮಾಣವಾಗಲು ವಡಾರ (ವಡ್ಡರು) ಸಮುದಾಯದ ಕೊಡುಗೆ ಅಪಾರವಾದುದು. ಇವರಿಗೆ ಸೂಕ್ತ ಸ್ಥಾನಮಾನ, ಸೌಲತ್ತು ಕಲ್ಪಿಸಿ, ಸಮಸ್ಯೆಗಳಿಗೆ ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರದಿಂದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಲಾಯಿತು.