ಅರವಿಂದ ಲಿಂಬಾವಳಿ ಶಿಕ್ಷಣ ರಂಗದಲ್ಲೇ ಹೋರಾಟ ಮಾಡುತ್ತಲೇ ಬೆಳೆದ ಯುವ ನಾಯಕರು. ಶಾಸಕರಾದ ಮೇಲೆ ಮಹದೇವಪುರದಲ್ಲಿ ಶಿಕ್ಷಣ ಕ್ರಾಂತಿಗೆ ಅವರು ಮಾಡಿದ ಯತ್ನಗಳನ್ನು ಕಣ್ಣಾರೆ ಕಾಣಬಹುದು.

ವರ್ತೂರು ಮತ್ತು ಕಾಡುಗೋಡಿ – ಒಟ್ಟು ಎರಡು ಪದವಿ ಕಾಲೇಜುಗಳು ಕ್ಷೇತ್ರಕ್ಕೆ ಬಂದಿವೆ. ಬೆಂಗಳೂರಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಎಂದರೆ ಎಸ್ ಜೆ ಪಾಲಿಟೆಕ್ನಿಕ್ ಮಾತ್ರ ಎಂದೇ ಮಾತಿರುವಾಗ ಕಾಡುಗೋಡಿ ವಾರ್ಡಿನ ಚನ್ನಸಂದ್ರ,  ಹಗದೂರು ವಾರ್ಡಿನ ಇಮ್ಮಡಿಹಳ್ಳಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕೂಡಾ ಸ್ಥಾಪನೆಯಾಗಿವೆ. ಎಲ್ಲದಕ್ಕೂ ನಿವೇಶನಗಳೂ ಇವೆ; ಕಟ್ಟಡಗಳ ನಿರ್ಮಾಣ ಆರಂಭವಾಗಬೇಕಿದೆ. ರಾಜ್ಯದಲ್ಲೆಲ್ಲೂ ಹೊಸ ಪ್ರೌಢಶಾಲೆ ತೆರೆಯುವುದೇ ಕಷ್ಟ ಎಂಬ ಸನ್ನಿವೇಶದಲ್ಲೂ ಅರವಿಂದ ಲಿಂಬಾವಳಿ ಹೋರಾಟ ಮಾಡಿ ದೊಡ್ಡಬನಹಳ್ಳಿಗೆ ಪ್ರೌಢಶಾಲೆ ತಂದಿದ್ದಾರೆ. ಮಾರತ್ತಹಳ್ಳಿಯಲ್ಲಿ ಉರ್ದು ಶಾಲೆಗೆ ೨೦ ಗುಂಟೆ ನಿವೇಶನ ಕಾಯ್ದಿರಿಸಿದೆ.  ದೊಡ್ಡ ನೆಕ್ಕುಂದಿ, ಕಾಡುಗೋಡಿ, ಜ್ಯೋತಿಪುರ ಹಾಗೂ ಕನ್ನಮಂಗಲಗಳ ಪ್ರೌಢಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿಗಳು ಆರಂಭವಾಗಿವೆ. ಕ್ಷೇತ್ರದ ಹಲವು ಶಾಲೆಗಳ ಜಾಗವೇ ಒತ್ತುವರಿಯಾಗಿತ್ತು. ಅವೆಲ್ಲವೂ ಈಗ ನಿರ್ದಾಕ್ಷಿಣ್ಯವಾಗಿ ಸರ್ಕಾರದ ವಶಕ್ಕೆ ಬಂದಿವೆ. ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ಗಳೂ ಬಂದಿವೆ.

ಮಹದೇವಪುರದಲ್ಲಿ ಹಲವಾರು ಅಂತಾರಾಷ್ಟ್ರೀಯ ಸ್ತರದ ಶಿಕ್ಷಣ ಸಂಸ್ಥೆಗಳಿವೆ. ಹಾಗೆಯೇ ಹಲವು ಕೊರತೆಗಳಿರುವ ಶಾಲೆಗಳೂ ಇವೆ. ಪ್ರಾಥಮಿಕ ಶಾಲೆಗಳಲ್ಲಿ ಕೆಲವು ವಿಷಯಗಳಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಮನಗಂಡು ಅರವಿಂದ ಲಿಂಬಾವಳಿಯವರು ವಾಗ್ದೇವಿ ಶಾಲೆಯ ಮುಖ್ಯಸ್ಥ ಶ್ರೀ ಹರೀಶ್ ನೇತೃತ್ವದಲ್ಲಿ ರಾಜ್ಯದಲ್ಲೇ ವಿಶಿಷ್ಟವಾದ `ಶಿಕ್ಷಣ ಕಾರ್ಯಪಡೆ’ಯನ್ನೇ ಸ್ಥಾಪಿಸಿದ್ದು ಇನ್ನೊಂದು ರೋಚಕ ಕಥೆ. ಇದಕ್ಕೆ ಒದಗಿದ್ದು ಕೇವಲ ಸಾರ್ವಜನಿಕರ ದೇಣಿಗೆಯ ಹಣ ಮತ್ತು ಸ್ವಯಂಸೇವಾ ಮನೋಭಾವದ ಯುವ ಪಡೆಯ ಕಲಿಸುವ ಹುಚ್ಚು! ವಿದ್ಯಾರ್ಥಿ ನಾಯಕನಾಗಿ ಪಡೆದ ಅನುಭವವನ್ನೆಲ್ಲ ಕ್ಷೇತ್ರದ ಶಿಕ್ಷಣ ಮಟ್ಟ ಹೆಚ್ಚಿಸಲು ಅರವಿಂದ ಲಿಂಬಾವಳಿ ಎರೆದಿದ್ದಾರೆ.

ಮಹದೇವಪುರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕಾಗಿ ಗುಂಜೂರು ಪಾಳ್ಯದಲ್ಲಿ ೨೭ ಎಕರೆಗೂ ಹೆಚ್ಚು ವ್ಯಾಪ್ತಿಯ ವಿಶಾಲ ಜಾಗವನ್ನೀಗ ಗುರುತಿಸಲಾಗಿದೆ. ಸ್ಥಳೀಯ ವಿದ್ಯಾರ್ಥಿಗಳಿಗಾಗಿಯೂ ಕ್ರೀಡಾಂಗಣಗಳ ನಿರ್ಮಾಣ ಯೋಜನೆ ನಡೆದಿದೆ. ಕಲಿಕೆಯೊಂದಿಗೆ ಆಟೋಟವೂ ಇರಬೇಕು, ಉಳಿಯಲು ಒಳ್ಳೆಯ ವಸತಿ ವ್ಯವಸ್ಥೆಯೂ ಇರಬೇಕು ಎಂಬುದು ಅರವಿಂದ ಲಿಂಬಾವಳಿಯವರ ಹಂಬಲ.

ಶಿಕ್ಷಣರಂಗದ ಹೋರಾಟದ ಬೆಂಕಿಯಲ್ಲಿ ಬೆಳೆದು ಬಂದಮೇಲೆ ಅರವಿಂದ ಲಿಂಬಾವಳಿ ಹೀಗೆಲ್ಲ ಯೋಚಿಸಿ ಕಾರ್ಯಗತಗೊಳಿಸುವುದು ತೀರ ಸಹಜ.

ಅಜೀಂ ಪ್ರೇಮ್‌ಜಿ ಪ್ರತಿಷ್ಠಾನವು ಕೊಡತಿ ಗ್ರಾಮ ಪಂಚಾಯತಿಯ ಹಲವು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಅಭಿವೃದ್ಧಿಗಾಗಿ ಹತ್ತಾರು ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಅರವಿಂದ ಲಿಂಬಾವಳಿಯವರ ಶಿಕ್ಷಣಸೇವೆಗಳಿಗೆ ಕೈಗೂಡಿಸಿದ್ದು ವಿಶೇಷ. ಶಿಕ್ಷಕರಿಗೆ ಇಂಗ್ಲಿಷ್, ಕನ್ನಡ ಮತ್ತು ಗಣಿತ ವಿಷಯಗಳ ತರಬೇತಿ, ಮುಖ್ಯ ಶಿಕ್ಷಕರ ಸಾಮರ್ಥ್ಯವೃದ್ಧಿ, ಆರೋಗ್ಯ ಸಮೀಕ್ಷೆ, ಮೂಲಸೌಕರ್ಯಗಳು – ಹೀಗೆ ಪ್ರತಿಷ್ಠಾನವು ಹಲವು ಆಯಾಮಗಳಲ್ಲಿ ಸೇವೆ ಸಲ್ಲಿಸಿದೆ. ಈ ಶಾಲೆಗಳಲ್ಲಿ ಒಂದು ಸಂಪೂರ್ಣ ಕ್ರಿಯಾ ಯೋಜನೆಯನ್ನು ಈಗ ಜಾರಿಗೊಳಿಸಲಾಗುತ್ತಿದೆ.

ಶಿಕ್ಷಣ ಅಭಿಯಾನದ ಅಲೆ

 • ಕಾಡುಗೋಡಿಯಲ್ಲಿ ಪ್ರಥಮ ದರ್ಜೆ ಕಾಲೇಜು (೨೦೦೯-೧೦)
 • ವರ್ತೂರಿನಲ್ಲಿ ಪ್ರಥಮ ದರ್ಜೆ ಕಾಲೇಜು (೨೦೦೯-೧೦)
 • ಇಮ್ಮಡಿಹಳ್ಳಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ (೨೦೦೯-೧೦)
 • ಚನ್ನಸಂದ್ರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ (೨೦೦೯-೧೦)
 • ದೊಡ್ಡಬನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ (೨೦೧೦-೧೧)
 • ಕನ್ನಮಂಗಲ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಕಾರ್ಯಪಡೆಯ ಮೂಲಕ ಕ್ರೀಡಾ ಪರಿಕರಗಳನ್ನು ಒದಗಿಸಲಾಗಿದೆ.
 • ದೊಡ್ಡ ನೆಕ್ಕುಂದಿ, ಕಾಡುಗೋಡಿ, ಕನ್ನಮಂಗಲ, ಜ್ಯೋತಿಪುರಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ೨೦೧೦-೧೧ರ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ವಿಭಾಗ ಆರಂಭ
 • ಬಿಬಿಎಂಪಿ, ಸರ್ವಶಿಕ್ಷಾ ಅಭಿಯಾನ, ಬಿಡಿಎ, ಶಿಕ್ಷಣ ಕಾರ್ಯಪಡೆ – ಇವುಗಳಡಿಯಲ್ಲಿ ಒಟ್ಟು ೧೨೦ಕ್ಕೂ ಹೆಚ್ಚು ಶಾಲಾಕೊಠಡಿಗಳನ್ನು ಕಟ್ಟಲಾಗಿದೆ.

ಮಹದೇವಪುರದಲ್ಲಿ ಶಿಕ್ಷಣ ರಂಗದ ಕೆಲಸಗಳಿಗಾಗಿ ಅರವಿಂದ ಲಿಂಬಾವಳಿಯವರು ವಾಗ್ದೇವಿ ಶಾಲೆಯ ಮುಖ್ಯಸ್ಥ ಶ್ರೀ ಹರೀಶ್ ನೇತೃತ್ವದಲ್ಲಿ ಒಂದು ಶಿಕ್ಷಣ ಕಾರ್ಯಪಡೆಯನ್ನೇ ರಚಿಸಿದ್ದಾರೆ! ಈ ಪಡೆಯ ಸ್ವಯಂಸೇವಾ ಕಾರ್ಯಕರ್ತರು ಅಗತ್ಯ ಇರುವ ಕಡೆಗಳಿಗೆ ಹೊರಗಿನಿಂದ ಶಿಕ್ಷಕರನ್ನು ಕಳಿಸಿಕೊಟ್ಟು ಪಾಠದ ವ್ಯವಸ್ಥೆ ಮಾಡುತ್ತಾರೆ. ರಾಜ್ಯದಲ್ಲೇ ಇದೊಂದು ವಿನೂತನ ಪ್ರಯೋಗ.

ಸಾಧನೆಗಳು ೨೦೦೮-೧೩

 • ಸಾಧನೆಯ ಹಾದಿಯಲ್ಲಿ ಶಿಕ್ಷಣ ಕ್ಷೇತ್ರ - ಕರ್ನಾಟಕ ರಾಜ್ಯವು ಹಲವು ದಶಕಗಳಿಂದಲೂ ದೇಶದಲ್ಲೇ ಮುಂಚೂಣಿಯಲ್ಲಿರುವ ಉನ್ನತ ಶಿಕ್ಷಣ ಕೇಂದ್ರವಾಗಿದೆ. ಅದರಲ್ಲೂ ಎಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ನೂರಾರು ಕಾಲೇಜುಗಳು ಸ್ಥಾಪನೆಗೊಂಡಿವೆ. ೨೦೦೮ರ ಹೊತ್ತಿಗೆ ಶಿಕ್ಷಣ ರಂಗವು ಹಲವು… Continue Reading
 • ಶಿಬಿರ,ಮೇಳ,ಉತ್ಸವಗಳ ಸರಮಾಲೆ - ಮಹದೇವಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹತ್ತು ಹಲವು ಮೇಳಗಳು ನಡೆದಿವೆ. ನಾಡಿನ ಮಹಾಪುರುಷರ ಜಯಂತಿಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗಿದೆ.ಯುಗಾದಿ ಹಬ್ಬವೇ ಮಹದೇವಪುರ ಮೇಳವಾಗಿ ರೂಪಾಂತರಗೊಂಡು ಸಾವಿರಾರು ಕುಟುಂಬಗಳನ್ನು… Continue Reading
 • ಧಾರ್ಮಿಕತೆ, ಸಾಮರಸ್ಯದ ತಂಗಾಳಿ - ಸ್ವಾಮಿ ವಿವೇಕಾನಂದ, ವೇಮನ, ಕೆಂಪೇಗೌಡ, ಬಸವೇಶ್ವರ, ಕನಕದಾಸರು, ಡಾ|| ಬಿ.ಆರ್. ಆಂಬೇಡ್ಕರ್, ಬಾಬು ಜಗಜೀವನರಾಂ, ದ್ರೌಪದಮ್ಮ, ಸಿದ್ಧರಾಮೇಶ್ವರರು, ಸ್ವಾಮಿ ಯೋಗಿನಾರಾಯಣ, ಸೋದರಿ ನಿವೇದಿತಾ, ಪಂ| ದೀನದಯಾಳ ಉಪಾಧ್ಯಾಯ… Continue Reading
 • ಕಾದಿದ್ದರು ೩೦ ವರ್ಷ; ಈಗ ಮೂಡಿತು ಹರ್ಷ! - ಎಲ್ಲೆಲ್ಲೂ ಶಾಂತಿ-ಸೌಹಾರ್ದ; ಅಪರಾಧ ಪ್ರಮಾಣ ಇಳಿಕೆ: ಬೆಂಗಳೂರು ನಗರದ ಸರಾಸರಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅಪರಾಧಪ್ರಮಾಣವು ಏನಿಲ್ಲೆಂದರೂ ಶೇ. ೨೫ರಷ್ಟು ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ… Continue Reading
 • ಸಾಮಾಜಿಕ ಅಭ್ಯುದಯದ ದೃಢ ಹೆಜ್ಜೆಗಳು - ಯುವಕರಿಗೆ ಕೆಲಸ ದೊರಕಿಸಲು ಉದ್ಯೋಗ ಮೇಳ, ಸಾರ್ವಜನಿಕ ಬಳಕೆಗಾಗಿ ಹಲವೆಡೆ ಸಮುದಾಯ ಭವನಗಳು, ಸುರಕ್ಷತೆಗಾಗಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಸುಸಜ್ಜಿತ ವಿದ್ಯುತ್ ಚಿತಾಗಾರ, ದುರ್ಬಲರು, ಅಶಿಕ್ಷಿತರಿಗೆ… Continue Reading
 • ಅಪಾರ್ಟ್ಮೆಂಟ್ ನಿವಾಸಿಗಳ ಬವಣೆ ಪರಿಹಾರ - ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳಿವೆ. ಇಲ್ಲಿನ ನಿವಾಸಿಗಳು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಶನ್ ಸ್ಥಾಪಿಸಿಕೊಂಡಿದ್ದಾರೆ. ಅರವಿಂದ ಲಿಂಬಾವಳಿಯವರ ಬಳಿ ಅವರು ಹಲವು ಸಮಸ್ಯೆಗಳ ಬಗ್ಗೆ ನಿವೇದಿಸಿಕೊಂಡಿದ್ದರು. ಅವುಗಳಲ್ಲಿ… Continue Reading
 • ಇಪಿಐಪಿ ಅಭಿವೃದ್ಧಿಯ ಯಶೋಗಾಥೆ - ವೈಟ್‌ಫೀಲ್ಡ್‌ನ ಇಪಿಐಪಿ ವಲಯದಲ್ಲಿ ರಸ್ತೆ, ಮಳೆ ನೀರು ಕೊಯ್ಲು, ಕಾಲುದಾರಿ ಸುಧಾರಣೆ ಮತ್ತು ಡಾಂಬರೀಕರಣದ ಕೆಲಸಗಳು ಭರದಿಂದ ಸಾಗಿವೆ. ಇಲ್ಲಿನ ನಾಲ್ಕು ಸಾಲಿನ (೪ ಲೇನ್) ೫.೫… Continue Reading
 • ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ - ಕಳೆದ ನಾಲ್ಕು ವರ್ಷಗಳಲ್ಲಿ ಮಹದೇವಪುರದ ಸಾರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ರೂಪಾಂತರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮಹದೇವಪುರಕ್ಕೆ ಪ್ರತಿ ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ (ಸಂಖ್ಯೆ ೩೩೫ಇ) ಸೌಕರ್ಯವನ್ನು… Continue Reading
 • ಆರೋಗ್ಯಕ್ಕೆ ಆದ್ಯತೆ - ಈಗ ಆರೋಗ್ಯ ಸಚಿವರಾಗಿರುವ ಅರವಿಂದ ಲಿಂಬಾವಳಿಯವರು ಮಹದೇವಪುರದ ಶಾಸಕರಾದ ಕ್ಷಣದಿಂದಲೂ ಸ್ವಾಸ್ಥ್ಯವನ್ನು ಅತ್ಯಂತ ಜತನದಿಂದ ನೋಡಿಕೊಂಡಿದ್ದಾರೆ. ಎರಡು ಮೆಗಾ ಹೆಲ್ತ್ ಕ್ಯಾಂಪ್‌ಗಳೂ ಸೇರಿದಂತೆ ಆರು ವೈದ್ಯಕೀಯ ಶಿಬಿರಗಳು… Continue Reading
 • ಮನೆಗೆ ದೀಪ, ಬೀದಿಗೆ ಬೆಳಕು - ೨೦೦೮ರಲಿ ಮಹದೇವಪುರ ಕ್ಷೇತ್ರದ ಹಲವು ಪ್ರದೇಶಗಳು ಬೀದಿ ದೀಪಗಳಿಂದ ವಂಚಿತವಾಗಿದ್ದವು. ವಿದ್ಯುತ್ ಲೈನ್‌ಗಳೂ ಇಲ್ಲ, ಕಂಬಗಳೂ ಇಲ್ಲದಂಥ ಸ್ಥಿತಿ. ಅರವಿಂದ ಲಿಂಬಾವಳಿಯವರು ವಿದ್ಯುತ್ ಸಂಪರ್ಕ, ಬೀದಿ ದೀಪ,… Continue Reading