ಅರವಿಂದ ಲಿಂಬಾವಳಿ

  • ಮಹದೇವಪುರದ ಜನತೆಯ ಕಣ್ಣಿನಲ್ಲಿ ಕ್ಷೇತ್ರದ ಬೆಳವಣಿಗೆಯೇ ಮೊದಲ ಆದ್ಯತೆ ಎಂದು ತಿಳಿದ ಜನಪರ ಶಾಸಕ.
  • ನಾಡಿನ ಯುವಕರ ದೃಷ್ಟಿಯಲ್ಲಿ ಭಯೋತ್ಪಾದನೆ ವಿರುದ್ಧ ಸಿಡಿದೆದ್ದ ಯುವನಾಯಕ.
  • ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣರಂಗದ ತಜ್ಞರು, ಪಾಲಕರು – ಇವರೆಲ್ಲರಿಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಪ್ರಗತಿಪರ ಸಚಿವ.
  • ಕರ್ನಾಟಕದ ನೋವು ಬಲ್ಲ ಹೃದಯಗಳಿಗೆ ಅವರೊಬ್ಬ ಬರ-ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಹೃದಯವಂತ ಮುತ್ಸದ್ದಿ.
  • ಪಕ್ಷರಾಜಕಾರಣದ ಕಾರ್ಯಕರ್ತರಿಗೆ, ಅರವಿಂದ ಲಿಂಬಾವಳಿ ಒಬ್ಬ ಚತುರ ಸಂಘಟಕ.
  • ಸಮಾಜದ ಗಣ್ಯರ ಕಣ್ಣಲ್ಲಿ ದೇಶದ ಸಂಸ್ಕೃತಿ, ಹಿರಿಮೆ, ಗರಿಮೆ, ಪರಂಪರೆಯನ್ನು ಅತೀವವಾಗಿ ಗೌರವಿಸುವ ಅಪ್ಪಟ ದೇಶಾಭಿಮಾನಿ.
  • ಸ್ನೇಹಕ್ಕೆ ಒದಗುವ ಮಿತ್ರ; ಜನರಿಗೆ ಎಟುಕುವ ಕಾರ್ಯಕರ್ತ. ನಸುನಗುವಿನ ಸ್ವಭಾವ; ಜೊತೆಗೇ ಖಡಕ್ ಮಾತುಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುವ ಜನನಾಯಕ.
  • ಅರವಿಂದ ಲಿಂಬಾವಳಿಯವರ ಈ ಬಹುಮುಖ ವ್ಯಕ್ತಿತ್ವವನ್ನು ಸರಳವಾಗಿ ಬಣ್ಣಿಸುವುದಾದರೆ, ಅವರು ಮಹದೇವಪುರದ ನಾಗರಿಕರ ಪ್ರಿಯ ಪ್ರತಿನಿಧಿ ಮತ್ತು ಕರ್ನಾಟಕದ ಯುವ ನೇತಾರ.

ಸಾಧನೆಗಳು ೨೦೧೮ – 2