ಆದೂರಿನಲ್ಲಿ ಅಡ್ಡರಸ್ತೆಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದೆ.
ಇದೇ ವೇಳೆ ಆರ್ ಒ ನೀರಿನ ಘಟಕ ಉದ್ಘಾಟಿಸಿದೆ ಹಾಗೂ ಪಶುಸಂಗೋಪನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಫಲಾನುಭವಿಗಳಿಗೆ ಚೆಕ್ ವಿತರಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮೀನಿನ ಬಲೆ ವಿತರಿಸಿದೆ.
ನಾಯಕರಾದ ನಟರಾಜ್, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಗಣೇಶ್, ಆನಂದ್ ಬಿಳಿಶಿವಾಲೆ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.