ಕೇಂದ್ರ ಕಾನೂನು ಮತ್ತು ನ್ಯಾಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ರವಿಶಂಕರ್ ಪ್ರಸಾದ್ ಅವರ ಜೊತೆ ಮಹದೇವಪುರ ಕ್ಷೇತ್ರದ ಪಾರ್ಕ್ ಪ್ಲಾಜಾ ಹೋಟೆಲ್ ನಲ್ಲಿ ನಡೆದ ಐಟಿ ಕುರಿತ ಸಂವಾದದಲ್ಲಿ ನಾನು ಭಾಗವಹಿಸಿದೆ. ಐಟಿ ಕ್ಷೇತ್ರದ ಸಿಇಒಗಳು, ಆಡಳಿತ ನಿರ್ದೇಶಕರು, ಹಿರಿಯ ಉದ್ಯೋಗಿಗಳು ಮುಂತಾದರವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕದ ಬಿಜೆಪಿಯ ಐಟಿ ಕುರಿತ ಪ್ರಣಾಳಿಕೆ ರಚಿಸಲು ಈ ಚರ್ಚೆ ಸಹಕಾರಿಯಾಯಿತು. ಐಟಿ ಕ್ಷೇತ್ರದ ಸಹಾಯದಿಂದ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂಬ ಕುರಿತು ಸಹ ಚರ್ಚೆ ನಡೆಸಲಾಯಿತು. ಅಲ್ಲದೆ ಕೇಂದ್ರ ಸಚಿವರಿಂದಲೂ ಸಾಕಷ್ಟು ಸಲಹೆ – ಸೂಚನೆಗಳನ್ನು ಪಡೆಯಲಾಯಿತು. ಬೆಂಗಳೂರಿನಲ್ಲಿ ಐಟಿ ಕ್ಷೇತ್ರ ಇನ್ನಷ್ಟು ಬೆಳೆಯಲು ಯಾವ ರೀತಿ ಕೆಲಸ ಮಾಡಬೇಕು ಎಂಬ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಸಲಾಯಿತು.