ಮಹದೇವಪುರ ವಿಧಾನಸಭೆಯ ಕಾಡುಗೋಡಿ ವಾರ್ಡ್ ನ ಸಭೆ ಇಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮುಖಂಡರು ಹಾಗು ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಾಯಿತು.

ಬಿಬಿಎಂಪಿ ಸದಸ್ಯರಾದ ಎಸ್ ಮುನಿಸ್ವಾಮಿ, ಮಹದೇವಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿಳ್ಳಪ್ಪ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಜೇಶ್ ಎಲ್, ಬೆಂಗಳೂರು ನಗರ ಜಿಲ್ಲೆ ಒಬಿಸಿ ಮೋರ್ಚಾ ಉಪಾಧ್ಯಕ್ಷ ಚಂದ್ರಶೇಖರ್, ಬೆಂಗಳೂರು ನಗರ ಜಿಲ್ಲೆ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ಅಸ್ಲಂ ಪಾಷಾ ಮತ್ತಿತರರು ಹಾಜರಿದ್ದರು.