ಮಹದೇವಪುರ ಕ್ಷೇತ್ರದ ಇಬ್ಬಲೂರು ಜಂಕ್ಷನ್, ಕಸವನಹಳ್ಳಿ, ಕೈಕೊಂಡರಹಳ್ಳಿ ಮತ್ತು ಹರಳೂರಿನಲ್ಲಿ ಜನರು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಹಿರಿಯ ಟ್ರಾಫಿಕ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಇಂದು ಚರ್ಚೆ ನಡೆಸಿದೆ.

ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಅಭಿಷೇಕ್ ಗೋಯಲ್, ಎಸಿಪಿ ಎಸ್.ಸಿ. ಸಿದ್ದಲಿಂಗಪ್ಪ, ಎಚ್ ಎಸ್ ಆರ್ ಟ್ರಾಫಿಕ್ ನಿರೀಕ್ಷಕರಾದ ರಾಜಶೇಖರ ಎನ್ ಎಸ್, ಬಿಬಿಎಂಪಿ ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ, ಎಕ್ಷಿಕಿಟಿವ್ ಎಂಜಿನಿಯರ್ ಜೈಶಂಕರ್ ರೆಡ್ಡಿ, ಟ್ರಾಫಿಕ್ ಎಂಜಿನಿಯರಿಂಗ್ ವಿಭಾಗದ ಪ್ರವೀಣ್ ಲಿಂಗಯ್ಯ, ಎಕ್ಸಿಕಿಟಿವ್ ಎಂಜಿನಿಯರ್ (ರಸ್ತೆ ಅಗಲೀಕರಣ) ನಂದೀಶ್, ಸಹಾಯಕ ಎಕ್ಸಿಕಿಟಿವ್ ಎಂಜಿನಿಯರ್ ಕೋದಂಡ ರೆಡ್ಡಿ, ಬಿಬಿಎಂಪಿಯ ಸಹಾಯಕ ಎಕ್ಸಿಕಿಟಿವ್ ಎಂಜಿನಿಯರ್ ಪ್ರಕಾಶ್ ಚರ್ಚೆಯಲ್ಲಿ ಭಾಗವಹಿಸಿದರು.


ಚರ್ಚೆ ವೇಳೆ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು:
– ವಾಹನ ದಟ್ಟಣೆ ಜಾಸ್ತಿ ಇರುವ ಸಮಯದಲ್ಲಿ ಬೃಹತ್ ವಾಹನ ಸಂಚಾರ ನಿಷೇಧ
– ಕಸವನಹಳ್ಳಿ ರಸ್ತೆಯಲ್ಲಿ ಕಾನ್ ಸ್ಟೇಬಲ್ ನಿಯೋಜನೆ
– ಕೈಕೊಂಡರಹಳ್ಳಿಯಲ್ಲಿ ಬಸ್ ಸ್ಟಾಪ್ ಗಳಲ್ಲಿ ಬಸ್ಸು ನಿಲ್ಲಿಸದ ಚಾಲಕರ ಮೇಲೆ ದಂಡ
– ಕೈಕೊಂಡರಹಳ್ಳಿಯಲ್ಲಿ ಅಟೋ ಸ್ಟಾಂಡ್ ಸ್ಥಳಾಂತರಕ್ಕೆ ಸೂಚನೆ
– ಕಸವನಹಳ್ಳಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಅಂಗಡಿಗಳ ತೆರವಿಗೆ ಸೂಚನೆ
– ಇಬ್ಬಲೂರು ಜಂಕ್ಷನ್ ನಲ್ಲಿ ವಾಹನ ದಟ್ಟಣೆ ಇಳಿಸಲು ಕ್ರಮ ಕೈಗೊಳ್ಳಲು ಟ್ರಾಫಿಕ್ ಎಂಜಿನಿಯರ್ ವಿಭಾಗಕ್ಕೆ ಸೂಚನೆ