ಕೈಕೊಂಡರಹಳ್ಳಿ ಶಕ್ತಿ ಕೇಂದ್ರದ ಅಪಾರ್ಟ್ ಮೆಂಟ್ ಗಳ ಸಭೆಯಲ್ಲಿ ಭಾಗವಹಿಸಲು ತೆರಳುವ ವೇಳೆ ರಸ್ತೆ ಬದಿಯಲ್ಲೇ ತ್ಯಾಜ್ಯ ಬಿದ್ದಿರುವುದನ್ನು ನಾನು ಗಮನಿಸಿದ್ದು, ಇದನ್ನು ಎರಡು ದಿನಗಳೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ನಂತರ ಕೈಕೊಂಡರಹಳ್ಳಿಯ ಸೆರೆನಿಟಿ ಲೈಔಟ್ ನಲ್ಲಿ ಅಲ್ಲಿನ ನಿವಾಸಿಗಳ ಸಭೆಯಲ್ಲಿ ಭಾಗವಹಿಸಿ ಅಲ್ಲಿನ ಟ್ರಾಫಿಕ್ ಸಮಸ್ಯೆ ಕುರಿತು ಚರ್ಚಿಸಿದೆ. ಮಾರ್ಚ್ 2ರಂದು ಹಿರಿಯ ಟ್ರಾಫಿಕ್ ಅಧಿಕಾರಿಗಳೊಂದಿಗೆ ಮತ್ತೆ ಇಲ್ಲಿಗೆ ಭೇಟಿ ನೀಡಿ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹುಡುಕುವುದಾಗಿ ನಾನು ಅಲ್ಲಿನ ನಿವಾಸಿಗಳಿಗೆ ತಿಳಿಸಿದೆ.