ದಾವಣಗೆರೆಯಲ್ಲಿ ಇಂದು (27 ಫೆಬ್ರುವರಿ) ಬಿಜೆಪಿ ರಾಜ್ಯಾಧ್ಯಕ್ಷ , ರೈತಬಂಧು ಶ್ರೀ ಬಿ ಎಸ್ ಯಡಿಯೂರಪ್ಪನವರ ಜನ್ಮದಿನದ ಸಂದರ್ಭದಲ್ಲಿ ನಡೆದ ಅನ್ನದಾತರ ಬೃಹತ್‌ ಸಮಾವೇಶದಲ್ಲಿ ನಾನು ಭಾಗವಹಿಸಿದ ಕೆಲವು ಕ್ಷಣಗಳು ಇಲ್ಲಿವೆ. ಸಮಾರಂಭದಲ್ಲಿ ನಾನೂ ಲಕ್ಷಾಂತರ ರೈತರನ್ನು ಉದ್ದೇಶಿಸಿ ಮಾತನಾಡಿದೆ.

ಮಾರ್ಚ್‌ 1 ರಿಂದ 15 ರವರೆಗೆ ರಾಜ್ಯದಾದ್ಯಂತ ನಡೆಯಲಿರುವ ರೈತಬಂಧು ಅಭಿಯಾನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು ತುಂಬಾ ಐತಿಹಾಸಿಕ ಕ್ಷಣವಾಗಿತ್ತು. ಅವರು ಶ್ರೀ ಯಡಿಯೂರಪ್ಪನವರಿಗೆ ನೇಗಿಲನ್ನೇ ಸ್ಮರಣಿಕೆಯಾಗಿ ನೀಡಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಕುರಿತ ಸಿಡಿಯನ್ನು ಬಿಡುಗಡೆ ಕಾರ್ಯಕ್ರಮವೂ ನಡೆಯಿತು.
ಈ ಸಭೆಗೆ ದೊರಕಿದ ಅಭೂತಪೂರ್ವ ಜನಸ್ಪಂದನ ಹಾಗೂ ಶ್ರೀ ನರೇಂದ್ರ ಮೋದಿ ಅವರ ಭಾಷಣಕ್ಕೆ ದೊರೆತ ಪ್ರತಿಕ್ರಿಯೆ ನೋಡಿದಾಗ, ಶ್ರೀ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸ್ಪಷ್ಟವಾಯಿತು. ಯಡಿಯೂರಪ್ಪ ಅವರ ರೈತಪರ ಕಾಳಜಿ ಹಾಗೂ ಹೋರಾಟಕ್ಕೆ ಈ ಬಾರಿ ನಿರೀಕ್ಷೆಗೂ ಮಿಕ್ಕಿ ಫಲ ದೊರೆಯುವುದು ಖಂಡಿತ.