ಲೋಕಸಭಾ ಚುನಾವಣಾ ನಿಮಿತ್ತ ಬೆಳಗಾವಿ ಲೋಕಸಭಾ ಕ್ಷೇತ್ರದ ರುಕ್ಮಿಣಿ ನಗರದಲ್ಲಿ ಸಂಸದರು, ಪಕ್ಷದ ಅಭ್ಯರ್ಥಿ ಸುರೇಶ್ ಅಂಗಡಿ ಅವರ ಪರವಾಗಿ ಪ್ರಚಾರ ಮಾಡಲಾಯಿತು. ಈ ವೇಳೆ ಶಾಸಕರಾದ ಅನಿಲ್ ಬೆನಕೆ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು. ದೇಶದ ಒಳಿತಿಗೆ, ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡಲಾಯಿತು.