ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಕೊಡುಗೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿ.ಜೆ.ಪಿ ಸರ್ಕಾರವು ಕರ್ನಾಟಕದ ಅಭಿವೃದ್ಧಿಗಾಗಿ ನೀಡಿರುವ ಅನುದಾನ ಅಪಾರವಾಗಿದೆ. ಇದು ಕೇಂದ್ರದ ಬಿ.ಜೆ.ಪಿ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ ಇರುವ ಪ್ರಾಮಾಣಿಕ ಕಳಕಳಿಯನ್ನು ತೋರಿಸುತ್ತದೆ.

 • ಬಿ.ಜೆ.ಪಿ ನೇತೃತ್ವದ ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಕರ್ನಾಟಕಕ್ಕೆ ೨,೪೯,೩೯೩ ಕೋಟಿ ರೂ.ಗಳ ಅನುದಾನವನ್ನು ಈಗಾಗಲೇ ನೀಡಿದೆ.
 • ಕರ್ನಾಟಕದ ರೈತರಿಗಾಗಿ ೩೧ ಕೋಟಿ ರೂ. ಹಣ ಬಿಡುಗಡೆ, ೫೦.೫೬ ಲಕ್ಷ ಮಣ್ಣು ಆರೋಗ್ಯ ಕಾರ್ಡ್‌ಗಳ (Soiಟ ಊeಚಿಟಣh ಅಚಿಡಿಜ) ವಿತರಣೆ.
 • ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ೪೦೫ ಕೋಟಿ ರೂ. ನೀಡಿ ೨,೮೫,೮೭೮ ಎಕರೆ ಪ್ರದೇಶವನ್ನು ಅತಿ ಸಣ್ಣ ನೀರಾವರಿ ಯೋಜನೆಯಡಿ ತರಲಾಗಿದೆ.
 • ಹಗರಣಗಳ ಕೇಂದ್ರವಾಗಿದ್ದ ಕರ್ನಾಟಕದ ಗಣಿಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಿ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಯಡಿ ೨೦೯ ಕೋಟಿ ರೂ. ಸಂಗ್ರಹಿಸಲಾಗಿದೆ; ಗಣಿಗಳ ಗುತ್ತಿಗೆ ಅವಧಿ ಮುಗಿಯುವುದರಲ್ಲಿ ರಾಜ್ಯದ ಬೊಕ್ಕಸಕ್ಕೆ ೩೪,೩೫೩ ಕೋಟಿ ರೂ. ಆದಾಯ ಹರಿದು ಬರಲಿದೆ.
 • ಕಡಿಮೆ ಖರ್ಚಿನಲ್ಲಿ ಕರ್ನಾಟಕಕ್ಕೆ ಬೆಳಕಿತ್ತ `ಉಜಾಲ ಯೋಜನೆಯಡಿಯಲ್ಲಿ ಕೇಂದ್ರ ಬಿ.ಜೆ.ಪಿ ಸರ್ಕಾರವು ರಾಜ್ಯದಲ್ಲಿ ೧.೬೫ ಕೋಟಿ ಎಲ್.ಇ.ಡಿ ಬಲ್ಪ್ ವಿತರಣೆ ಮಾಡಿದೆ. ಇದರಿಂದ ರಾಜ್ಯಕ್ಕೆ ವರ್ಷಕ್ಕೆ ೮೬೨ ಕೋಟಿ ರೂ. ಉಳಿಯುತ್ತಿದೆ. ಅಲ್ಲದೆ ವರ್ಷಕ್ಕೆ ೨೧.೫೪ ಲಕ್ಷ ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಿದೆ.
 • ಕರ್ನಾಟಕದಲ್ಲಿ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ೧೪,೨೬೯ ಮೆಗಾವಾಟ್‌ನಿಂದ ೨೧,೩೧೬ ಮೆಗಾವಾಟ್‌ಗೆ ಹೆಚ್ಚಿಸಿ ಇಂಧನ ಉಳಿತಾಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರಿಂದ ಒಟ್ಟು ೪,೩೦೦ ಕೋಟಿ ರೂ.ಗಳ ಲಾಭ ಅಂದಾಜು ಮಾಡಿದ್ದು ಪ್ರತಿವರ್ಷವೂ ಸುಮಾರು ೬,೭೦೦ ಕೋಟಿ ರೂ. ಉಳಿತಾಯವಾಗಲಿದೆ.
 • ಸ್ವಚ್ಛ ಭಾರತ್ ಮಿಶನ್ ಅಭಿಯಾನಕ್ಕಾಗಿ ಕರ್ನಾಟಕಕ್ಕೆ ೨೦೪ ಕೋಟಿ ರೂ.ಗಳನ್ನು ನೀಡಲಾಗಿದೆ.
 • ಮುದ್ರಾ ಯೋಜನೆಯಡಿ ಕರ್ನಾಟಕದ ಉದ್ಯಮಿಗಳಿಗೆ ಮೋದಿಜಿ ಶಕ್ತಿ ತುಂಬಿದ್ದಾರೆ; ಈ ಯೋಜನೆಯಡಿಯಲ್ಲಿ ೯೭.೭೩ ಲಕ್ಷ ಫಲಾನುಭವಿಗಳಿಗೆ ೩೯,೪೪೩ ಕೋಟಿ ರೂ. ಸಹಾಯಧನ ವಿತರಣೆಯಾಗಿದೆ.
 • ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ ಮನೆಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ೧೮೪೧.೩೧ ಕೋಟಿ ರೂ. ಬಿಡುಗಡೆಯಾಗಿ ೧,೨೨,೭೫೪ ಮನೆಗಳ ನಿರ್ಮಾಣಕ್ಕಾಗಿ ೭೦೮ ಯೋಜನೆಗಳು ಅನುಮೋದನೆಗೊಂಡಿವೆ.

ಕರ್ನಾಟಕದ ಮೂಲಭೂತ ಸೌಕರ್ಯಗಳಿಗೆ ಸಹಾಯ ಹಸ್ತ

 • ೫೦ ವಿವಿಧ ಜಿಲ್ಲಾ ಯೋಜನೆಗಳ ಅಡಿಯಲ್ಲಿ ೩೫೪೬ ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ೨೭,೪೮೨ ಕೋಟಿ ರೂ. ಅನುದಾನ
 • ರೈಲ್ವೆ ಸೌಕರ್ಯಗಳಿಗಾಗಿ ಮೋದಿ ಸರ್ಕಾರದಿಂದ ೨೧೯೭ ಕೋಟಿ ರೂ. ಬಿಡುಗಡೆ
 • ದಾವಣಗೆರೆ ಮತ್ತು ಬೆಳಗಾವಿಗಳ ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ೯೬೦.೦೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
 • ಬೆಂಗಳೂರು ಮೆಟ್ರೋ ರೈಲು ಯೋಜನೆಯಲ್ಲಿ ೧೪೮ ಕಿ.ಮೀಗಳ ಮೂರು ಹೊಸ ಮಾರ್ಗಗಳು ಆರಂಭವಾಗಿದ್ದು ಕಳೆದ ಎರಡು ವರ್ಷಗಳಲ್ಲಿ ಮೆಟ್ರೋ ಯೋಜನೆಗಾಗಿ ೨,೬೧೭.೬೫ ಕೋಟಿ ರೂ. ನೀಡಲಾಗಿದೆ.
 • ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಡಿಯಲ್ಲಿ ರಾಜ್ಯದ ೧.೦೧ ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ; ಅವರ ಉಳಿತಾಯ ಖಾತೆಯಲ್ಲಿ ೨,೩೧೨ ಕೋಟಿ ಹಣ ಸಂಗ್ರಹವಾಗಿದ್ದು ಹಾಗೂ ೮೭.೭೨ ಲಕ್ಷ ರೂಪೈ ಕಾರ್ಡ್‌ಗಳನ್ನು ವಿತರಿಸಲಾಗಿದೆ.
 • ಪ್ರಧಾನಮಂತ್ರಿ ಉಜ್ವಲಾ ಯೋಜನೆ: ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‌ದರರಿಗೆ ೩.೩೩ ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ೧.೩೯ ಲಕ್ಷ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲಾಗಿದೆ.

ಹೀಗೆ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರವು ಯಾವುದೇ ಪಕ್ಷ ರಾಜಕೀಯ ಮಾಡದೆಯೇ ಕರ್ನಾಟಕಕ್ಕೆ ನೆರವಿನ ಮಹಾಪೂರವನ್ನೇ ಹರಿಸಿದೆ.

ಸಾಧನೆಗಳು ೨೦೧೩-೧೮

 • ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು - ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು ಮಹದೇವಪುರ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳಿಂದ ಸಾವಿರಾರು ಜನ ಪ್ರಯೋಜನ ಪಡೆದಿದ್ದಾರೆ. ಸಾಧನೆಗಳು ೨೦೧೩-೧೮… Continue Reading
 • ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… - ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… ಅಡುಗೆ ಅನಿಲ ವಿತರಣೆ ಸೂಲಿಕುಂಟೆ ಗ್ರಾಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ವಿತರಣೆ. ಆರೋಗ್ಯ… Continue Reading
 • ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… - ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… ಆರೋಗ್ಯ ವಿಮೆ ದೊಡ್ಡನೆಕ್ಕುಂದಿ ವಾರ್ಡಿನ ಸರ್ಕಾರಿ ಶಾಲೆಯ ಸುಮಾರು ೯೫೩ ಶಾಲಾ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಆರೋಗ್ಯ ವಿಮೆ… Continue Reading
 • ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… - ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್‌ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ… Continue Reading
 • ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… - ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… ಶಾಂತಿಯುತ ಸಹಬಾಳ್ವೆಯ ಮಹದೇವಪುರ ಬೆಂಗಳೂರು ನಗರದಲ್ಲಿ ಅಪರಾಧದ ಪ್ರಮಾಣ ಹೆಚ್ಚಿದ್ದರೂ ಮಹದೇವಪುರ ಕ್ಷೇತ್ರದಲ್ಲಿ ಅಪರಾಧ ಪ್ರಮಾಣ ಕಡಿಮೆ ಇದ್ದು ಎಲ್ಲಾ ಧರ್ಮಗಳ… Continue Reading
 • ನೀರು, ಶೌಚಾಲಯ, ಕೊಳವೆ ಬಾವಿ… - ನೀರು, ಶೌಚಾಲಯ, ಕೊಳವೆ ಬಾವಿ… ಕುಡಿಯುವ ನೀರು, ಶೌಚಾಲಯ ಹೂವೈ ಸಾಫ್ಟ್‌ವೇರ್ ಸಂಸ್ಥೆಯ ಸಹಯೋಗದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಶಾಸಕರ ನಿಧಿ ಹಾಗೂ ಸಂಸ್ಥೆಯ ತಲಾ ನಾಲ್ಕು ಲಕ್ಷ… Continue Reading
 • ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… - ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಲನಾಯಕನಹಳ್ಳಿ, ಕೊಡತಿ, ಮಾರತ್ತಹಳ್ಳಿ, ಮಂಡೂರು, ಬಿದರಹಳ್ಳಿ ಹಾಗೂ ಕಣ್ಣೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಕಟ್ಟಡ… Continue Reading
 • ವಸತಿ, ಬಸ್ ತಂಗುದಾಣ, ಮೇಲು ಸೇತುವೆ… - ವಸತಿ, ಬಸ್ ತಂಗುದಾಣ, ಮೇಲು ಸೇತುವೆ… ವಸತಿ ಸೌಕರ್ಯ ೯೪(ಸಿ) ಮತ್ತು ೯೪ (ಸಿಸಿ) ಅಡಿಯಲ್ಲಿ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ನೋಂದಣಿ ಮಾಡಿಸುವ… Continue Reading
 • ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು - ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು ಪಾದಚಾರಿ ಮೇಲು ಸೇತುವೆಗಳು ಪಾದಚಾರಿಗಳ ಹಿತದೃಷ್ಟಿಯಿಂದ ಮಾರತ್ತಹಳ್ಳಿ ಬ್ರಿಡ್ಜ್ ಬಳಿ, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ ಇಕೋ ಸ್ಪೇಸ್… Continue Reading
 • ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… - ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿ… Continue Reading