ಬನ್ನಿ, ಬದಲಾವಣೆ ತರೋಣ…

ಮಹದೇವಪುರದ ಸಾರ್ವಜನಿಕರೇ,
ಭಾರತಕ್ಕೆ ಬೆಂಗಳೂರು ಮಹಾನಗರವು ಐಟಿ ಕೇಂದ್ರಬಿಂದು.ಸಿಲಿಕಾನ್ ಸಿಟಿ – ಐಟಿ ಕಾರಿಡಾರ್. ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಮಹದೇವಪುರವೇ ಕೇಂದ್ರಬಿಂದು! ಮಹದೇವಪುರ ವಿಧಾನಸಭಾ ಕ್ಷೇತ್ರವೀಗ ಸಾಫ್ಟ್-ವೇರ್ ರಂಗದಲ್ಲಿ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಬೆಂಗಳೂರಿನ ಮಾದರಿ ಕ್ಷೇತ್ರವನ್ನಾಗಿಸಲು ನಿಮ್ಮ ಸಹಭಾಗಿತ್ವವು ಮುಂದುವರೆಯಬೇಕೆಂದು ಕೋರುತ್ತಿದ್ದೇವೆ. ಭಾರತದ ಅಭ್ಯುದಯಕ್ಕೆ, ಕರ್ನಾಟಕದ ಏಳಿಗೆಗೆ, ಬೆಂಗಳೂರಿನ ಅಭಿವೃದ್ಧಿಗೆ, ಮಹದೇವಪುರ ಕ್ಷೇತ್ರದ ಪ್ರಗತಿಗೆ ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು ನೀಡಿರುವ ಅಸಾಮಾನ್ಯ ಕೊಡುಗೆಗಳನ್ನು ನೀವು ಗುರುತಿಸಬೇಕು, ತನ್ಮೂಲಕ ಬಿಜೆಪಿಗೆ ನೀವು ನೀಡುತ್ತಿರುವ ಆಶೀರ್ವಾದ – ಬೆಂಬಲವನ್ನು ಮುಂದುವರೆಸಬೇಕು ಎಂಬುದೇ ನನ್ನ ವಿನಮ್ರ ಮನವಿ.

ಮುಂಚೂಣಿಯಲ್ಲಿ ಮಹದೇವಪುರ

ಮಹದೇವಪುರ ವಿಧಾನಸಭಾ ಕ್ಷೇತ್ರವು ಮಾಹಿತಿ ತಂತ್ರಜ್ಞಾನ(ಐ.ಟಿ.), ಸಾಫ್ಟ್-ವೇರ್ ಹಾಗೂ ಇತರೆ ಉದ್ಯಮಗಳಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ. ಅಲ್ಲದೆ ಕರ್ನಾಟಕ ರಾಜ್ಯದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. ೨೦೦೮-೧೩ ರ ಅವಧಿಯ ಬಿಜೆಪಿ ಆಡಳಿತದಲ್ಲಿ ಮಹದೇವಪುರ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ ಅನುದಾನ ಹರಿದು ಬಂತು. ಅದರ ಫಲವಾಗಿ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾಮಗಾರಿಗಳು ನಡೆದವು. ಮಹದೇವಪುರ ಕ್ಷೇತ್ರವು ಈಗಾಗಲೇ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವಾಗಿ ರೂಪುಗೊಳ್ಳುತ್ತಿದೆ.

ಕಳೆದ ಹತ್ತು ವರ್ಷಗಳಿಂದ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕನಾಗಿರುವ ನನಗೆ ಕ್ಷೇತ್ರದ ಅಭಿವೃದ್ಧಿಗೆ, ಜನರ ಸೌಕರ್ಯಗಳಿಗೆ ದುಡಿದ ಹೆಮ್ಮೆ, ಖುಷಿ ಇದೆ. ಜನಪರ ಕೆಲಸಗಳನ್ನು ಕೈಗೊಂಡು ಸರ್ಕಾರ ಹಾಗೂ ಸಮಾಜದ ಮಧ್ಯದ ಕೊಂಡಿಯಾಗಿ, ಸಮಾಜಮುಖಿ ಶಾಸಕನಾಗಿ ದುಡಿಯುತ್ತಿರುವ ತೃಪ್ತಿ ನನ್ನದಾಗಿದೆ.

ಡಿಜಿಟಲ್ ಭಾರತದ ನವನಿರ್ಮಾಣದ ಈ ಹೊತ್ತಿನಲ್ಲಿ ಮಹದೇವಪುರದಲ್ಲಿ ಮಾಡಬಹುದಾದ ಅಭಿವೃದ್ಧಿ ಕಾರ್ಯಗಳು ಇನ್ನೂ ಸಾಕಷ್ಟಿವೆ. ಇರುವ ಸೌಕರ್ಯಗಳಲ್ಲಿ ಉತ್ಕೃಷ್ಟ ಗುಣಮಟ್ಟ ಸಾಧಿಸುವುದು, ಹೊಸ ಮತ್ತು ಅತ್ಯಾಧುನಿಕ ಸೇವೆಗಳನ್ನು ವೈಜ್ಞಾನಿಕವಾಗಿ ಜಾರಿಗೊಳಿಸುವುದು – ಇದು ನನ್ನ ಆಶಯವಾಗಿದೆ.

ಈ ಹಿನ್ನೆಲೆಯಲ್ಲಿ ತಾವೆಲ್ಲರೂ ಈ “ಜನಹಿತ” ಎಂಬ ಮಹದೇವಪುರದ ಅಭ್ಯುದಯದ ಹೆಜ್ಜೆಗುರುತುಗಳನ್ನು ದಾಖಲಿಸಿರುವ ಪುಸ್ತಕವನ್ನು ಓದಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.

ಈ ಪುಸ್ತಕದ ಬಗ್ಗೆ, ಮಹದೇವಪುರದಲ್ಲಿ ಮುಂದಿನ ದಿನಗಳಲ್ಲಿ ಆಗಬೇಕಿರುವ ನಿಮ್ಮ ಪ್ರದೇಶದ ಕೆಲಸ ಕಾರ್ಯಗಳ ಬಗ್ಗೆ ನನಗೆ ನೇರವಾಗಿ arvindlimbavali@gmail.com ಇದಕ್ಕೆ ಇಮೇಲ್ ಮಾಡಿರಿ.

ಬನ್ನಿ, ಮಹದೇವಪುರವನ್ನು ಬೆಂಗಳೂರಿನ ಅಭಿವೃದ್ಧಿ ಮುಕುಟಮಣಿ ಮಾಡೋಣ.

ಸಾಧನೆಗಳು ೨೦೧೮ – 2