ಫೆಬ್ರುವರಿ 19ರಂದು ಮೈಸೂರಿನಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಉಸ್ತುವಾರಿಯಾಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಸಂತೋಷವನ್ನು ನಮ್ರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಪ್ರಧಾನ ಮಂತ್ರಿಗಳು ಫೆಬ್ರುವರಿ 4ರಂದು ಬೆಂಗಳೂರು ಅರಮನೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮದ ಜವಾಬ್ದಾರಿ, ಉಸ್ತುವಾರಿಯೂ ನನ್ನ ಮೇಲಿತ್ತು.

ಮೋದಿಜೀ ಯವರ ಫೆ 4ರ ಬೆಂಗಳೂರಿನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಫೆ. 19ರಂದು ಮೈಸೂರಿನಲ್ಲಿ ನಡೆದ ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಉಸ್ತುವಾರಿಯನ್ನೂ ನನಗೆ ವಹಿಸಿಲಾಗಿತ್ತು.

ಈ ಕಾರ್ಯಕ್ರಮಕ್ಕೆ ಹಲವು ದಿನಗಳ ಮೊದಲೇ ಪೂರ್ವತಯಾರಿಯನ್ನು ಆರಂಭಿಸಿದ್ದು ಅಲ್ಲದೆ ಫೆ. 17ರಂದು ಮತ್ತೆ ಮೈಸೂರಿಗೆ ಬಂದು ಸಂಪೂರ್ಣವಾಗಿ ಕಾರ್ಯಕ್ರಮದ ಪೂರ್ವಸಿದ್ಧತೆಯಲ್ಲಿ ತೊಡಗಿಕೊಂಡು ಕಾರ್ಯಕರ್ತರು, ಅಧಿಕಾರಿಗಳು, ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರ ಜೊತೆ ಸಮಾಲೋಚಿಸಿ ಇಡೀ ಕಾರ್ಯಕ್ರಮದ ಸ್ವರೂಪವನ್ನು ಆಯೋಜಿಸಲಾಯಿತು.

ಫೆ. 18 ರಂದು ಪ್ರಧಾನ ಮಂತ್ರಿಗಳನ್ನು ಮೈಸೂರಿನಲ್ಲಿ ವಿಮಾನನಿಲ್ದಾಣದಲ್ಲಿ ಸ್ವಾಗತಿಸಿದೆ. ಫೆ.19 ರಂದು ನಡೆದ ಸಭೆಯಲ್ಲಿ ವೇದಿಕೆಯಲ್ಲಿ ಭಾಷಣ ಮಾಡುವ ಅವಕಾಶವೂ ನನ್ನ ಪಾಲಿಗೆ ಒದಗಿತು. ನಂತರ ಶ್ರೀ ನರೇಂದ್ರ ಮೋದಿಜೀ ಯವರನ್ನು ಮೈಸೂರಿನಿಂದ ಬೀಳ್ಗೊಟ್ಟು ರೈಲ್ವೆ ಸಚಿವ ಶ್ರೀ ಪಿಯೂಷ್ ಗೋಯಲ್ ರೊಡನೆ ರೈಲಿನಲ್ಲಿ ಬೆಂಗಳೂರಿಗೆ ಹಿಂದಿರುಗಿದೆ. ಇಡೀ ಸಭೆಯ ಹಾಗೂ ವೇದಿಕೆ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ನನ್ನದಾಗಿದೆ.

ಸಂಘಟನೆಯ ಹಿನ್ನೆಲೆಯಿಂದ ಬಂದ ನನ್ನ ಮೇಲೆ ನಂಬಿಕೆ ಇಟ್ಟು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಉಸ್ತುವಾರಿ ಜವಾಬ್ದಾರಿಯನ್ನು ನನಗೆ ವಹಿಸಿದ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ನಾನು ಚಿರ ಋಣಿಯಾಗಿದ್ದೇನೆ.