ಮೈಸೂರಿನಲ್ಲಿ‌ ನರೇಂದ್ರ‌ ಮೋದಿ ಕಾರ್ಯಕ್ರಮ ಮುಗಿದ ಬಳಿಕ ಕೇಂದ್ರ‌ ರೈಲ್ವೆ ಸಚಿವ ಪಿಯುಷ್ ಗೋಯೆಲ್ ಅವರು‌‌ ಮೈಸೂರಿನಿಂದ‌ ಬೆಂಗಳೂರಿನ ತನಕ ರೈಲಿನಲ್ಲಿಯೇ‌ ಸಾಮಾನ್ಯ ಪ್ರಯಾಣಿಕನಾಗಿ‌ ಸಂಚರಿಸಿದರು.
ಈ ಸಂದರ್ಭದಲ್ಲಿ‌ ರೈಲಿನ ಪ್ರಯಾಣಿಕರೊಂದಿಗೆ ಬೆರೆತ ಅವರು‌ ಅವರ ಕುಂದುಕೊರತೆಗಳನ್ನು‌‌ ಆಲಿಸಿದರು ಹಾಗೂ ರೈಲು ಸೇವೆಯನ್ನು‌ ಇನ್ನಷ್ಟು‌ ಉತ್ತಮಪಡಿಸಲು ಸಲಹೆ-ಸೂಚನೆಗಳನ್ನು ಪಡೆದರು.
ಪ್ರಧಾನ ಮಂತ್ರಿಗಳ ಮೈಸೂರು‌ ಕಾರ್ಯಕ್ರಮದ ಉಸ್ತುವಾರಿಯಾಗಿದ್ದ ನಾನೂ‌ ಸಹ ರೃಲ್ವೆ ಸಚಿವರ ಜೊತೆ ಪ್ರಯಾಣಿಸಿದೆ. ಈ ಸಂದರ್ಭದಲ್ಲಿ ಅವರ ಜೊತೆ ಚರ್ಚೆ ನಡೆಸುವ ಅವಕಾಶ ದೊರೆಯಿತು.

ಮಾನ್ಯ ರೇಲ್ವೇ ಸಚಿವರೊಡನೆ ಬೆಂಗಳೂರಿನ ಸಬರ್ಬನ್ ರೈಲಿನ ಬಗ್ಗೆ ಸುದೀರ್ಘವಾದ ಮಾತುಕತೆ ನಡೆಸಿದೆ. ಅವರು ಸಾಮಾನ್ಯ ಪ್ರಯಾಣಿಕರ ಜೊತೆ ನಡೆಸಿದ ಚರ್ಚೆ, ಮಾತುಕತೆ, ಸಲಹೆ ಸ್ವೀಕರಿಸಿದ ರೀತಿ ನೋಡುತ್ತಿದ್ದಾಗ ಮೋದಿಜಿ ನೇತೃತ್ವದಲ್ಲಿ ಆಡಳಿತ ಹಾಗೂ ಸುಶಾಸನವು ಜಾರಿಗೆ ಬರುತ್ತಿರುವ ಅನುಭವ ಗಟ್ಟಿಯಾಯ್ತು.