ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ರಾಜ್ಯದ ರಾಜಧಾನಿಯಲ್ಲಿ‌ ನಡೆಯುತ್ತಿರುವ ಗೂಂಡಾಗಿರಿಯನ್ನು‌ ಖಂಡಿಸಿ ನಡೆಯುತ್ತಿರುವ ‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆ ಇಂದು ಮಹದೇವಪುರ ತಲುಪಿತು.
ಈ ಸಂದರ್ಭದಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ನಾನು ಮಾತನಾಡಿದೆ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯ ರಾಜಧಾನಿಯ ಜನರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಕರ್ನಾಟಕ ಲೋಕಾಯುಕ್ತರ ಮೇಲಿನ ದಾಳಿ ಕುರಿತು ಮಾತನಾಡಿದೆ.
ಜೊತೆಗೆ ಮಾದಕ ದ್ರವ್ಯಗಳ ಹಾವಳಿಯಿಂದ ಬೆಂಗಳೂರಿನ ಜನರು ಎದುರಿಸುತ್ತಿರುವ ಸಮಸ್ಯೆಗಳ‌ ಮೇಲೂ ಬೆಳಕು ಚೆಲ್ಲಿದೆ. ಸಿಗ್ನಲ್ ರಹಿತ ಕಾರಿಡಾರ್ ನಿರ್ಮಿಸಲು ಹಾಗೂ ಡಿಜಿಟಲ್ ಗ್ರಂಥಾಲಯ ನಿರ್ಮಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಇದೇ ವೇಳೆ ಬೆಂಗಳೂರು ಉಪನಗರಿ ರೈಲು‌ ಜಾಲದ‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ರೂ 17000 ಕೋಟಿ ಮಂಜೂರು ಮಾಡಿದೆ. ಆದರೆ ರಾಜ್ಯ ಸರ್ಕಾರ ಹಣ ಮಂಜೂರು ಮಾಡಿಲ್ಲ. ಮುಂತಾದ ವಿಚಾರಗಳನ್ನು ಈ‌ ಸಂದರ್ಭದಲ್ಲಿ ಉಲ್ಲೇಖಿಸಿದೆ.
ಸಹಸ್ರಾರು ಸಂಖ್ಯೆಯಲ್ಲಿ ‌ಈ ಪಾದಯಾತ್ರೆಯಲ್ಲಿ ಭಾಗವಹಿಸಿದ ಜನರು ಕಾಂಗ್ರೆಸ್‌ ಪಕ್ಷದ ಗೂಂಡಾಗಿರಿ ಮತ್ತು ದುರಾಡಳಿತಕ್ಕೆ ಕೊನೆ ಹಾಡುವ ಪಣ ತೊಟ್ಟರು. ಕೇಂದ್ರ ಸಚಿವರಾದ ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸಂಸದರಾದ ಪಿ.ಸಿ. ಮೋಹನ್ ಮತ್ತು ಇತರ ಬಿಜೆಪಿ ಮುಖಂಡರು ಹಾಜರಿದ್ದರು.