ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಕಾಶ್ ಜಾವಡೆಕರ್
ಮತ್ತು ಮಾನ್ಯ ಸಂಸತ್ ಸದಸ್ಯರಾದ ಶ್ರೀ ಪಿ ಸಿ ಮೋಹನ್ ರವರೊಂದಿಗೆ ಬೆಳ್ಳಂದೂರು ಕೆರೆ (ಕೋರಮಂಗಲ – ಈಜಿಪುರ ಸಿಗ್ನಲ್ ಬಳಿ) ಪರಿವೀಕ್ಷಣೆ ನಡೆಸಿ, ಕೆಳಕಂಡ ವಿಷಯಗಳನ್ನು ಚರ್ಚಿಸಲಾಯಿತು.
1. ಎನ್ ಜಿ ಟಿ ಯ ಹೊರತಾಗಿಯೂ ಸಹ ರಾಜ್ಯ ಸರ್ಕಾರ ಕೆರೆಗಳನ್ನು ಸ್ವಚ್ಛಗೊಳಿಸುವಲ್ಲಿ ಆಸಕ್ತಿ ಅಥವಾ ಕ್ರಮ ತೆಗೆದುಕೊಂಡಿಲ್ಲ.
2. ಕೇಂದ್ರ ಸರ್ಕಾರ ನಿಧಿಯನ್ನು ನೀಡಿದರೂ ಸಹ ರಾಜ್ಯ ಸರ್ಕಾರ ಅದನ್ನು ಬಳಸಿಕೊಳ್ಳಲು ವಿಫಲವಾಗಿದೆ.
ಪರಿಸರ ಸಚಿವರಾಗಿ ಶ್ರೀ ಪ್ರಕಾಶ್ ಜಾವಡೆಕರ್ ರವರು 800 ಕೋಟಿಯನ್ನು 2016 ರಲ್ಲೇ ಕೆರೆಗಳ ಸ್ವಚ್ಚತಾ ಕಾರ್ಯಕ್ಕೆ ಬಿಡುಗಡೆ ಮಾಡೆದ್ದರು ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ ನಿದ್ದೆ ಮಾಡುತ್ತಿದೆ.
3. ಚರಂಡಿ ಸಂಸ್ಕರಣ ಘಟಕ ಸ್ಥಾಪಿತವಾಗಿಲ್ಲ.
4. ಸಂಸ್ಕರಿಸದ ಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯ ನೇರವಾಗಿ ಕೆರೆಯಲ್ಲಿ ಬಿಡುಗಡೆಯಾಗುತ್ತಿದೆ.

ಕೇಂದ್ರ ಸಚಿವರಾದ ಶ್ರೀ ಪ್ರಕಾಶ್ ಜಾವಡೆಕರ್ ರವರು ತಪಾಸಣೆ ನಡೆಸಿದ ನಂತರ ಸೂಕ್ತ ಮತ್ತು ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.