ಶಾಸಕ ಮತ್ತು ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿ ಅವರು ಇಮ್ಮಡಿಹಳ್ಳಿಯ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಸಕರು ಭಕ್ತಾದಿಗಳಿಗೆ ಪ್ರಸಾದವನ್ನು ಖುದ್ದಾಗಿ ಬಡಿಸಿದರು.

ರಥೋತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟವನ್ನೂ ವೀಕ್ಷಿಸಿದ ಇವರು ವಿಜೇತರಿಗೆ ಪ್ರಶಸ್ತಿ ನೀಡಿದರು. ಇದೇ ವೇಳೆ ಇಲ್ಲಿನ ದ್ರೌಪದಮ್ಮ ದೇವಸ್ಥಾನಕ್ಕೂ ಭೇಟಿ ನೀಡಿ ಆಶೀರ್ವಚನ ಪಡೆದರು.