ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಯುವಶಕ್ತಿ ಯಾತ್ರೆಯ ಬೈಕ್‌ ರ‍್ಯಾಲಿಯಲ್ಲಿ ಸಾವಿರಾರು ಯುವಕರು ಭಾಗವಹಿಸಿದ್ದು, ಕ್ಷೇತ್ರದ ಬಿಜೆಪಿ ಯುವ ಶಕ್ತಿಗೆ ಈ ಯಾತ್ರೆ ಸಾಕ್ಷಿಯಾಯಿತು.
ಈ ಯಾತ್ರೆಯನ್ನು ನಾನು ಉದ್ಘಾಟಿಸಿದೆ. ಯುವಜನರು ಈ ಕಾರ್ಯಕ್ರಮದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ತಾವು ಬಿಜೆಪಿ ಪರವಾಗಿ ಪ್ರಮುಖ ಪಾತ್ರ ವಹಿಸಲಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದರು.
ನಮ್ಮ ನಿರೀಕ್ಷೆ ಸುಮಾರು 1,500 ಬೈಕ್ ಗಳು. ಆದರೆ 5,000ಕ್ಕಿಂತಲೂ ಹೆಚ್ವು ಬೈಕ್ ಗಳು ಮತ್ತು 8,000 ಯುವಜನರು ಈ ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ಹೊಸ ದಾಖಲೆ ಬರೆದರು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ರಾಜಾ ರೆಡ್ಡಿ, ನಟರಾಜ್, ಕಾರ್ಪೊರೇಟರ್ಸ್ ಮತ್ತು ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.