ಬೆಂಗಳೂರಿನ 27 ಶಾಸಕರ ಪೈಕಿ ಸ್ಥಳೀಯ ಅಭಿವೃದ್ಧಿ ನಿಧಿ ಬಳಕೆಯಲ್ಲಿ ನಾನು ಎರಡನೇ ಸ್ಥಾನದಲ್ಲಿರುವುದು ನನಗೆ ಅತೀವ ತೃಪ್ತಿ ತಂದಿದೆ. ನನಗೆ ದೊರೆತಿರುವ ನಿಧಿಯಲ್ಲಿ ಗರಿಷ್ಠ ಪಾಲನ್ನು ಜನರ ಉದ್ಧಾರಕ್ಕಾಗಿ ಬಳಸಿದ್ದೇನೆ ಎನ್ನುವ ಸಮಾಧಾನ ನನ್ನ ಪಾಲಿಗೆ ಇದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ತಾರತಮ್ಯದಿಂದಾಗಿ ಮಹದೇವಪುರ ಕ್ಷೇತ್ರಕ್ಕೆ ಸರಿಯಾಗಿ ಅಭಿವೃದ್ಧಿ ನಿಧಿ ಬಿಡುಗಡೆಯಾಗಿಲ್ಲ ಎನ್ನುವ ಬೇಸರ ನನಗಿದೆ.

ಈ ಎಲ್ಲಾ ಇತಿಮಿತಿಗಳ ನಡುವೆ ಕಳೆದ ಐದು ವರ್ಷಗಳಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಮೂಲಭೂತ ಸೌಕರ್ಯದ ಅಭಿವೃದ್ಧಿ ಮಾಡುವ ಅವಕಾಶ ನನಗೆ ದೊರೆಯಿತು. ಇರುವ ಇತಿಮಿತಿಯಲ್ಲಿ ಇಷ್ಟು ಅಭಿವೃದ್ಧಿ ಕೆಲಸಗಳನ್ನು ನನ್ನ ಮಹದೇವಪುರದ ಜನತೆಗೆ ಮಾಡಿದ ಧನ್ಯತೆ ಇದೆ.ಈ ಕ್ಷೇತ್ರದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಮತದಾರರಿಗೆ ನಾನು ಚಿರ ಋಣಿಯಾಗಿದ್ದೇನೆ. ಅಲ್ಲದೆ ನನ್ನ ಸಾಧನೆಯನ್ನು ಗುರುತಿಸಿದ ಬಿಪ್ಯಾಕ್ ಸಂಸ್ಥೆಗೂ ಧನ್ಯವಾದಗಳು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ನೀವು ನನ್ನೊಂದಿಗಿದ್ದೀರಿ ಎನ್ನುವ ಭರವಸೆ ನನಗಿದೆ.ಮುಂದೆ ಆಡಳಿತಕ್ಕೆ ಬರುವ ಬಿಜೆಪಿ ರಾಜ್ಯಸರ್ಕಾರದ ಅವಧಿಯಲ್ಲಿ ಮಹದೇವಪುರ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ತಂದು ಈ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆಂಬ ಸಂಕಲ್ಪವಿದೆ.