ಮಹದೇವಪುರ ವಿಧಾನಸಭಾ ಕ್ಷೇತ್ರ: ಅಭಿವೃದ್ಧಿ ಪರ್ವ

ನಾನು ಕಳೆದ ಹತ್ತು ವರ್ಷಗಳಿಂದ ಪ್ರತಿನಿಧಿಸುತ್ತಿರುವ ಮಹದೇವಪುರ ಕ್ಷೇತ್ರದಲ್ಲಿ ನಡೆದಿರುವ/ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಕಾಮಗಾರಿಗಳ ಒಂದು ಸ್ಥೂಲ ಚಿತ್ರಣವನ್ನು ನಿಮ್ಮ ಮುಂದಿಡಲು ಸಂತಸವಾಗುತ್ತಿದೆ.

ಕೆರೆಗಳ ಅಭಿವೃದ್ಧಿ, ಸಾರ್ವಜನಿಕ ಜಾಗ ರಕ್ಷಣೆ

ಕೈಕೊಂಡರಹಳ್ಳಿ ಕೆರೆ, ಅಂಬಲೀಪುರ ಕೆರೆ, ಹರಳೂರು ಕೆರೆ, ಕಸವನಹಳ್ಳಿ ಕೆರೆ, ದೊಡ್ಡಕನ್ನಳ್ಳಿ ಕೆರೆ, ಮುನ್ನೇಕೊಳಾಲು ಕೆರೆ, ಚಿನ್ನಪ್ಪನ ಹಳ್ಳಿ ಕೆರೆ, ದೊಡ್ಡನೆಕ್ಕುಂದಿ ಕೆರೆ, ಕುಂದಲಹಳ್ಳಿ ಕೆರೆ ಹಾಗೂ ಶೀಲವಂತನ ಕೆರೆಗಳ ಅಭಿವೃದ್ಧಿಯಾಗಿದೆ. ಸಿದ್ದಾಪುರ ಕೆರೆ, ಪಣತ್ತೂರು ಕೆರೆ, ಹೂಡಿ ಕೆರೆ, ದೇವರಬಿಸನಹಳ್ಳಿ ಕೆರೆ, ಗರುಡಾಚಾರ್ ಪಾಳ್ಯ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ.

ಆಂಗ್ಲ ಮಾಧ್ಯಮ ತರಗತಿಗಳು

ಕ್ಷೇತ್ರದಲ್ಲಿನ ಬಹುತೇಕ ಎಲ್ಲ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗಿದೆ.

೧೩೦ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣ

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದನ್ನು ಅರಿತು ಸುಮಾರು ೧೩೦ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ಸರ್ಕಾರ ಮತ್ತು ಪಿ.ಪಿ.ಪಿ. ಮಾದರಿಯಲ್ಲಿ ನಿರ್ಮಿಸಿ ಕೊಠಡಿಗಳ ಸಮಸ್ಯೆಯನ್ನು ಪರಿಹರಿಸಲಾಗಿದೆ. ಹಾಗೆಯೇ ನೀರು ವ್ಯವಸ್ಥೆ ಇರುವ ಶೌಚಾಲಯಗಳನ್ನೂ ನಿರ್ಮಿಸಲಾಗಿದೆ.

ಸಾಧನೆಗಳು ೨೦೧೮ – 2