ರಾಜ್ಯದಲ್ಲಿ ನಡೆಯುತ್ತಿರುವ ಮುಷ್ಠಿ ಧಾನ್ಯ ಅಭಿಯಾನ ಮತ್ತು ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ವಿಫಲವಾಗಿರುವ ಕುರಿತು ಮಾಧ್ಯಮದ ಗಮನ ಸೆಳೆಯಲು ಕರೆದ ಪತ್ರಿಕಾಗೋಷ್ಠಿಯಲ್ಲಿ ನಾನು ಭಾಗವಹಿಸಿದೆ. ಮುಷ್ಠಿ ಧಾನ್ಯ ಅಭಿಯಾನವು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಯಡಿಯೂರಪ್ಪ ಅವರ ಹುಟ್ಟುಹಬ್ಬದಂದು ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರಂಭಗೊಂಡಿತ್ತು. ಇದರ ಮುಂದುವರಿದ ಅಂಗವಾಗಿ ರಾಜ್ಯದಾದ್ಯಂತ ಪ್ರತೀ ರೈತರ ಮನೆಗೆ ಭೇಟಿ ನೀಡಲಿರುವ ಬಿಜೆಪಿ ಕಾರ್ಯಕರ್ತರು ರೈತರ ಬಗ್ಗೆ ಕಾಂಗ್ರೆಸ್ ನ ನಿರ್ಲಕ್ಷ್ಯ ಧೋರಣೆ ಮತ್ತು ಬಿಜೆಪಿಯ ರೈತಪರ ನಿಲುವನ್ನು ವಿವರಿಸಲಿದ್ದಾರೆ. ಜೊತೆಗೆ ರೈತಬಂಧು ಯಡಿಯೂರಪ್ಪ ಅವರ ಚಿತ್ರವಿರುವ ಚೀಲ ಕೊಂಡೊಯ್ದು ಅದರಲ್ಲಿ ಸಾಂಕೇತಿಕವಾಗಿ ಧಾನ್ಯ ಸ್ವೀಕರಿಸಲಿದ್ದಾರೆ.
ಈ ತಿಂಗಳಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಸಂಪೂರ್ಣ ಸಮಾವೇಶದಲ್ಲಿ ಪಕ್ಷದ ಹಿರಿಯ ನಾಯಕರು ಪಾಲ್ಗೊಂಡು ರೈತರ ಅಭ್ಯುದಯಕ್ಕಾಗಿ ಪ್ರತಿಜ್ಞೆ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ರೈತರಿಂದ ಸಂಗ್ರಹಿಸಿದ ಧಾನ್ಯದಿಂದಲೇ ಅಡುಗೆ ಮಾಡಿ ಎಲ್ಲರಿಗೂ ಉಣಬಡಿಸಲಾಗುವುದು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಶ್ರೀ ಪ್ರಕಾಶ್ ಜಾವಡೇಕರ್ ಮತ್ತು ಇತರ ಹಿರಿಯ ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರದ ವೈಫಲ್ಯತೆಗಳ ಕುರಿತು ಬೆಳಕು ಚೆಲ್ಲಿದೆ ಹಾಗೂ ಮುಷ್ಠಿ ಧಾನ್ಯ ಅಭಿಯಾನದ ಪ್ರಾಮುಖ್ಯತೆ ವಿವರಿಸಿದೆ. ಜೊತೆಗೆ ಮುಂದೆ ಬರಲಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರೈತರಿಗಾಗಿ ಏನೇನು ಮಾಡಬಹುದು ಎಂಬ ಕುರಿತು ಸಲಹೆ ನೀಡಿದೆ.