ಮೋದಿ ಹಾದಿ: ಭಾರತದ ಪ್ರಗತಿಗೆ ನಾಂದಿ

ಇಡೀ ಭಾರತವೇ ಬದಲಾವಣೆಯ ಕ್ರಾಂತಿಯ ಹಾದಿಯಲ್ಲಿ ಸಾಗುತ್ತಿದೆ. ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿ.ಜೆ.ಪಿ ಸರ್ಕಾರವು ದೇಶದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕ್ರಾಂತಿಯನ್ನೇ ನಡೆಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶದ ಜನಸಾಮಾನ್ಯರಿಗಾಗಿ ಕೈಗೊಳ್ಳುತ್ತಿರುವ ಜನಹಿತಕಾರಿ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಸುಧಾರಣೆಗಳು ಇಡೀ ವಿಶ್ವದ ಗಮನ ಸೆಳೆದಿವೆ. ವಿಶ್ವದ ಜನತೆಯು ಭಾರತದತ್ತ ಅಚ್ಚರಿಯಿಂದ ನೋಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತತ್ವ ಮತ್ತು ಸಿದ್ಧಾಂತಗಳು
ಎಲ್ಲಾ ಧರ್ಮ ಮತ್ತು ಸಮುದಾಯಗಳು ಸಮಾನ ಹಕ್ಕನ್ನು ಹೊಂದಿದ್ದು, ಅವರೆಲ್ಲರ ಸಂಪೂರ್ಣ ರಕ್ಷಣೆಯ ಹೊಣೆ ನನ್ನದು. ಜಾತಿ, ಜನಾಂಗ ಮತ್ತು ಧರ್ಮ ಸಂಬಂಧಿತ ಯಾವುದೇ ತಾರತಮ್ಯವನ್ನು ನನ್ನ ಸರ್ಕಾರ ಸಹಿಸದು.
……………………………………………………………….
ನನ್ನ ಸರ್ಕಾರ ಜನಸಾಮಾನ್ಯನಿಗಾಗಿ ಶ್ರಮಿಸುತ್ತಿದೆ. ದೇಶದ ಬಡವರಿಗೆ ನಮ್ಮ ಪ್ರಮುಖ ಆದ್ಯತೆ. ಬಲಿಷ್ಠ ಮತ್ತು ಕ್ರಿಯಾಶೀಲ ಸರ್ಕಾರದ ಮೂಲಕ ಉತ್ತಮ ಆಡಳಿತ ನೀಡುವುದು ನಮ್ಮ ಆಶಯ.
……………………………………………………………….
ಅನುಭವ ಮತ್ತು ಶಿಕ್ಷಣದಿಂದ ಕಲಿಯುವುದು ಅತಿ ಅಗತ್ಯ. ನೀವು ನಿಮ್ಮ ಅನುಭವದಿಂದ ಎಷ್ಟು ಕಲಿಯುತ್ತೀರಿ ಎಂಬುದನ್ನು ನಿಮ್ಮ ಶಿಕ್ಷಣ ಮತ್ತು ಮೌಲ್ಯಗಳು ನಿರ್ಧರಿಸುತ್ತವೆ.
 

ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಬಿ.ಜೆ.ಪಿ ಕೇಂದ್ರ ಸರ್ಕಾರದ ಸಾಧನೆಗಳ ಒಂದು ಪಕ್ಷಿ ನೋಟ:

 • ನೋಟುಬಂದಿ (ಡಿಮಾನಿಟೈಸೇಶನ್)ಯಿಂದ ಕಪ್ಪುಹಣವನ್ನು ನಿಯಂತ್ರಿಸಿ ಭಾರತದ ಆರ್ಥಿಕತೆಯನ್ನು ಗಮನಾರ್ಹವಾಗಿ ಸುಧಾರಿಸಲಾಗಿದೆ. ಭಾರತದ ಹಣಕಾಸು ವ್ಯವಸ್ಥೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಈ ಕ್ರಮದಿಂದ ಭಾರತದ ಸುರಕ್ಷತೆಗೆ ವಿರೋಧಿಯಾಗಿದ್ದ ಭಯೋತ್ಪಾದನೆ ಹಾಗೂ ನಕ್ಸಲಿಸಂಗೆ ಭಾರೀ ಹೊಡೆತ ಬಿದ್ದಿದೆ.
 • ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತವು ೬೦ನೆಯ ಸ್ಥಾನದಿಂದ ೩೯ನೆಯ ಸ್ಥಾನಕ್ಕೆ ಮೇಲೇರಿದೆ.
 • ‘ಪ್ರಧಾನ ಮಂತ್ರಿ ಜನ್‌ಧನ್’ ಯೋಜನೆಯಡಿ ಆರ್ಥಿಕ ಕ್ರಾಂತಿಯಾಗಿದೆ; ಜನಸಾಮಾನ್ಯರ ೨೯.೫೨ ಕೋಟಿ ಬ್ಯಾಂಕ್ ಖಾತೆಗಳು ತೆರೆದಿವೆ. ೨೨.೭೧ ಕೋಟಿ ಕಾರ್ಡ್‌ಗಳು ವಿತರಣೆಯಾಗಿವೆ.
 • ‘ಮುದ್ರಾ’ ಯೋಜನೆಯಡಿಯಲ್ಲಿ ೮.೬ ಕೋಟಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ೩.೯೮ ಲಕ್ಷ ಕೋಟಿ ರೂ. ಸಾಲ ವಿತರಣೆಯಾಗಿದ್ದು, ಇದರಲ್ಲಿ ಶೇಕಡ ೫೫ರಷ್ಟು ಫಲಾನುಭವಿಗಳು ದಲಿತರು ಹಾಗೂ ಬುಡಕಟ್ಟು ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ; ಶೇಕಡಾ ೭೦ರಷ್ಟು ಫಲಾನುಭವಿಗಳು ಮಹಿಳೆಯರು.
 • ಪ್ರಧಾನಮಂತ್ರಿ ಜನಸುರಕ್ಷಾ ಯೋಜನೆಯಡಿ ೧೪.೯೯ ಕೋಟಿ ನಾಗರಿಕರಿಗೆ ವಿಮೆ ಸೌಲಭ್ಯ ದೊರೆತಿದೆ.
 • ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ೪೭ ಲಕ್ಷ ಬಡ ಕುಟುಂಬಗಳಿಗೆ ಮನೆಗಳು ನಿರ್ಮಾಣವಾಗಿವೆ.
 • ‘ಯುವ ಭಾರತ್ ಶ್ರೇಷ್ಠ ಭಾರತ್ – ದೀನದಯಾಳ್ ಗ್ರಾಮೀಣ ಕೌಶಲ್ಯ’ ಯೋಜನೆಯಡಿಯಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಕ್ಕಿದೆ; ಸ್ವಉದ್ಯೋಗ ಯೋಜನೆಗಳು, ಕೌಶಲ್ಯ ತರಬೇತಿ, ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಗೆ ಒತ್ತು ನೀಡಲಾಗಿದೆ.
 • ‘ಪ್ರಧಾನಮಂತ್ರಿ ಕೌಶಲ್ಯ’ ಯೋಜನೆಯಡಿಯಲ್ಲ ೫೨.೮ ಲಕ್ಷ ಯುವಕರಿಗೆ ಉದ್ಯೋಗ ತರಬೇತಿ ನೀಡಿದ್ದು ಒಂದು ಕೋಟಿ ಯುವಕರಿಗೆ ಉದ್ಯೋಗ ತರಬೇತಿ ನೀಡುವ ಗುರಿ ಹೊಂದಲಾಗಿದೆ.
 • ‘ಬೇಟಿ ಬಚಾವೋ, ಬೇಟಿ ಪಡಾವೋ’ ಹಾಗೂ ‘ಇಂದ್ರಧನುಷ್’ ಯೋಜನೆಗಳಡಿಯಲ್ಲಿ ಹೆಣ್ಣು ಭ್ರೂಣಹತ್ಯೆ ತಡೆಗೆ ಒತ್ತು ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ.
 • ದೇಶಕ್ಕೆ ಸ್ವಾತಂತ್ರ್ಯ ಬಂದು ೬೯ ವರ್ಷಗಳು ಕಳೆದರೂ ವಿದ್ಯುಚ್ಛಕ್ತಿ ಕಾಣದಿದ್ದ ೧೮,೦೦೦ ಹಳ್ಳಿಗಳ ಪೈಕಿ ೧೪,೦೨೮ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಉಳಿದ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ.
 • ‘ದೀನದಯಾಳ್ ಅಂತ್ಯೋದಯ’ ಯೋಜನೆಯಡಿಯಲ್ಲಿ ೧.೨೦ ಲಕ್ಷ ಕುಟುಂಬಗಳಿಗೆ ರೂ. ೬೯,೦೦೦ ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ಸಮಾಜದ ದಲಿತ ಹಿಂದುಳಿದ ವರ್ಗಗಳಿಗೆ ಹಲವಾರು ಯೋಜನೆಗಳು ಜಾರಿಯಾಗಿವೆ.
 • ‘ಪ್ರಧಾನಮಂತ್ರಿ ಉಜ್ವಲ’ ಯೋಜನೆಯಡಿಯಲ್ಲಿ ೩ ಕೋಟಿ ಬಡ ಹೆಣ್ಣುಮಕ್ಕಳಿಗೆ ಎಲ್.ಪಿ.ಜಿ ಕನೆಕ್ಷನ್‌ಗಳ ಸೌಲಭ್ಯ.
 • ಭಾರತವು ಜಗತ್ತಿನಲ್ಲಿ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಅರ್ಧಿಕತೆಯ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 • ‘ಪ್ರಧಾನಮಂತ್ರಿ ಫಸಲ್ ಭೀಮಾ’ ಯೋಜನೆಯಡಿಯಲ್ಲಿ ೩೭ ಕೋಟಿ ರೈತರಿಗೆ ವಿಮಾ ಸೌಲಭ್ಯ
 • ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ’ ಯೋಜನೆಯಡಿಯಲ್ಲಿ ೧೫.೮೬ ಲಕ್ಷ ಎಕರೆ ಭೂಮಿಗೆ ಡ್ರಿಪ್ ಇರಿಗೇಷನ್ ಹಾಗೂ ೭.೧೦ ಕೋಟಿ ಮಣ್ಣು ಆರೋಗ್ಯ ಕಾರ್ಡ್‌ಗಳ ವಿತರಣೆಯಾಗಿದೆ.
 • ‘ಸ್ವಚ್ಛ ಭಾರತ್ ಅಭಿಯಾನ’ ೨.೦೫ ಲಕ್ಷ ಹಳ್ಳಿಗಳಲ್ಲಿ ಹಾಗೂ ೪೮೦ ಪಟ್ಟಣಗಳಲ್ಲಿ ೪.೩ ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ; ೨,೬೦,೦೦೦ ಶಾಲೆಗಳಲ್ಲಿ ೪,೧೦,೦೦೦ ಶೌಚಾಲಯಗಳ ನಿರ್ಮಾಣವಾಗಿದೆ.
 • ಪವಿತ್ರ ಗಂಗಾ ನದಿಯ ನೈರ್ಮಲ್ಯಕ್ಕಾಗಿ ‘ನಮಾಮಿ ಗಂಗೆ’ ಯೋಜನೆ ಆರಂಭವಾಗಿದೆ.
 • ಶ್ರೀ ನರೇಂದ್ರ ಮೋದಿಯವರ ಪ್ರಯತ್ನದಿಂದ ಜೂನ್ ೨೧ನ್ನು ವಿಶ್ವ ಸಂಸ್ಥೆಯು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಲಾಗಿದೆ.
 • ಡಿಜಿಟಲ್ ಇಂಡಿಯಾ, ಸ್ಟ್ಪಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾದಂತಹ ಯೋಜನೆಗಳು ಲಕ್ಷಾಂತರ ನಿರುದ್ಯೋಗಿ, ಪ್ರತಿಭಾವಂತ ಯುವಕರಿಗೆ ವರದಾನಗಳಾಗಿದೆ.
 • ದೇಶದಾದ್ಯಂತ ೧೦೦ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕಾಗಿ ೭,೬೦೦ ಕೋಟಿ ರೂ. ಬಿಡುಗಡೆಯಾಗಿದೆ.
 • ಭಾರತದ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸಂಸದ್ ಆದರ್ಶ ಗ್ರಾಮ ಯೋಜನೆ ಜಾರಿಯಾಗಿದೆ.
 • ಪ್ರತಿದಿನವೂ ೨೨ ಕಿ.ಮೀ.ಗಳಂತೆ ಈಗಾಗಲೇ ದಾಖಲೆಯ ೧೮,೭೦೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದ್ದು ಉಳಿದ ಕೆಲಸ ಭರದಿಂದ ನಡೆದಿದೆ.
 • ದೂರಸಂಪರ್ಕ ತರಂಗಗಳ ಸ್ಪೆಕ್ಟ್ರಮ್ ಹರಾಜಿನಲ್ಲಿ ೧,೪೨,೪೩೪ ಕೋಟಿ ರೂ. ವರಮಾನ ದೊರೆತಿದೆ.
 • ಕಲ್ಲಿದ್ದಿಲಿನ ಗಣಿಗಳ ಪಾರದರ್ಶಕ ಹರಾಜಿನಲ್ಲಿ ೨ ಲಕ್ಷ ಕೋಟಿ ರೂ. ಅದಾಯ ಬಂದಿದೆ.
 • ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ದಿನಕ್ಕೆ ೧೩೩ ಕಿ.ಮೀ. ರಸ್ತೆ ನಿರ್ಮಾಣದಂತೆ ಈವರೆಗೆ ೧,೨೦,೨೩೩ ಕಿ.ಮೀ ಗ್ರಾಮೀಣ ರಸ್ತೆಗಳ ನಿರ್ಮಾಣವಾಗಿದೆ.
 • ಜಿಎಸ್‌ಟಿ ಎಂಬ ಹೊಸ ತೆರಿಗೆ ವ್ಯವಸ್ಥೆಯ ಮೂಲಕ ಐತಿಹಾಸಿಕ ಆರ್ಥಿಕ ಸುಧಾರಣೆ ಕೈಗೊಳ್ಳಲಾಗಿದೆ.
 • ಉಜಾಲಾ ಯೋಜನೆಯಡಿ ೨೧.೭ ಕೋಟಿ ಇಂಧನ ಸ್ನೇಹಿ ದಕ್ಷ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಲಾಗಿದೆ. ಇದರಿಂದ ವರ್ಷಂಪ್ರತಿ ೨೮ ದಶಲಕ್ಷ ಕಿಲೋವಾಟ್‌ಅವರ್(ಕೆಡಬ್ಲ್ಯುಎಚ್) ಇಂಧನ ಉಳಿತಾಯವಾಗುತ್ತಿದೆ; ಅಂದರೆ ವರ್ಷಕ್ಕೆ ೧೧,೩೧೨ ಕೋಟಿ ರೂ. ಉಳಿತಾಯ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದ ಮೂರೂವರೆ ವರ್ಷಗಳ ಆಡಳಿತದಲ್ಲಿ ಒಂದಿನಿತೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಡದೆ ಅತ್ಯಂತ ಪ್ರಾಮಾಣಿಕವಾದ, ಹಗರಣಗಳಿಂದ ಮುಕ್ತವಾದ ಕ್ರಿಯಾಶೀಲ ಸರ್ಕಾರವನ್ನು ಮುನ್ನಡೆಸಿದ್ದಾರೆ. ದೂರದೃಷ್ಟಿಯ ಹತ್ತು ಹಲವು ಯೋಜನೆಗಳ ಮೂಲಕ ಭಾರತವು ಅಭ್ಯುದಯದತ್ತ ದಾಪುಗಾಲಿಟ್ಟಿದೆ. ‘ಎಲ್ಲರೊಂದಿಗೆ, ಎಲ್ಲರ ವಿಕಾಸ‘ ಎಂಬ ಘೋಷಣೆಯನ್ನು ಶ್ರೀ ನರೇಂದ್ರ ಮೋದಿಯವರು ಸಾಕಾರಗೊಳಿಸಿದ್ದಾರೆ.

ಸಾಧನೆಗಳು ೨೦೧೩-೧೮

 • ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು - ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು ಮಹದೇವಪುರ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳಿಂದ ಸಾವಿರಾರು ಜನ ಪ್ರಯೋಜನ ಪಡೆದಿದ್ದಾರೆ. ಸಾಧನೆಗಳು ೨೦೧೩-೧೮… Continue Reading
 • ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… - ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… ಅಡುಗೆ ಅನಿಲ ವಿತರಣೆ ಸೂಲಿಕುಂಟೆ ಗ್ರಾಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ವಿತರಣೆ. ಆರೋಗ್ಯ… Continue Reading
 • ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… - ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… ಆರೋಗ್ಯ ವಿಮೆ ದೊಡ್ಡನೆಕ್ಕುಂದಿ ವಾರ್ಡಿನ ಸರ್ಕಾರಿ ಶಾಲೆಯ ಸುಮಾರು ೯೫೩ ಶಾಲಾ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಆರೋಗ್ಯ ವಿಮೆ… Continue Reading
 • ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… - ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್‌ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ… Continue Reading
 • ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… - ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… ಶಾಂತಿಯುತ ಸಹಬಾಳ್ವೆಯ ಮಹದೇವಪುರ ಬೆಂಗಳೂರು ನಗರದಲ್ಲಿ ಅಪರಾಧದ ಪ್ರಮಾಣ ಹೆಚ್ಚಿದ್ದರೂ ಮಹದೇವಪುರ ಕ್ಷೇತ್ರದಲ್ಲಿ ಅಪರಾಧ ಪ್ರಮಾಣ ಕಡಿಮೆ ಇದ್ದು ಎಲ್ಲಾ ಧರ್ಮಗಳ… Continue Reading
 • ನೀರು, ಶೌಚಾಲಯ, ಕೊಳವೆ ಬಾವಿ… - ನೀರು, ಶೌಚಾಲಯ, ಕೊಳವೆ ಬಾವಿ… ಕುಡಿಯುವ ನೀರು, ಶೌಚಾಲಯ ಹೂವೈ ಸಾಫ್ಟ್‌ವೇರ್ ಸಂಸ್ಥೆಯ ಸಹಯೋಗದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಶಾಸಕರ ನಿಧಿ ಹಾಗೂ ಸಂಸ್ಥೆಯ ತಲಾ ನಾಲ್ಕು ಲಕ್ಷ… Continue Reading
 • ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… - ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಲನಾಯಕನಹಳ್ಳಿ, ಕೊಡತಿ, ಮಾರತ್ತಹಳ್ಳಿ, ಮಂಡೂರು, ಬಿದರಹಳ್ಳಿ ಹಾಗೂ ಕಣ್ಣೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಕಟ್ಟಡ… Continue Reading
 • ವಸತಿ, ಬಸ್ ತಂಗುದಾಣ, ಮೇಲು ಸೇತುವೆ… - ವಸತಿ, ಬಸ್ ತಂಗುದಾಣ, ಮೇಲು ಸೇತುವೆ… ವಸತಿ ಸೌಕರ್ಯ ೯೪(ಸಿ) ಮತ್ತು ೯೪ (ಸಿಸಿ) ಅಡಿಯಲ್ಲಿ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ನೋಂದಣಿ ಮಾಡಿಸುವ… Continue Reading
 • ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು - ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು ಪಾದಚಾರಿ ಮೇಲು ಸೇತುವೆಗಳು ಪಾದಚಾರಿಗಳ ಹಿತದೃಷ್ಟಿಯಿಂದ ಮಾರತ್ತಹಳ್ಳಿ ಬ್ರಿಡ್ಜ್ ಬಳಿ, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ ಇಕೋ ಸ್ಪೇಸ್… Continue Reading
 • ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… - ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿ… Continue Reading