ಕರ್ನಾಟಕ ರಾಜ್ಯವು ಹಲವು ದಶಕಗಳಿಂದಲೂ ದೇಶದಲ್ಲೇ ಮುಂಚೂಣಿಯಲ್ಲಿರುವ ಉನ್ನತ ಶಿಕ್ಷಣ ಕೇಂದ್ರವಾಗಿದೆ. ಅದರಲ್ಲೂ ಎಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ನೂರಾರು ಕಾಲೇಜುಗಳು ಸ್ಥಾಪನೆಗೊಂಡಿವೆ. ೨೦೦೮ರ ಹೊತ್ತಿಗೆ ಶಿಕ್ಷಣ ರಂಗವು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿತ್ತು. ದೇಶದ ಮಾನವ ಸಂಪನ್ಮೂಲವನ್ನು ಸಮೃದ್ಧಗೊಳಿಸುವ ಈ ಕಾಯಕದಲ್ಲಿ ಅರವಿಂದ ಲಿಂಬಾವಳಿಯವರು ಗರಿಷ್ಠ ಪ್ರಮಾಣದ ರಚನಾತ್ಮಕ, ಗುಣಾತ್ಮಕ ಬದಲಾವಣೆಗಳನ್ನು ತಂದರು. ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲಾವಧಿಯಲ್ಲಿ ತಳೆದ ನಿರ್ಣಯಗಳು, ರೂಪಿಸಿದ ಕಾರ್ಯಕ್ರಮಗಳು, ಜಾರಿಗೆ ತಂದ ವಿನೂತನ ಉಪಕ್ರಮಗಳೇ ಅವರ ಯಶಸ್ಸಿಗೆ ನಿದರ್ಶನಗಳಾಗಿವೆ. ಕಾಲೇಜು ಮೆಟ್ಟಿಲು ಏರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಉಜ್ವಲವಾಗಬೇಕು; ಪಾಲಕರು – ಪೋಷಕರು ಯಾವುದೇ ಗೊಂದಲ, ಗಾಬರಿಗೆ ಸಿಲುಕಬಾರದು; ಆಡಳಿತವು ಪಾರದರ್ಶಕ ಹಾಗೂ ಹೊಣೆಗಾರಿಕೆಯಿಂದ ಕೂಡಿರಬೇಕು ಮತ್ತು ಕರ್ನಾಟಕವು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ತನ್ನ ನಾಯಕತ್ವವನ್ನು ಉಳಿಸಿಕೊಳ್ಳಬೇಕು – ಇವೇ ಅರವಿಂದ ಲಿಂಬಾವಳಿಯವರ ಆಡಳಿತದ ಮೂಲ ಮಂತ್ರಗಳಾಗಿದ್ದವು.

ಮುಂದಿನ ಪುಟಗಳಲ್ಲಿ ದಾಖಲಾದ ಸಾಧನೆಗಳನ್ನು ನೀವೇ ಒರೆಗೆ ಹಚ್ಚಿ ನೋಡಿ, ನಿರ್ಣಯಿಸಿ!

ರಾಷ್ಟ್ರೀಯತೆ, ಪರಂಪರೆಯ ಸಂರಕ್ಷಣೆಯ ನಿಟ್ಟಿನಲ್ಲಿ ದೇಶದಲ್ಲೇ ಪ್ರಪ್ರಥಮ

ಭಯೋತ್ಪಾದನಾ ವಿರೋಧಿ ಸಮಾವೇಶ

ಭಯೋತ್ಪಾದನೆಯ ವಿರುದ್ಧ ಅರವಿಂದ ಲಿಂಬಾವಳಿ ಸಂಘಟಿಸಿದ ಬೃಹತ್ ವಿದ್ಯಾರ್ಥಿ ಜಾಗೃತಿ ಅಭಿಯಾನ

12 ಲಕ್ಷ ವಿದ್ಯಾರ್ಥಿಗಳು ನೇರವಾಗಿ ಭಾಗವಹಿಸಿದರು

 •  ಎಲ್ಲಾ ರಾಜ್ಯಗಳಿಂದ ಪ್ರಶಂಸೆಯ ಸುರಿಮಳೆ.
 •  ಮಂಗಳೂರಿನಲ್ಲಿ ಉದ್ಘಾಟನಾ ಸಮಾರಂಭ.
 •  ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಸಮಾರೋಪ ಸಮಾರಂಭ.
 •  ಶ್ರೀ ಎಲ್.ಕೆ.ಅಡ್ವಾಣಿ, ಶ್ರೀ ಅನಂತಕುಮಾರ್, ಶ್ರೀ. ಬಿ.ಎಸ್. ಯಡಿಯೂರಪ್ಪ, ಪೂಜ್ಯ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ, ಶ್ರೀ ರವಿಶಂಕರ್ ಗುರೂಜಿ, ಅಮರ ಜೀವಿ ಸಂದೀಪ್ ಉನ್ನಿಕೃಷ್ಣನ್‌ರವರ ತಂದೆ ತಾಯಿಗಳು ಮತ್ತು ಮುಂತಾದ ಗಣ್ಯರ ಉಪಸ್ಥಿತಿ.

ಕರ್ನಾಟಕ ಜ್ಞಾನ ಆಯೋಗದ ಸ್ಥಾಪನೆ

ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ನಾಡನ್ನು ಜ್ಞಾನ ಆಧಾರಿತ ಸಮಾಜವನ್ನಾಗಿ ರೂಪಿಸುವ ಉದಾತ್ತ ಉದ್ದೇಶವುಳ್ಳ ಕರ್ನಾಟಕ ಜ್ಞಾನ ಆಯೋಗವನ್ನು ಅರವಿಂದ ಲಿಂಬಾವಳಿಯವರು ಸ್ಥಾಪಿಸಿದರು. ಇದು ಶಿಕ್ಷಣ ಇಲಾಖೆಯ ಮಹತ್ವದ ನಡೆಯಾಗಿದೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು

ಉನ್ನತ ಶಿಕ್ಷಣ ರಂಗದಲ್ಲಿ ಗರಿಷ್ಠ ಮತ್ತು ಜಾಗತಿಕ ಗುಣಮಟ್ಟದ ಫಲಿತಾಂಶಗಳನ್ನು ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ್ನು ಅರವಿಂದ ಲಿಂಬಾವಳಿ ಸ್ಥಾಪಿಸಿದರು. ಇದೂ ಕೂಡ ದೇಶದಲ್ಲೇ ಮಹತ್ವದ ಪ್ರಯತ್ನ.

ವಿಕೇಂದ್ರೀಕರಣದ ಮೊದಲ ಹೆಜ್ಜೆ : ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ

ಯುಜಿಸಿಯ ನೀತಿಸೂತ್ರಗಳಿಗೆ ಅನುಸಾರವಾಗಿ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯ ಮೂಲಕ ಉನ್ನತ ಶಿಕ್ಷಣದ ವಿಕೇಂದ್ರೀಕೃತ ವ್ಯವಸ್ಥೆಗೆ ಅರವಿಂದ ಲಿಂಬಾವಳಿಯವರು ನಾಂದಿ ಹಾಡಿದರು.

ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗಿದ್ದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಂತೆ ದಾವಣಗೆರೆ ವಿಶ್ವವಿದ್ಯಾಲಯವು ಸ್ಥಾಪನೆಯಾಗಿದ್ದು ಅರವಿಂದ ಲಿಂಬಾವಳಿಯವರ ಖಚಿತ ನಿರ್ಧಾರದಿಂದಲೇ. ಅವರ ಇಂಥ ನಿರ್ಧಾರಗಳ ಫಲವಾಗಿಯೇ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗಿದ್ದ ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದರೆ, ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗಿದ್ದ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಳ್ಳಾರಿಯಲ್ಲಿ ಅಸ್ತಿತ್ವಕ್ಕೆ ಬಂತು. ಹುಬ್ಬಳ್ಳಿಯಲ್ಲಿ ಕಾನೂನು ವಿಶ್ವವಿದ್ಯಾಲಯವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿತು. ಕರ್ನಾಟಕ ಜ್ಞಾನ ಆಯೋಗದ ಶಿಫಾರಸ್ಸುಗಳು ಹಾಗೂ ನಾಡಿನ ಜನತೆಯ ಬುದ್ಧಿಜೀವಿಗಳ, ಕಲಾವಿದರ ಅಭಿಪ್ರಾಯಗಳ ಮೇರೆಗೆ ಜಾನಪದ ವಿಶ್ವವಿದ್ಯಾಲಯದ ಆರಂಭಕ್ಕೆ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ವಿಶೇಷ ವಿಶ್ವವಿದ್ಯಾಲಯಗಳ ಸ್ಥಾಪನೆ

ರಾಜ್ಯದಲ್ಲಿ ಎರಡು ವಿಶೇಷ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದೂ ಅರವಿಂದ ಲಿಂಬಾವಳಿಯವರ ಕಾಲಾವಧಿಯ ಮಹತ್ವದ ಮೈಲಿಗಲ್ಲು. ಶ್ರೀಮತಿ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯವು ಮೈಸೂರಿನಲ್ಲಿ ಅಸ್ತಿತ್ವಕ್ಕೆ ಬಂದರೆ ಬೆಂಗಳೂರಿನಲ್ಲಿ ಸಂಸ್ಕೃತ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಯಿತು.
ಕರ್ನಾಟಕ ಜ್ಞಾನ ಆಯೋಗದ ಶಿಫಾರಸ್ಸು ಹಾಗು ವಿಶ್ರಾಂತ ಕುಲಪತಿ ಡಾ.ಎನ್ ರುದ್ರಯ್ಯ ಅವರ ವರದಿಯನ್ವಯ ಬೆಂಗಳೂರು ವಿಶ್ವವಿದ್ಯಾಲಯವನ್ನು ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಮೂರು ವಿಶ್ವವಿದ್ಯಾಲಯಗಳನ್ನಾಗಿ ವಿಭಜಿಸುವ ಉದ್ದೇಶವನ್ನು ಹೊಂದಲಾಯಿತು.

ಸಿಇಟಿ ಕೌನ್ಸೆಲಿಂಗ ಕ್ರಾಂತಿಕಾರಿ ಕ್ರಮಗಳು

 • ಮುಂಬರುವ ವರ್ಷಗಳಲ್ಲಿ ಸಿಇಟಿ ಕೌನ್ಸೆಲಿಂಗ್‌ನಲ್ಲಿ ಏಕರೂಪತೆಯನ್ನು ತರಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ.
 • ಸಿಇಟಿ ಕೌನ್ಸೆಲಿಂಗ್ ಸೆಂಟರ್‌ಗಳನ್ನು ವಿಕೇಂದ್ರೀಕರಿಸಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಶಿವಮೊಗ್ಗ ಮತ್ತು ಮಂಗಳೂರು – ಹೀಗೆ ಐದು ಸಿಇಟಿ ಕೌನ್ಸೆಲಿಂಗ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತುಂಬಾ ಅನುಕೂಲವಾಯಿತು.
 • ಅರ್ಹ ಬಡ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದುಕೊಳ್ಳಲು, ಅವರಿಗೆ ೧೫,೦೦೦ ರೂ.ಗಳಿಂದ ೨೫,೦೦೦ ರೂ.ಗಳವರೆಗೆ ಶುಲ್ಕವಿನಾಯ್ತಿ ನೀಡಲಾಗಿದೆ. ಅಲ್ಲದೆ ಈ ವಿನಾಯಿತಿಯ ಸೌಲಭ್ಯವನ್ನು ೨೦೦೯-೧೦ರ ಸಾಲಿನಲ್ಲಿ ೨೦,೫೦೦ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
 • ಕಾಮೆಡ್-ಕೆ ಮತ್ತು ಸಿಇಟಿಗಳು ಒಟ್ಟಾಗಿ ಒಂದೇ ಪ್ರವೇಶ ಪರೀಕ್ಷೆಯನ್ನು ನಡೆಸುವ ಉದ್ದೇಶದಿಂದ ಮಾತುಕತೆಯನ್ನು ನಡೆಸಿವೆ.
 • ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಅನುಕೂಲವಾಗುವಂತೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಪ್ರವೇಶ ಪರೀಕ್ಷೆಯನ್ನು ಒಂದೇ ದಿನದ ಬದಲು ಎರಡು ದಿನಗಳಲ್ಲಿ ನಡೆಸಲು ನಿರ್ಧರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
 • ಪಿಯುಸಿ ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಅವರ ಒಂದು ಅಮೂಲ್ಯ ವರ್ಷವು ವ್ಯರ್ಥವಾಗದಂತೆ ಸಿಇಟಿ ಕೌನ್ಸೆಲಿಂಗ್‌ನಲ್ಲಿ ಪ್ರವೇಶಾತಿಯನ್ನು ಪಡೆದುಕೊಳ್ಳಲು ಅವಕಾಶವನ್ನು ಮಾಡಿಕೊಡಲಾಗಿದೆ.
 • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೇ.೬% ದರದಲ್ಲಿ ಬ್ಯಾಂಕ್ ಸಾಲ ವ್ಯವಸ್ಥೆ ಕಲ್ಪಿಸಲಾಗಿದೆ.
 • ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸಿಇಟಿ ಸೀಟ್ ಮಾಟ್ರಿಕ್ಸ್‌ನಲ್ಲಿ ಶೇ ೫ ರ ಮೀಸಲಾತಿ.
 • ಹೊಸದಾಗಿ ಏರೋನಾಟಿಕಲ್, ರೋಬೋಟಿಕ್ ಮತ್ತು ಮೆಕಾಟ್ರಾನಿಕ್ ವೃತ್ತಿಪರ ಪದವಿ ಕೋರ್ಸುಗಳನ್ನು ಆರಂಭಿಸಲಾಗಿದೆ.

ವಿಶ್ವವಿದ್ಯಾಲಯಗಳಿಗೆ ಸಮಾನ ಅಧಿನಿಯಮ

ಕರ್ನಾಟಕ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಒಂದು ಸಮಾನ ಅಧಿನಿಯಮದ ಅಡಿಯಲ್ಲಿ ತರಲು ಅರವಿಂದ ಲಿಂಬಾವಳಿ ಗಂಭೀರ ಚಿಂತನೆ ನಡೆಸಿದರು. ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ಏಕರೂಪತೆಯನ್ನು ತರಲು ಒಂದು ಸಶಕ್ತ ಸಮಿತಿಯನ್ನು ಶಿಕ್ಷಣತಜ್ಞ ಡಾ. ಎನ್.ಆರ್. ಶೆಟ್ಟಿಯವರ ನೇತೃತ್ವದಲ್ಲಿ ರಚಿಸಿದ್ದು ಗಮನಾರ್ಹ.

ವಿಶ್ವವಿದ್ಯಾಲಯಗಳಿಗೆ ಒದಗಿಸುವ ಅನುದಾನದಲ್ಲಿ ಹೆಚ್ಚಳ

ವಿಭಿನ್ನ ಕಾರಣಗಳಿಗಾಗಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಒದಗಿಸುವ ಅನುದಾನದ ಪ್ರಮಾಣ ತೀರಾ ಕಡಿಮೆಯಿತ್ತು. ಸುಮಾರು ವರ್ಷಗಳಿಂದ ಅದು ಪರಿಷ್ಕರಣೆಗೆ ಒಳಪಟ್ಟಿರಲಿಲ್ಲ. ಆ ಕಾರಣದಿಂದಾಗಿ ವಿಶ್ವವಿದ್ಯಾಲಯಗಳಿಗೆ ಒದಗಿಸುವ ಅನುದಾನದಲ್ಲಿ ವರ್ಷಂಪ್ರತಿ ನಿಯಮಿತವಾಗಿ ಒಂದು ಪ್ರಮಾಣದ ಅನುದಾನವನ್ನು ಹೆಚ್ಚಿಸುವ ಉದ್ದೇಶ ಹೊತ್ತ ನೀತಿಗಳನ್ನು ಅರವಿಂದ ಲಿಂಬಾವಳಿ ಜಾರಿಗೆ ತಂದರು.

ಮಾದರಿ ವಿಶ್ವವಿದ್ಯಾಲಯಗಳ ಪರಿಕಲ್ಪನೆ

ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ಮೈಸೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವಾಗಿ ಪುನರ್ ಪ್ರತಿಷ್ಠಾಪಿಸಲು ಸಂಕಲ್ಪಿಸಲಾಯಿತು.

ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ
ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹಲವು ಸಾಮಾಜಿಕ / ವಿದ್ಯಾಸಂಸ್ಥೆಗಳು ಮುಂದೆ ಬಂದವು. ಅವುಗಳಲ್ಲಿ ಒಂದಾದ ಅಜಿಮ್ ಪ್ರೇಮ್‌ಜೀ ಫೌಂಡೇಷನ್‌ನವರ ವಿಶ್ವವಿದ್ಯಾಲಯವು ವಿಧಾನಮಂಡಲದಲ್ಲಿ ಯಶಸ್ವಿಯಾಗಿ ಅನುಮೋದನೆಗೊಂಡಿತು. ಅಲಯನ್ಸ್ ವಿಶ್ವವಿದ್ಯಾಲಯವೂ ಅನಂತರ ಅನುಮೋದನೆಗೊಂಡು ಆರಂಭವಾಗಿದೆ. ಹೀಗೆ ಖಾಸಗಿ ವಿವಿಗಳ ಸ್ಥಾಪನೆಯಲ್ಲಿ ಅರವಿಂದ ಲಿಂಬಾವಳಿಯವರ ಪಾತ್ರ ಗಮನಾರ್ಹ.

ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಯುಜಿಸಿ 6ನೇ ವೇತನ ಶ್ರೇಣಿ
ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಶ್ವವಿದ್ಯಾಲಯದ ಅಧ್ಯಾಪಕರುಗಳಿಗೆ ೨೦೦೬ರ ಜನವರಿ ೧ರಿಂದ ಪೂರ್ವಾನ್ವಯವಾಗುವಂತೆ ಯುಜಿಸಿ ೬ನೇ ವೇತನ ಶ್ರೇಣಿಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಕಾಲೇಜು ಶಿಕ್ಷಕರ ಮಹತ್ವದ ವೇತನ ಸರಿಪಡಿಸುವ ಬೇಡಿಕೆಯನ್ನು ಪೂರೈಸಿದಂತಾಗಿದೆ. ಇದು ಶಿಕ್ಷಣರಂಗದ ಅತ್ಯಂತ ಮಹತ್ವದ, ಕ್ರಾಂತಿಕಾರಕ, ಜನಪರ ನಡೆಯಾಗಿದೆ ಎಂದು ಅರವಿಂದ ಲಿಂಬಾವಳಿಯವರನ್ನು ಶಿಕ್ಷಕವೃಂದ, ಶಿಕ್ಷಣತಜ್ಞರು – ಎಲ್ಲರೂ ಕೊಂಡಾಡಿದ್ದಾರೆ.

ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ
ಅರವಿಂದ ಲಿಂಬಾವಳಿಯವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ನಡೆದ ಇನ್ನೊಂದು ಪ್ರಮುಖ ಚಟುವಟಿಕೆ ಎಂದರೆ ಬುದ್ಧಿಜೀವಿಗಳು, ಶಿಕ್ಷಣ ತಜ್ಞರು, ವಿದ್ವಾಂಸರು, ಕಲಾವಿದರು ಮತ್ತು ಆಧ್ಯಾತ್ಮಿಕ ಕ್ಷೇತ್ರದ ಧೀಮಂತರೊಡನೆ ಚರ್ಚಿಸಿ ಹಲವು ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಲಾಯಿತು. ಎನ್.ಸಿ.ಎಚ್.ಇ.ಆರ್ (National Council for higher Education & Research)ಕೇಂದ್ರ ಸರ್ಕಾರ ನಿಯೋಜಿತ ಅಧಿನಿಯಮವನ್ನು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತರುವ ಉದ್ದೇಶದ ಹಿನ್ನೆಲೆಯಲ್ಲಿ ನಾಡಿನ ಹಿರಿಯ ಶಿಕ್ಷಣತಜ್ಞರೊಂದಿಗೆ ದುಂಡುಮೇಜಿನ ಸಭೆ ನಡೆಯಿತು. ಈ ಮೂಲಕ ಕರ್ನಾಟಕ ರಾಜ್ಯದ ಅಭಿಪ್ರಾಯಗಳನ್ನು ಪ್ರಾತಿನಿಧಿಕವಾಗಿ ಕೇಂದ್ರಸರ್ಕಾರಕ್ಕೆ ಕಳುಹಿಸಿಕೊಡಲಾಯಿತು. ಅಲ್ಲದೆ ಅಧಿನಿಯಮದ ಕೆಲವು ಕಂಡಿಕೆಗಳ ಬಗೆಗೆ ರಾಜ್ಯ ಸರ್ಕಾರದ ಸಲಹೆಗಳನ್ನು ಕಳುಹಿಸಿಕೊಡಲಾಯಿತು.

ಅಂತಾರಾಷ್ಟ್ರೀಯ ಜ್ಞಾನ ವಿನಿಮಯ ಕಾರ್ಯಕ್ರಮ
ಅಂತರಾಷ್ಟ್ರೀಯ ಜ್ಞಾನ ವಿನಿಮಯ ಕಾರ್ಯಕ್ರಮದಡಿ ಆಸ್ಟ್ರೇಲಿಯಾದ ಡೀಕನ್ ವಿಶ್ವ ವಿದ್ಯಾಲಯ, ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾಲಯಗಳಲ್ಲದೆ ಇತರ ರಾಷ್ಟ್ರಗಳ ಹಲವು ವಿಶ್ವವಿದ್ಯಾಲಯಗಳ ಜೊತೆಗೆ ವಿದ್ಯಾರ್ಥಿ ಹಾಗು ಅಧ್ಯಾಪಕ ಕೇಂದ್ರಿತ ಜ್ಞಾನ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಹೊಸ ಹೆಜ್ಜೆ: ವಿನೂತನ ಪ್ರಯೋಗ 

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತರುವ ದೃಷ್ಟಿಯಿಂದ ಯೋಜಿಸಿದ ಅತ್ಯಂತ ಜನಪರ, ಜನಪ್ರಿಯವಾದ ಅಪರೂಪವಾದ ಕಾರ್ಯಕ್ರಮ. ಇದರಿಂದ ಇಡೀ ಕಾಲೇಜು ಶಿಕ್ಷಣದಲ್ಲಿಯೇ ಒಂದು ಹೊಸ ಅಲೆಯ ಸಂಚಲನವಾಯಿತು.

ಆಪ್ತಮಿತ್ರ
ಸರ್ಕಾರಿ ಮತ್ತು ಖಾಸಗೀ ಸಹಭಾಗಿತ್ವವನ್ನೊಳಗೊಂಡ ಶಿಕ್ಷಣ ಸಂಸ್ಥೆಗಳಲ್ಲಿ ಮಧುರ ಬಾಂಧವ್ಯವನ್ನು ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶದಿಂದ ೧೯೨ ಕಾಲೇಜುಗಳನ್ನು ಗುರುತಿಸಿದ್ದು ೧,೦೬,೫೦೦ ವಿದ್ಯಾರ್ಥಿಗಳನ್ನು ಅದು ಒಳಗೊಂಡಿದೆ.

ಸಹಯೋಗ
ಸರ್ಕಾರಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗುವಂತೆ ಸಹಯೋಗ ಎನ್ನುವ ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಇಲಾಖೆಯು ಹಮ್ಮಿಕೊಂಡಿದೆ. ಖಾಸಗಿ ಔದ್ಯೋಗಿಕ ಸಂಸ್ಥೆಗಳೊಡನೆ ಮಾತುಕತೆ ನಡೆಸಿ ಅವರಿಗೆ ಬೇಕಾದ ಮಾದರಿಯಲ್ಲಿ ಪಠ್ಯಕ್ರಮವನ್ನು ಸಿದ್ದಪಡಿಸಿ ಪ್ರತ್ಯೇಕ ಔದ್ಯೋಗಿಕ ಸಂಸ್ಥೆಗೆ ಬೇಕಾಗುವ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ತರಬೇತಿಯನ್ನಾಗಿ ನೀಡಿ ಯುವ ಜನತೆಯನ್ನು ಉದ್ಯೋಗಶೀಲರನ್ನಾಗಿಸುವ ಗುರಿಯನ್ನು ಇದು ಹೊಂದಿದೆ. ಆರಂಭದಲ್ಲಿ ಬಿಜಾಪುರ, ಬಾಗಲಕೋಟೆ, ಕೋಲಾರ ಜಿಲ್ಲೆಗಳ ೧೦೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ೬೩,೦೦೦ ವಿದ್ಯಾರ್ಥಿಗಳು ಈ ಪೈಲಟ್ ಪ್ರಾಜೆಕ್ಟ್‌ನಲ್ಲಿ ಫಲಾನುಭವಿಗಳಾಗಿದ್ದರು.

ಆಂಗ್ಲ
ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅಗತ್ಯವಿರುವ ಆಂಗ್ಲ ಭಾಷೆಯ ಜ್ಞಾನವನ್ನು ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒದಗಿಸಲು ಸರ್ಕಾರ ಬದ್ದವಾಗಿದೆ. ಇದಕ್ಕಾಗಿ ೩೫೬ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ೧,೫೦,೦೦೦ ವಿದ್ಯಾರ್ಥಿಗಳನ್ನು ಪ್ರಥಮ ಹಂತದಲ್ಲಿ ಫಲಾನುಭವಿಗಳಾಗಿ ಗುರುತಿಸಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಂದ ಬಂದಂತಹ ವಿದ್ಯಾರ್ಥಿಗಳನ್ನು ಸಬಲೀಕರಿಸಲು ಈ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಆಯ್ದ ಕಾಲೇಜುಗಳಲ್ಲಿ ಭಾಷಾ ಪ್ರಯೋಗಾಲಯ ಮತ್ತು ಡಿಜಿಟಲ್ ಲೈಬ್ರರಿಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಮಾನವತೆ
ವಿದ್ಯಾರ್ಥಿಗಳಿಗೆ ಪದವಿಗಳ ಮೇಲೆ ಪದವಿಗಳನ್ನು ದೊರಕಿಸಿಕೊಟ್ಟರೆ ಸಾಲದು. ಅವರಲ್ಲಿ ಮೌಲ್ಯ ಪ್ರಜ್ಞೆ, ನೈತಿಕತೆ ಮಾನವೀಯತೆ ಹೊಂದಲು ಮತ್ತು ರಾಷ್ಟ್ರ ಪ್ರಜ್ಞೆಯನ್ನು ತುಂಬಲು ಅನುವಾಗುವಂತೆ ಆರ್ಟ ಆಫ್ ಲಿವಿಂಗ್ ಸಂಸ್ಥೆಯಿಂದ ರೂಪಿಸಲ್ಪಟ್ಟ ಮಾದರಿಗಳನ್ವಯ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಅಂತರಜಾಲ ಸಂಪರ್ಕ
ಉನ್ನತ ಶಿಕ್ಷಣದ ಜಾಗತಿಕ ಬೆಳವಣಿಗೆಯಲ್ಲಿ ಇಂಟರ್‌ನೆಟ್ ಸೌಲಭ್ಯ ಅತ್ಯಂತ ಮಹತ್ವದ ಪಾತ್ರವನ್ನು ಇಂದು ವಹಿಸುತ್ತಿದೆ. ಇದನ್ನು ಮನಗಂಡು ನೆಟ್ ಹಾಟ್ ಝೊನ್ ಸಂಸ್ಥೆಯ ಸಹಯೋಗದೊಂದಿಗೆ ಅರ್ಹ ವಿದ್ಯಾರ್ಥಿಗಳಿಗೆ ಅಂತರಜಾಲ ಸಂಪರ್ಕವನ್ನು ಒದಗಿಸಿಕೊಡಲು ಸರ್ಕಾರವು ಬದ್ಧವಾಗಿದೆ. ಇದಕ್ಕಾಗಿ ಪ್ರಥಮ ಹಂತದಲ್ಲಿ ೧೦ ಸರ್ಕಾರಿ

ವೃತ್ತಿಪರ ಪದವಿ ಹಾಗೂ ತಾಂತ್ರಿಕ ಶಿಕ್ಷಣ ಸಬಲೀಕರಣ

ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಕರ್ನಾಟಕದಲ್ಲಿ ಆರಂಭವಾದ ಪಾಲಿಟೆಕ್ನಿಕ್ ಶಿಕ್ಷಣವು ಯಾವುದೇ ಹೊಸ ಆಯಾಮವನ್ನು ಮೈಗೂಡಿಸಿಕೊಳ್ಳದೇ ಶತಮಾನದಷ್ಟು ಹಳೆಯದಾದ ಪದ್ದತಿಯನ್ನು ಅನುಸರಿಸುತ್ತಿತ್ತು. ಜಾಗತೀಕರಣ ಸನ್ನಿವೇಶದಲ್ಲಿ ಹೆಚ್ಚಿದ ಪಾಲಿಟೆಕ್ನಿಕ್ ಶಿಕ್ಷಣದ ಮಹತ್ವವನ್ನು ಮನಗಂಡು ಅದಕ್ಕೆ ಕಾಯಕಲ್ಪವನ್ನು ತಂದುಕೊಡಲು ಉದ್ದೇಶಿಸಲಾಯಿತು.

 • ಬಿ.ಇ. ಪದವಿ ಪ್ರವೇಶಾತಿಯಲ್ಲಿ ಶೇ. ೧೫ರಷ್ಟು ಸೀಟುಗಳನ್ನು ಪಾಲಿಟೆಕ್ನಿಕ್ ಮುಗಿಸಿದ ಅಭ್ಯರ್ಥಿಗಳಿಗೆ ಮೀಸಲಿಡುವುದು.
 • ೨೩ ಹೊಸ ಪಾಲಿಟೆಕ್ನಿಕ್‌ಗಳನ್ನು ಸ್ಥಾಪಿಸಲಾಯಿತು.
 • ಎಲ್ಲಾ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಇಸಿಎಸ್ ಮುಖಾಂತರ ವೇತನವನ್ನು ಬಟವಾಡೆ ಮಾಡಲು ನಿರ್ಧರಿಸಲಾಯಿತು. ೨೦೦೯-೧೦ ನೇ ಸಾಲಿನಲ್ಲಿ ೧೦೯೩.೬೨ ಲಕ್ಷ ಹೆಚ್ಚುವರಿ ಅನುದಾನವನ್ನು ಕೋರಲಾಯಿತು.
 • ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲತೆಯನ್ನು ಪರಿಹರಿಸಲು ಮತ್ತು ಅವರ ಪಾಲಿಟೆಕ್ನಿಕ್ ಶಿಕ್ಷಣವನ್ನು ಹೆಚ್ಚು ಅಧಿಕೃತಗೊಳಿಸಲು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಾಯಿತು. ಸ್ಮಾರ್ಟ್‌ಕಾರ್ಡ್‌ಗಳು ವಿದ್ಯಾರ್ಥಿಯ ಎಲ್ಲಾ ವಿವರಗಳನ್ನು ಒದಗಿಸುತ್ತವೆ.

ಸಮುದಾಯ ಪಾಲಿಟೆಕ್ನಿಕ್‌ಗಳು : ೬೫ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳನ್ನು ಸಮುದಾಯ ಪಾಲಿಟೆಕ್ನಿಕ್ ಅಭಿವೃದ್ಧಿ ಯೋಜನೆಯಡಿಯಲ್ಲಿ ಒಳಪಡಿಸಿ, ೧೩ ಲಕ್ಷ ರೂ.ಗಳ ಆವರ್ತಕ ಮತ್ತು ೧೭ ಲಕ್ಷ ರೂ.ಗಳ ಆವರ್ತವಲ್ಲದ ವೆಚ್ಚಗಳನ್ನು ಈ ಉದ್ದೇಶಕ್ಕಾಗಿ ವಿನಿಯೋಜಿಸಲಾಯಿತು. ೧೬೨೫ ಅರಕಾಲಿಕ ಶಿಕ್ಷಕರನ್ನು ೨೬೦ ಗುತ್ತಿಗೆ ಆಧಾರದ ಮೇಲಿನ ಶಿಕ್ಷಕರನ್ನು ನೇಮಿಸಿಕೊಂಡು ಉದ್ಯೋಗ ಅವಕಾಶಗಳನ್ನು ಒದಗಿಸಲಾಯಿತು. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಪಾಲಿಟೆಕ್ನಿಕ್‌ಗಳ ಗುಣಮಟ್ಟದ ಸಾಮರ್ಥ್ಯ ಹೆಚ್ಚಿದೆ.
ಹೊಸ ಪಾಲಿಟೆಕ್ನಿಕ್‌ಗಳು : ಹೊಸದಾಗಿ ತೆರೆದಿರುವ ಎಲ್ಲಾ ಕಾಲೇಜುಗಳಿಗೆ ಸ್ಥಳೀಯವಾಗಿ ೫ ಎಕರೆ ಜಮೀನನ್ನು ಪಡೆದುಕೊಳ್ಳಲಾಗಿದೆ. ಈಗಾಗಲೇ ಆ ಜಾಗಗಳಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡಗಳು ಎದ್ದು ನಿಂತಿದ್ದು, ಮುಕ್ತಾಯದ ಹಂತದಲ್ಲಿವೆ. ೬೫ ಸಮುದಾಯ ಪಾಲಿಟೆಕ್ನಿಕ್‌ಗಳನ್ನು ತೆರೆಯಲಾಗಿದೆ. ಪಾಲಿಟೆಕ್ನಿಕ್ ಅರೆಕಾಲಿಕೆ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುವ ಅಧ್ಯಾಪಕರಿಗೆ ೭,೫೦೦ ರೂ. ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅರೆಕಾಲಿಕ ಉಪ ನ್ಯಾಸಕರುಗಳಿಗೆ ೧೦,೦೦೦ ವೇತನವನ್ನು ಹೆಚ್ಚಳ. ೨೦೦೯- ೧೦ರಲ್ಲಿ ತೆರೆದ ೨೨ ಕಾಲೇಜುಗಳಲ್ಲಿ ಹೊಸ ೧೩ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಕಟ್ಟಡ ಕಾಮಗಾರಿಗಳು ವಿಭಿನ್ನ ಹಂತದಲ್ಲಿದೆ.
ವೇತನ ಹೆಚ್ಚಳ : ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಕರಿಗೆ ವೇತನ ಹೆಚ್ಚಳ ತಾಂತ್ರಿಕ ಶಿಕ್ಷಣದ ಸಮಗ್ರ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಹಾಗು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅರೆಕಾಲಿಕ ಬೋಧಕರಿಗೆ ವೇತನವನ್ನು ಕ್ರಮವಾಗಿ ೭೫೦೦ ಮತ್ತು ೧೦೦೦೦ ರೂಗಳಗೆ ಏರಿಸಲಾಯಿತು.
ಹೊಸ ಕಾಲೇಜುಗಳಿಗೆ ಮಾನ್ಯತೆ : ಹೊಸ ೧೦ ಇಂಜಿನಿಯರಿಂಗ್ ಕಾಲೇಜುಗಳಿಗೆ AICTE  ಮನ್ನಣೆ ದೊರಕಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಪಗ್ರಹ ಆಧಾರಿತ ಉಚಿತ ಸಿಇಟಿ ಕೋಚಿಂಗ್

ಈವರೆಗೂ ಸಿಇಟಿ ಪರೀಕ್ಷೆಗಳಲ್ಲಿ ನಗರದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿದ್ದರಷ್ಟೆ? ಗ್ರಾಮೀಣ, ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳ ಜೊತೆ ಸ್ಪರ್ಧಿಸಲು ಅನುಕೂಲವಾಗುವಂತೆ ಉಪಗ್ರಹ ಆಧಾರಿತ ಕಾರ್ಯಕ್ರಮದ ಮೂಲಕ ಗ್ರಾಮೀಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲು ಸರ್ಕಾರ ನಿರ್ಧರಿಸಿ ಈ ವಿನೂತನ ಯೋಜನೆಯನ್ನು ಅರವಿಂದ ಲಿಂಬಾವಳಿಯವರು ಜಾರಿಗೆ ತಂದರು. ೧೫ ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಇದು ಉಚಿತ ತರಬೇತಿಯಾಗಿದ್ದು ಬಡ, ಗ್ರಾಮೀಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರದಾನವಾಯಿತು.
ಇದಲ್ಲದೆ ಸರ್ಕಾರಿ ಎಂಜಿನಿಯರಿಂಗ್ ಸೀಟುಗಳಲ್ಲಿ ತಲಾ ೧೫ ಸಾವಿರ ರೂ. ಶುಲ್ಕದಲ್ಲಿ ೨ ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ವರಮಾನದ ಬಡ ವಿದ್ಯಾರ್ಥಿಗಳಿಗೆ ಶೇಕಡಾ ೨೦ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಯೋಜನೆಗಳಿಗೆ ವಿಶೇಷ ಅನುದಾನ
ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಂಸ್ಕೃತಿ ಪರಂಪರೆಗಳ ಬಗೆಗೆ ನಡೆಯುವ ಸಂಶೋಧನಾ ಯೋಜನೆಗಳಿಗೆ ಪ್ರಸಕ್ತ ವರ್ಷ ೫ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ರಾಜ್ಯದ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ವಿಭಾಗಗಳಿಗೆ ವಿಶೇಷ ಅನುದಾನ

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಪರಂಪರೆಗಳ ಬಗೆಗೆ ನಡೆಯುವ ಸಂಶೋಧನಾ ಯೋಜನೆಗಳಿಗೆ ೨ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಯಿತು.

ಉನ್ನತ ಶಿಕ್ಷಣ ಪ್ರವೇಶ ಹೆಚ್ಚಳಕ್ಕೆ ಕ್ರಮ
ಭಾರತದಲ್ಲಿ ಶೇ. ೧೨.೪ರಷ್ಟು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣವನ್ನು ಪ್ರವೇಶಿಸುತ್ತಿದ್ದಾರೆ. ಈ ಪ್ರಮಾಣವು ಕರ್ನಾಟಕದ ಮಟ್ಟಿಗೆ ಕೇವಲ ಶೇ. ೧೧ ಆಗಿತ್ತು. ಗ್ರಾಸ್ ಎನ್‌ರೋಲ್‌ಮೆಂಟ್ ಅನುಪಾತದ (ಜಿಇಆರ್) ಈ ಪ್ರಮಾಣವು ಜಾಗತಿಕ ನೆಲೆಯಲ್ಲಿ ನೋಡಿದಾಗ ಅತ್ಯಂತ ಕಡಿಮೆ. ಈ ಪ್ರಮಾಣವನ್ನು ಸರಾಸರಿ ಶೇ. ೧೫ ಕ್ಕೆ ಗುರಿಯಿರಿಸಿಕೊಂಡ ಅರವಿಂದ ಲಿಂಬಾವಳಿಯವರು ಹಲವಾರು ಉತ್ತೇಜಕ ಕ್ರಮಗಳನ್ನು ತೆಗೆದುಕೊಂಡರು; ಅವರ ಯತ್ನಗಳ ಫಲವಾಗಿ ಈಗ ಈ ಸರಾಸರಿಯು ಶೇ. ೧೭ಕ್ಕೆ ಏರಿದೆ.

ವಿದ್ಯಾರ್ಥಿನಿಯರಿಗೆ ಪೂರ್ಣ ಪ್ರಮಾಣದ ಶುಲ್ಕ ರಿಯಾಯಿತಿ
೨೦೦೮- ೨೦೦೯ರಿಂದ ಜಾರಿಗೆ ಬರುವಂತೆ ವಿದ್ಯಾರ್ಥಿನಿಯರಿಗೆ ಪೂರ್ಣ ಪ್ರಮಾಣದ ಶುಲ್ಕ ರಿಯಾಯಿತಿಯನ್ನು ಘೋಷಿಸಲಾಗಿದೆ. ಈಗಾಗಲೇ ಸಂಗ್ರಹಿಸಿದ್ದ ಶುಲ್ಕವನ್ನು ಮರುಪಾವತಿ ಮಾಡಲಾಗಿದೆ. ವಿದ್ಯಾರ್ಥಿನಿಯರಿಂದ ಸಂಗ್ರಹಿಸಿದ ಶುಲ್ಕದ ಬಾಕಿ ಶುಲ್ಕ ಮರುಪಾವತಿಗೆ ೨೦೦೮-೨೦೦೯ರ ಆಯವ್ಯಯದಲ್ಲಿ ಒಟ್ಟು ೪೧.೬ ಕೋಟಿ ರೂ., ೨೦೦೯-೧೦ರಲ್ಲಿ ೪೫ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

ಹಿಂದುಳಿದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತೇಜನ
ತೀವ್ರ ಉಪೇಕ್ಷೆಗೆ ಒಳಗಾಗಿರುವ ಉತ್ತರ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ದಿಸೆಯಲ್ಲಿ ಹೈದರಾಬಾದ್ – ಕರ್ನಾಟಕ ಪ್ರದೇಶದಲ್ಲಿ ಬೇಡಿಕೆ ಇದ್ದಷ್ಟೂ ಸರ್ಕಾರಿ ಕಾಲೇಜುಗಳನ್ನು ತೆರೆಯಲಾಯಿತು.

ಡಾ. ನಂಜುಂಡಪ್ಪ ಸಮಿತಿಯ ವರದಿಯ ಅನುಷ್ಠಾನ
ಡಾ. ಡಿ ಎಂ ನಂಜುಂಡಪ್ಪ ಸಮಿತಿಯ ವರದಿಯ ಆಧಾರದಲ್ಲಿ ತೀರಾ ಹಿಂದುಳಿದ ತಾಲ್ಲೂಕುಗಳಲ್ಲಿ ಹೊಸ ಸರ್ಕಾರಿ ಕಾಲೇಜುಗಳನ್ನು ಮತ್ತು ಅವುಗಳಿಗೆ ಬೇಕಾಗುವ ಮೂಲ ಸೌಲಭ್ಯಗಳನ್ನು ಒದಗಿಸಲಾಯಿತು. ಹೀಗೆ ಕರ್ನಾಟಕದಲ್ಲಿ ಸರ್ವರಿಗೂ ಶಿಕ್ಷಣದ ಅವಕಾಶಗಳು ಯಾವ ಭೇದಭಾವವೂ ಇಲ್ಲದೆ ಸಮಾನವಾಗಿ ಸಿಗುವಂತಾಗಿದೆ.

ಖಾಸಗಿ ಕಾಲೇಜುಗಳಿಗೆ ಅನುದಾನ
೧೯೮೬ ರಿಂದ ೧೯೯೨ರವರೆಗೆ ಸ್ಥಾಪಿತವಾದ ಎಲ್ಲಾ ಖಾಸಗಿ ಅನುದಾನಿತ ಕಾಲೇಜುಗಳಿಗೆ ಸರ್ಕಾರದ ಅನುದಾನ ಮಂಜೂರು ಮಾಡಲಾಯಿತು. ಅಲ್ಲದೆ ೧೯೮೬ ರಿಂದ ೧೯೯೫ರವರೆಗೆ ಸ್ಥಾಪಿತವಾದ ಎಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಡಳಿತ ಮಂಡಳಿಯ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಲಾಯಿತು.

ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಕರಿಗೆ ವೇತನ ಹೆಚ್ಚಳ
ಕಾಲೇಜು ಶಿಕ್ಷಣದ ಸಮಗ್ರ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ವೇತನವನ್ನು ರೂ. ೫೦೦೦ದಿಂದ ರೂ. ೧೦೦೦೦ಕ್ಕೆ ಹೆಚ್ಚಿಸಲಾಯಿತು.

ಅಧ್ಯಾಪಕರ ನೇಮಕಾತಿ
ಕಾಲೇಜು ಶಿಕ್ಷಣ ಇಲಾಖೆಯು ಯುಜಿಸಿ ನಿರ್ದೇಶನಗಳನ್ವಯ ಮತ್ತು ಸೂಚಿತ ಅನುಪಾತದಂತೆ ಕೆಪಿಎಸ್‌ಸಿ ಮುಖಾಂತರ ೨೫೫೦ ಬೋಧಕ ವರ್ಗದ ನೇಮಕಾತಿಯನ್ನು ಮಾಡಿರುವುದು ಇನ್ನೊಂದು ಪ್ರಮುಖ ಸಾಧನೆಯಾಗಿದೆ. ನೇಮಕಗೊಂಡ ಶಿಕ್ಷಕರೊಂದಿಗೆ ವ್ಯಕ್ತಿಗತ ಸಮಾಲೋಚನೆ ನಡೆಸಿ ಯೋಗ್ಯವಾದ ಸ್ಥಳಕ್ಕೆ ನಿಯುಕ್ತಿ ಮಾಡಿರುವುದರಿಂದ ಅವರ ಉತ್ಪಾದಕತೆಯೂ ಹೆಚ್ಚಿದೆ. ಅರವಿಂದ ಲಿಂಬಾವಳಿಯವರ ಇಂಥ ಕ್ರಮಗಳು ಅವರ ದೂರದರ್ಶಿತ್ವಕ್ಕೆ ನಿದರ್ಶನ.

ಉದ್ಯೋಗ ಮೇಳಗಳು
ವಿವಿಧ ಔದ್ಯೋಗಿಕ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಉದ್ಯೋಗ ಮೇಳಗಳನ್ನು ಸಂಘಟಿಸಿದ್ದು ಅರವಿಂದ ಲಿಂಬಾವಳಿಯವರ ಮತ್ತೊಂದು ಪ್ರಮುಖ ನಡೆ. ಈ ಮೂಲಕ ವಿಜ್ಞಾನ, ಮಾನವಿಕ ವಿಜ್ಞಾನ, ವಾಣಿಜ್ಯ, ನಿರ್ವಹಣಾ ಶಾಸ್ತ್ರ, ಆನ್ವಯಿಕ ವಿಜ್ಞಾನಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉದ್ಯೋಗ ಮಾರುಕಟ್ಟೆಯನ್ನು ಕಾಲೇಜು ಕ್ಯಾಂಪಸ್‌ನೊಳಗೆ ತಂದು ಕೊಡಲಾಗಿದೆ. ಈ ಮೇಳಗಳ ಫಲವಾಗಿ ಈ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನೇಕರು ಉದ್ಯೋಗಶೀಲರಾಗಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣದ ನಂತರದ ಕಾಲಾವಧಿಗೂ ಅರವಿಂದ ಲಿಂಬಾವಳಿಯವರು ಸೂಕ್ತ ಯೋಜನೆ ರೂಪಿಸಿರುವುದು ಅವರ ಕಾಳಜಿಗೆ ನಿದರ್ಶನ.

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಜಾರಿಗೆ ತಂದ ಬದಲಾವಣೆಗಳು

 •  ಸ್ಟಾಪ್ ಗ್ಯಾಪ್, ಅರೆಕಾಲಿಕ ಹಾಗೂ ಕಾಂಟ್ರಾಕ್ಟ ಶಿಕ್ಷಕರಿಗೆ ಬೇಡಿಕೆಯಾಧಾರಿತ ನ್ಯಾಯ ಒದಗಿಸಿ ಕೊಡಲಾಗಿದೆ.
 •  ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ೪೧ ಗ್ರೇಡ್ ೧ ಮತ್ತು ೨ ಪ್ರಾಂಶುಪಾಲರ ನೇಮಕಾತಿಗೆ ಅನುಮತಿ ನೀಡಲಾಗಿದೆ.
 •  ೪೦ ಸರ್ಕಾರಿ ಪದವಿ ಕಾಲೇಜುಗಳಿಗೆ ನ್ಯಾಕ್‌ನ ಮರುಮನ್ನಣೆ ಬಂದಿರುವುದು ಸಂತಸದ ಸಂಗತಿ.
 •  ರಾಜ್ಯದಲ್ಲಿ ಅನಧಿಕೃತ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
 •  ಐ.ಎ.ಎಸ್. ಐ.ಪಿ.ಎಸ್. ಐ.ಎಫ್.ಎಸ್. ಕೆ.ಎ.ಎಸ್. ಕೆ.ಇ.ಎಸ್. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ತರಬೇತಿಗೆ ಅನುಕೂಲವಾಗುವಂತೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಪರೀಕ್ಷಾ ಪೂರ್ವ ತರಬೇತಿಗೆ ಅಗತ್ಯವಿರುವ ಉತ್ತೇಜನ ನೀಡಲಾಗಿದೆ.
 •  ಸರ್ಕಾರಿ ಅನುದಾನಿತ ಕಾಲೇಜುಗಳ ಪಿಯು ಕಾಲೇಜಿಗಳಲ್ಲಿದ್ದ ಅಧ್ಯಾಪಕರನ್ನು ರಿ-ಡಿಪ್ಲಾಯ್‌ಮೆಂಟ್ ಮೂಲಕ ಪದವಿ ಕಾಲೇಜುಗಳಿಗೆ ಪ್ರತಿನಿಯೋಜನೆ ಮಾಡಲಾಗಿದೆ.
 •  ಸಿ ದರ್ಜೆಯ ನ್ಯಾಕ್ ಮನ್ನಣೆ ಪಡೆದ ಅನುದಾನಿತ ಕಾಲೇಜುಗಳ ಅಧ್ಯಾಪಕರಿಗೆ ಮಾನವೀಯತೆಯಿಂದ ಪರಿಗಣಿಸಿ ವೇತನ ಹಿಂಬಾಕಿಯನ್ನು ಸೇರಿದಂತೆ ವೇತನ ಪಾವತಿಸಲಾಗಿದೆ.
 •  ೧೦೦ ಕಾಲೇಜುಗಳಲ್ಲಿ ವಿಜ್ಞಾನ ವಿಷಯಗಳನ್ನು ಹೊಸದಾಗಿ ಆರಂಭಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿಜ್ಞಾನ ವಿಷಯಗಳನ್ನು ತೆರೆಯುವಂತೆ ಕಾರ್ಯಯೋಜನೆ ರೂಪಿಸಲಾಗಿದೆ.
 •  ೮೯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೧೧೦ ಹೊಸ ವಿಷಯ/ ಕಾಂಬಿನೇಷನ್‌ಗಳನ್ನು ತೆರೆಯಲಾಗಿದೆ.
 •  ೧೯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೩೭ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲಾಗಿದೆ.
 •  ೨ ವರ್ಷಗಳಲ್ಲಿ ಹತ್ತು ಹೊಸದಾಗಿ ಪದವಿ ಕಾಲೇಜುಗಳನ್ನು ತೆರೆಯಲಾಗಿದೆ
 •  ಜಿಲ್ಲಾಮಟ್ಟದಲ್ಲಿ ದೇಣಿಗೆ ಕುರಿತಾದ ಸಮಸ್ಯೆಗಳನ್ನು ಬಗೆಹರಿಸಲು ಸಮಿತಿ ರಚಿಸಲಾಗಿದೆ.
 •  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿವೃತ್ತ ನ್ಯಾಯಮೂರ್ತಿ ಶ್ರೀ ಪದ್ಮರಾಜ್ ಅಧ್ಯಕ್ಷತೆಯಲ್ಲಿ ವೃತ್ತಿಪರ ಕಾಲೇಜುಗಳ ಶುಲ್ಕ ನಿಯಂತ್ರಣ ಸಮಿತಿಯನ್ನು ರಚಿಸಲಾಗಿದೆ. ಅದು ತನ್ನ ವರದಿಯನ್ನು ಸಲ್ಲಿಸಿದೆ.
 •  ಶಿಕ್ಷಕರ ಸ್ಥಾನೀಕರಣ ಸಮಸ್ಯೆ ಪರಿಹಾರ ಒದಗಿಸಲಾಗಿದೆ.
 • ವಿಭಜಿತ ಪದವಿ ಪೂರ್ವ ಕಾಲೇಜಿಗಳಿಂದ ಕಾಲೇಜು ಶಿಕ್ಷಕರ ಮರುನಿಯೋಜನೆ ಮಾಡಲಾಗಿದೆ.
 •  ಕರ್ನಾಟಕಕ್ಕೆ ೨೦,೦೦೦ ಹೆಚ್ಚುವರಿ ಎನ್.ಸಿ.ಸಿ ಕೆಡೆಟ್‌ಗಳ ಅವಕಾಶ.
 •  ಎಸ್‌ಸಿ.ಎಸ್‌ಟಿ ಕಾಲೇಜುಗಳಿಗೆ ವೇತನ ಅನುದಾನ ನೀಡಲಾಗಿದೆ.
 •  ಬೆಂಗಳೂರಿನ ಹೆರಿಟೇಜ್ ಕಾಲೇಜುಗಳ ಸಂರಕ್ಷಣೆ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.
 • ಅರೆಕಾಲಿಕ ಶಿಕ್ಷಕರ ನೇಮಕಾತಿಯ ಸಕ್ರಮಾತಿ(೧೯೮೭-೮೮ರಿಂದ ೯೨-೯೩ರ ತನಕ) ಮಾಡಲಾಗಿದೆ.

ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಅಭೂತಪೂರ್ವ ಅಭಿವೃದ್ಧಿ
ಅರವಿಂದ ಲಿಂಬಾವಳಿಯವರು ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೇ ಮೂಲಭೂತ ಸೌಲಭ್ಯಗಳಾದ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ನೈರ್ಮಲ್ಯ, ನೀರು ಸರಬರಾಜು ಮುಂತಾದ ಸೌಲಭ್ಯಗಳನ್ನು ಒದಗಿಸಲೂ ಮುಂದಾದರು. ೩೫೬ ಸರ್ಕಾರಿ ಕಾಲೇಜುಗಳಲ್ಲಿ ಯಾವುದೇ ವಿದ್ಯಾರ್ಥಿಗೆ ಪ್ರವೇಶವನ್ನು ನಿರಾಕರಿಸಲು ಸಾಧ್ಯವಿಲ್ಲದಂತೆ ನೀತಿಯೊಂದನ್ನು ರೂಪಿಸಿ ಅನುಷ್ಠಾನಕ್ಕೆ ತಂದರು. ಉನ್ನತ ಶಿಕ್ಷಣವು ಸಮಾಜದ ಅಂಚಿನಲ್ಲಿರುವ ನಿರ್ಗತಿಕರಿಗೂ ದೊರಕುವ ನಿಟ್ಟಿನಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಕಾಲೇಜುಗಳನ್ನು ತೆರೆದರು.

ವಿಜ್ಞಾನವನ್ನು ಅಭ್ಯಾಸ ಮಾಡುವವರ ಸಂಖ್ಯೆ ಗಣನೀಯವಾಗಿ ತಗ್ಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಮೂಲ ವಿಜ್ಞಾನ ಕೋರ್ಸ್‌ಗಳತ್ತ ಸೆಳೆಯಲು ಕ್ರಮವನ್ನು ತೆಗೆದುಕೊಂಡಿರುವುದು ಅರವಿಂದ ಲಿಂಬಾವಳಿಯವರ ಮತ್ತೊಂದು ಕ್ರಾಂತಿಕಾರಿ ಕ್ರಮವಾಗಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನಗಳು, ಶುಲ್ಕ ವಿನಾಯಿತಿಗಳನ್ನು ಅನುಷ್ಠಾನಕ್ಕೆ ತರಲಾಯಿತು. ಆನ್ವಯಿಕ ವಿಜ್ಞಾನಗಳ ಜೊತೆಗೆ ಮೂಲ ವಿಜ್ಞಾನಗಳನ್ನು ಸಂಯೋಜಿಸಿ ಕೋರ್ಸುಗಳನ್ನು ಹೊಸದಾಗಿ ವಿನ್ಯಾಸಗೊಳಿಸಲಾಯಿತು.

ಹೀಗೆ ಉನ್ನತ ಶಿಕ್ಷಣ ರಂಗದಲ್ಲಿ ಮೌಲಿಕ, ಸಂಖ್ಯಾತ್ಮಕ ಹಾಗೂ ಗುಣಾತ್ಮಕ ಬದಲಾವಣೆಗಳನ್ನು ತರುವಲ್ಲಿ ಅರವಿಂದ ಲಿಂಬಾವಳಿಯವರು ವಹಿಸಿದ ಪಾತ್ರವು ಗಮನಾರ್ಹ. ಅವರು ಜಾರಿಗೊಳಿಸಿದ ಬಹುತೇಕ ಕ್ರಮಗಳು ವಿದ್ಯಾರ್ಥಿ, ಶಿಕ್ಷಕ, ಸಿಬ್ಬಂದಿ, ಆಡಳಿತವರ್ಗ, ಪಾಲಕ ಸಮುದಾಯ, ಶಿಕ್ಷಣ ತಜ್ಞರು – ಹೀಗೆ ಎಲ್ಲರ ಮುಕ್ತ ಪ್ರಶಂಸೆಗೆ ಒಳಗಾಗಿದೆ.

ಶ್ಲಾಘನೆ

ಅಜೀಂ ಪ್ರೇಮ್‌ಜಿ ಖಾಸಗಿ ವಿಶ್ವವಿದ್ಯಾಲಯ ಮಸೂದೆಯು ಸದನದಲ್ಲಿ ಅಂಗೀಕೃತವಾದ ಸಂದರ್ಭದಲ್ಲಿ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಶ್ರೀ ಅಜೀಂ ಪ್ರೇಮ್‌ಜಿಯವರು ಅರವಿಂದ ಲಿಂಬಾವಳಿಯವರಿಗೆ ಬರೆದ ಅಭಿವಂದನಾ ಪತ್ರ.  ಶಿಕ್ಷಣ ರಂಗವನ್ನು ಬಲಪಡಿಸುವ ಸಚಿವರ ಕಾರ್ಯಶೈಲಿಯನ್ನು ಶ್ರೀ ಅಜೀಂ ಪ್ರೇಮ್‌ಜಿ ಮುಕ್ತವಾಗಿ ಶ್ಲಾಘಿಸಿದ್ದಾರೆ.

Appreciation letter from Wipro

Azim H Premji
Chairman

March 19, 2010

Shri Arvind Limbavali
The Hon’ble Minister for Higher Education
Government of Karnataka
Bangalore

Sub: Azim Premji University

Dear Shri Arvind Limbavali,
I thank you for taking time from your busy schedule to visit our Foundation and share some of the initiatives taken by you to strengthen the Higher Education system in the State. I was indeed delighted to hear some of your initiatives.
We are happy to learn from newspaper about the passage of Azim Premji University Bill, 2010 by the Karnataka Assembly and the Legislative Council.
I take this opportunity to sincerely thank you for your support in steering the enactment of the first state private university in this part of the country.
I also take this opportunity to reiterate our commitment to the universal quality if Education in Karnataka and across India. We believe that Education is the real gateway for a `just, humane and equitable society’ that is envisaged by our constitution.
On our part, our endeavour is to run the University in a manner to reach out to the talent that exists in rural and urban India and provide equitable opportunity to contribute to the social and economic development of our nation. We will make every effort to ensure that this University will make the State of Karnataka proud in terms of its uniqueness and leadership in creating new knowledge and talent as well as transforming existing talent in the Government education system and outside.
We are confident of the continued support by the Government and people of Karnataka.
Thanking you once again,
Sincerely,

Azim Premji

ಸಾಧನೆಗಳು ೨೦೦೮-೧೩

 • ಶಿಬಿರ,ಮೇಳ,ಉತ್ಸವಗಳ ಸರಮಾಲೆ - ಮಹದೇವಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹತ್ತು ಹಲವು ಮೇಳಗಳು ನಡೆದಿವೆ. ನಾಡಿನ ಮಹಾಪುರುಷರ ಜಯಂತಿಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗಿದೆ.ಯುಗಾದಿ ಹಬ್ಬವೇ ಮಹದೇವಪುರ ಮೇಳವಾಗಿ ರೂಪಾಂತರಗೊಂಡು ಸಾವಿರಾರು ಕುಟುಂಬಗಳನ್ನು… Continue Reading
 • ಧಾರ್ಮಿಕತೆ, ಸಾಮರಸ್ಯದ ತಂಗಾಳಿ - ಸ್ವಾಮಿ ವಿವೇಕಾನಂದ, ವೇಮನ, ಕೆಂಪೇಗೌಡ, ಬಸವೇಶ್ವರ, ಕನಕದಾಸರು, ಡಾ|| ಬಿ.ಆರ್. ಆಂಬೇಡ್ಕರ್, ಬಾಬು ಜಗಜೀವನರಾಂ, ದ್ರೌಪದಮ್ಮ, ಸಿದ್ಧರಾಮೇಶ್ವರರು, ಸ್ವಾಮಿ ಯೋಗಿನಾರಾಯಣ, ಸೋದರಿ ನಿವೇದಿತಾ, ಪಂ| ದೀನದಯಾಳ ಉಪಾಧ್ಯಾಯ… Continue Reading
 • ಕಾದಿದ್ದರು ೩೦ ವರ್ಷ; ಈಗ ಮೂಡಿತು ಹರ್ಷ! - ಎಲ್ಲೆಲ್ಲೂ ಶಾಂತಿ-ಸೌಹಾರ್ದ; ಅಪರಾಧ ಪ್ರಮಾಣ ಇಳಿಕೆ: ಬೆಂಗಳೂರು ನಗರದ ಸರಾಸರಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅಪರಾಧಪ್ರಮಾಣವು ಏನಿಲ್ಲೆಂದರೂ ಶೇ. ೨೫ರಷ್ಟು ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ… Continue Reading
 • ಸಾಮಾಜಿಕ ಅಭ್ಯುದಯದ ದೃಢ ಹೆಜ್ಜೆಗಳು - ಯುವಕರಿಗೆ ಕೆಲಸ ದೊರಕಿಸಲು ಉದ್ಯೋಗ ಮೇಳ, ಸಾರ್ವಜನಿಕ ಬಳಕೆಗಾಗಿ ಹಲವೆಡೆ ಸಮುದಾಯ ಭವನಗಳು, ಸುರಕ್ಷತೆಗಾಗಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಸುಸಜ್ಜಿತ ವಿದ್ಯುತ್ ಚಿತಾಗಾರ, ದುರ್ಬಲರು, ಅಶಿಕ್ಷಿತರಿಗೆ… Continue Reading
 • ಅಪಾರ್ಟ್ಮೆಂಟ್ ನಿವಾಸಿಗಳ ಬವಣೆ ಪರಿಹಾರ - ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳಿವೆ. ಇಲ್ಲಿನ ನಿವಾಸಿಗಳು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಶನ್ ಸ್ಥಾಪಿಸಿಕೊಂಡಿದ್ದಾರೆ. ಅರವಿಂದ ಲಿಂಬಾವಳಿಯವರ ಬಳಿ ಅವರು ಹಲವು ಸಮಸ್ಯೆಗಳ ಬಗ್ಗೆ ನಿವೇದಿಸಿಕೊಂಡಿದ್ದರು. ಅವುಗಳಲ್ಲಿ… Continue Reading
 • ಇಪಿಐಪಿ ಅಭಿವೃದ್ಧಿಯ ಯಶೋಗಾಥೆ - ವೈಟ್‌ಫೀಲ್ಡ್‌ನ ಇಪಿಐಪಿ ವಲಯದಲ್ಲಿ ರಸ್ತೆ, ಮಳೆ ನೀರು ಕೊಯ್ಲು, ಕಾಲುದಾರಿ ಸುಧಾರಣೆ ಮತ್ತು ಡಾಂಬರೀಕರಣದ ಕೆಲಸಗಳು ಭರದಿಂದ ಸಾಗಿವೆ. ಇಲ್ಲಿನ ನಾಲ್ಕು ಸಾಲಿನ (೪ ಲೇನ್) ೫.೫… Continue Reading
 • ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ - ಕಳೆದ ನಾಲ್ಕು ವರ್ಷಗಳಲ್ಲಿ ಮಹದೇವಪುರದ ಸಾರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ರೂಪಾಂತರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮಹದೇವಪುರಕ್ಕೆ ಪ್ರತಿ ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ (ಸಂಖ್ಯೆ ೩೩೫ಇ) ಸೌಕರ್ಯವನ್ನು… Continue Reading
 • ಆರೋಗ್ಯಕ್ಕೆ ಆದ್ಯತೆ - ಈಗ ಆರೋಗ್ಯ ಸಚಿವರಾಗಿರುವ ಅರವಿಂದ ಲಿಂಬಾವಳಿಯವರು ಮಹದೇವಪುರದ ಶಾಸಕರಾದ ಕ್ಷಣದಿಂದಲೂ ಸ್ವಾಸ್ಥ್ಯವನ್ನು ಅತ್ಯಂತ ಜತನದಿಂದ ನೋಡಿಕೊಂಡಿದ್ದಾರೆ. ಎರಡು ಮೆಗಾ ಹೆಲ್ತ್ ಕ್ಯಾಂಪ್‌ಗಳೂ ಸೇರಿದಂತೆ ಆರು ವೈದ್ಯಕೀಯ ಶಿಬಿರಗಳು… Continue Reading
 • ಅಕ್ಷರ ಕ್ರಾಂತಿಯ ಹೊಸ ಅಧ್ಯಾಯ - ಅರವಿಂದ ಲಿಂಬಾವಳಿ ಶಿಕ್ಷಣ ರಂಗದಲ್ಲೇ ಹೋರಾಟ ಮಾಡುತ್ತಲೇ ಬೆಳೆದ ಯುವ ನಾಯಕರು. ಶಾಸಕರಾದ ಮೇಲೆ ಮಹದೇವಪುರದಲ್ಲಿ ಶಿಕ್ಷಣ ಕ್ರಾಂತಿಗೆ ಅವರು ಮಾಡಿದ ಯತ್ನಗಳನ್ನು ಕಣ್ಣಾರೆ ಕಾಣಬಹುದು. ವರ್ತೂರು… Continue Reading
 • ಮನೆಗೆ ದೀಪ, ಬೀದಿಗೆ ಬೆಳಕು - ೨೦೦೮ರಲಿ ಮಹದೇವಪುರ ಕ್ಷೇತ್ರದ ಹಲವು ಪ್ರದೇಶಗಳು ಬೀದಿ ದೀಪಗಳಿಂದ ವಂಚಿತವಾಗಿದ್ದವು. ವಿದ್ಯುತ್ ಲೈನ್‌ಗಳೂ ಇಲ್ಲ, ಕಂಬಗಳೂ ಇಲ್ಲದಂಥ ಸ್ಥಿತಿ. ಅರವಿಂದ ಲಿಂಬಾವಳಿಯವರು ವಿದ್ಯುತ್ ಸಂಪರ್ಕ, ಬೀದಿ ದೀಪ,… Continue Reading