ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಕೊಡುಗೆ – Contribution of Modi ji led Union Government to Karnataka
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿ.ಜೆ.ಪಿ ಸರ್ಕಾರವು ಕರ್ನಾಟಕದ ಅಭಿವೃದ್ಧಿಗಾಗಿ ನೀಡಿರುವ ಅನುದಾನ ಅಪಾರವಾಗಿದೆ. ಇದು ಕೇಂದ್ರದ ಬಿ.ಜೆ.ಪಿ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ ಇರುವ ಪ್ರಾಮಾಣಿಕ ಕಳಕಳಿಯನ್ನು ತೋರಿಸುತ್ತದೆ.
- ಬಿ.ಜೆ.ಪಿ ನೇತೃತ್ವದ ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಕರ್ನಾಟಕಕ್ಕೆ ೨,೪೯,೩೯೩ ಕೋಟಿ ರೂ.ಗಳ ಅನುದಾನವನ್ನು ಈಗಾಗಲೇ ನೀಡಿದೆ.
- ಕರ್ನಾಟಕದ ರೈತರಿಗಾಗಿ ೩೧ ಕೋಟಿ ರೂ. ಹಣ ಬಿಡುಗಡೆ, ೫೦.೫೬ ಲಕ್ಷ ಮಣ್ಣು ಆರೋಗ್ಯ ಕಾರ್ಡ್ಗಳ (Soiಟ ಊeಚಿಟಣh ಅಚಿಡಿಜ) ವಿತರಣೆ.
- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ೪೦೫ ಕೋಟಿ ರೂ. ನೀಡಿ ೨,೮೫,೮೭೮ ಎಕರೆ ಪ್ರದೇಶವನ್ನು ಅತಿ ಸಣ್ಣ ನೀರಾವರಿ ಯೋಜನೆಯಡಿ ತರಲಾಗಿದೆ.
- ಹಗರಣಗಳ ಕೇಂದ್ರವಾಗಿದ್ದ ಕರ್ನಾಟಕದ ಗಣಿಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಿ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಯಡಿ ೨೦೯ ಕೋಟಿ ರೂ. ಸಂಗ್ರಹಿಸಲಾಗಿದೆ; ಗಣಿಗಳ ಗುತ್ತಿಗೆ ಅವಧಿ ಮುಗಿಯುವುದರಲ್ಲಿ ರಾಜ್ಯದ ಬೊಕ್ಕಸಕ್ಕೆ ೩೪,೩೫೩ ಕೋಟಿ ರೂ. ಆದಾಯ ಹರಿದು ಬರಲಿದೆ.
- ಕಡಿಮೆ ಖರ್ಚಿನಲ್ಲಿ ಕರ್ನಾಟಕಕ್ಕೆ ಬೆಳಕಿತ್ತ `ಉಜಾಲ ಯೋಜನೆಯಡಿಯಲ್ಲಿ ಕೇಂದ್ರ ಬಿ.ಜೆ.ಪಿ ಸರ್ಕಾರವು ರಾಜ್ಯದಲ್ಲಿ ೧.೬೫ ಕೋಟಿ ಎಲ್.ಇ.ಡಿ ಬಲ್ಪ್ ವಿತರಣೆ ಮಾಡಿದೆ. ಇದರಿಂದ ರಾಜ್ಯಕ್ಕೆ ವರ್ಷಕ್ಕೆ ೮೬೨ ಕೋಟಿ ರೂ. ಉಳಿಯುತ್ತಿದೆ. ಅಲ್ಲದೆ ವರ್ಷಕ್ಕೆ ೨೧.೫೪ ಲಕ್ಷ ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಿದೆ.
- ಕರ್ನಾಟಕದಲ್ಲಿ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ೧೪,೨೬೯ ಮೆಗಾವಾಟ್ನಿಂದ ೨೧,೩೧೬ ಮೆಗಾವಾಟ್ಗೆ ಹೆಚ್ಚಿಸಿ ಇಂಧನ ಉಳಿತಾಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರಿಂದ ಒಟ್ಟು ೪,೩೦೦ ಕೋಟಿ ರೂ.ಗಳ ಲಾಭ ಅಂದಾಜು ಮಾಡಿದ್ದು ಪ್ರತಿವರ್ಷವೂ ಸುಮಾರು ೬,೭೦೦ ಕೋಟಿ ರೂ. ಉಳಿತಾಯವಾಗಲಿದೆ.
- ಸ್ವಚ್ಛ ಭಾರತ್ ಮಿಶನ್ ಅಭಿಯಾನಕ್ಕಾಗಿ ಕರ್ನಾಟಕಕ್ಕೆ ೨೦೪ ಕೋಟಿ ರೂ.ಗಳನ್ನು ನೀಡಲಾಗಿದೆ.
- ಮುದ್ರಾ ಯೋಜನೆಯಡಿ ಕರ್ನಾಟಕದ ಉದ್ಯಮಿಗಳಿಗೆ ಮೋದಿಜಿ ಶಕ್ತಿ ತುಂಬಿದ್ದಾರೆ; ಈ ಯೋಜನೆಯಡಿಯಲ್ಲಿ ೯೭.೭೩ ಲಕ್ಷ ಫಲಾನುಭವಿಗಳಿಗೆ ೩೯,೪೪೩ ಕೋಟಿ ರೂ. ಸಹಾಯಧನ ವಿತರಣೆಯಾಗಿದೆ.
- ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ ಮನೆಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ೧೮೪೧.೩೧ ಕೋಟಿ ರೂ. ಬಿಡುಗಡೆಯಾಗಿ ೧,೨೨,೭೫೪ ಮನೆಗಳ ನಿರ್ಮಾಣಕ್ಕಾಗಿ ೭೦೮ ಯೋಜನೆಗಳು ಅನುಮೋದನೆಗೊಂಡಿವೆ.
ಕರ್ನಾಟಕದ ಮೂಲಭೂತ ಸೌಕರ್ಯಗಳಿಗೆ ಸಹಾಯ ಹಸ್ತ
- ೫೦ ವಿವಿಧ ಜಿಲ್ಲಾ ಯೋಜನೆಗಳ ಅಡಿಯಲ್ಲಿ ೩೫೪೬ ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ೨೭,೪೮೨ ಕೋಟಿ ರೂ. ಅನುದಾನ
- ರೈಲ್ವೆ ಸೌಕರ್ಯಗಳಿಗಾಗಿ ಮೋದಿ ಸರ್ಕಾರದಿಂದ ೨೧೯೭ ಕೋಟಿ ರೂ. ಬಿಡುಗಡೆ
- ದಾವಣಗೆರೆ ಮತ್ತು ಬೆಳಗಾವಿಗಳ ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ೯೬೦.೦೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
- ಬೆಂಗಳೂರು ಮೆಟ್ರೋ ರೈಲು ಯೋಜನೆಯಲ್ಲಿ ೧೪೮ ಕಿ.ಮೀಗಳ ಮೂರು ಹೊಸ ಮಾರ್ಗಗಳು ಆರಂಭವಾಗಿದ್ದು ಕಳೆದ ಎರಡು ವರ್ಷಗಳಲ್ಲಿ ಮೆಟ್ರೋ ಯೋಜನೆಗಾಗಿ ೨,೬೧೭.೬೫ ಕೋಟಿ ರೂ. ನೀಡಲಾಗಿದೆ.
- ಪ್ರಧಾನಮಂತ್ರಿ ಜನ್ಧನ್ ಯೋಜನೆಯಡಿಯಲ್ಲಿ ರಾಜ್ಯದ ೧.೦೧ ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ; ಅವರ ಉಳಿತಾಯ ಖಾತೆಯಲ್ಲಿ ೨,೩೧೨ ಕೋಟಿ ಹಣ ಸಂಗ್ರಹವಾಗಿದ್ದು ಹಾಗೂ ೮೭.೭೨ ಲಕ್ಷ ರೂಪೈ ಕಾರ್ಡ್ಗಳನ್ನು ವಿತರಿಸಲಾಗಿದೆ.
- ಪ್ರಧಾನಮಂತ್ರಿ ಉಜ್ವಲಾ ಯೋಜನೆ: ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ದರರಿಗೆ ೩.೩೩ ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ೧.೩೯ ಲಕ್ಷ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲಾಗಿದೆ.
ಹೀಗೆ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರವು ಯಾವುದೇ ಪಕ್ಷ ರಾಜಕೀಯ ಮಾಡದೆಯೇ ಕರ್ನಾಟಕಕ್ಕೆ ನೆರವಿನ ಮಹಾಪೂರವನ್ನೇ ಹರಿಸಿದೆ.
There has been immense contribution by the Union BJP government led by Prime Minister Narendra Modi to the development of Karnataka. This shows the genuine concern of Union BJP government towards Karnataka.
- Till now, Union BJP government has extended INR 2,49,393 crore grants to Karnataka.
- Rs 31 crore has been released and 50.56 lakh soil health cards are distributed to farmers in Karnataka.
- Under Pradhan Mantri Krishi Sinchaayi scheme , 2,85,878 acres land was brought under minor irrigation for which union government has contributed Rs 405 crore.
- Karnataka, which had become center for mining scam is now marching towards revenue generation. This is because , under Pradhan Mantri Khanija Kshetra Kalyana Yojana, mining area has been allotted transparently generating Rs 209 crore. When mining contract gets over, State treasury will accrue revenue of Rs 34,353 crore.
- Under Ujwala scheme, Union government has distributed 1.65 crore LED bulbs. By which State will save 21.54 lakh MW power and Rs 862 crore every year.
- Karnataka’s power generation capacity has been enhanced from 14,269 MW to 21,316 MW. This is estimated to bring Rs 4300 crore profit and save Rs 6700 crore annually
- Rs 204 crore released to Karnataka under Swachh Bharath abhiyan.
- Under Mudra scheme, Sri Narendra Modi ji has strengthened the hands of the entrepreneurs of Karnataka. 97.73 lakh beneficiaries have received Rs 39,443 crore subsidy.
- Under Pradhan Mantri awas Yojana, 708 projects are approved to construct 1,22,754 houses for which Union government has released Rs 1841.31 crore A helping hand for basic infrastructure in Karnataka
- Under 50 various projects, Rs 27,482 crore has been released to develop 3546 KMs of national Highways.
- Modi government released rs 2197 crore for railway Projects.
- Rs 960 crore released for developing Davanagere and Belagavi as Smart cities.
- In the last two years, Rs 2617.65 crore has been released to Bengaluru Metro with three new routes covering 148 KMs.
- Under Pradhan Mantri Jan dhan Scheme, 1.01 crore bank accounts are opened and Rs 2312 crore has been collected under savings account. 87.72 lakh rupee cards have been distributed.
- Under Pradhan Mantri Ujwala scheme, free LPG connection has been provided to 3.33 lakh BPL card holders and 1.39 lakh SC/ST beneficiaries.
Narendra Modiji’s government, without any party politics, has extended its support to Karnataka.
ಸಾಧನೆಗಳು ೨೦೧೩-೧೮ – Achievements 2013-18
- ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು – Culture, Yoga, Health, Job Mela - ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು - Culture, Yoga, Health, Job Mela ಮಹದೇವಪುರ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳಿಂದ ಸಾವಿರಾರು ಜನ ಪ್ರಯೋಜನ ಪಡೆದಿದ್ದಾರೆ. Many socially important events has been organised in Mahadevapura constituency, thousands of people have been benefited by these social events. ಸಾಧನೆಗಳು ೨೦೧೩-೧೮ - Achievements 2013-18 Continue Reading
- ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… – LPG Gas, Health, Title Deeds..Ashraya… - ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… - LPG Gas, Health, Title Deeds..Ashraya… ಅಡುಗೆ ಅನಿಲ ವಿತರಣೆ ಸೂಲಿಕುಂಟೆ ಗ್ರಾಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ವಿತರಣೆ. ಆರೋಗ್ಯ ತಪಾಸಣಾ ಶಿಬಿರ ವರ್ತೂರು ವಾರ್ಡಿನ ಬಳಗೆರೆ ರಸ್ತೆಯ ಶೋಭಾ ಡ್ರೀಮ್ ಎಕರ್ಸ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲರ ಸೋಂಕನ್ನು ತಡೆಯಲು ಮುಂಜಾಗರೂಕತೆಯ ಕ್ರಮವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ. ‘ಆಶ್ರಯ’ಕ್ಕೆ 43 ಎಕರೆ… ಹಾಡೋಸಿದ್ದಾಪುರ ಗ್ರಾಮದಲ್ಲಿ ೯ ಎಕರೆ ೨೧… Continue Reading
- ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… – Insurance and Bicycle to Children, Flood Relief… - ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… - Insurance and Bicycle to Children, Flood Relief… ಆರೋಗ್ಯ ವಿಮೆ ದೊಡ್ಡನೆಕ್ಕುಂದಿ ವಾರ್ಡಿನ ಸರ್ಕಾರಿ ಶಾಲೆಯ ಸುಮಾರು ೯೫೩ ಶಾಲಾ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಆರೋಗ್ಯ ವಿಮೆ ಮಾಡಿಸಲಾಯಿತು. ಸೈಕಲ್ ವಿತರಣೆ ಕನ್ನಮಂಗಲ ಸರ್ಕಾರಿ ಶಾಲೆಯ ಮಕ್ಕಳಿಗೆ ಸೈಕಲ್ ವಿತರಣೆ ನೆರೆ ಪರಿಹಾರ ಬೆಳ್ಳಂದೂರು ವಾರ್ಡಿನ ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಶುದ್ಧ ಕುಡಿಯುವ ನೀರು ಕಾಡುಗೋಡಿ ವಾರ್ಡಿನಲ್ಲಿ… Continue Reading
- ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… – Metro Railway Station, Open Gym - ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… - Metro Railway Station, Open Gym ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಹೂಡಿಯಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿ ಕಾರ್ಯಾರಂಭಗೊಂಡಿದ್ದು ಸಾವಿರಾರು ಮಂದಿ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಾಡುಗೋಡಿಯಲ್ಲಿ ಬಯಲು ಜಿಮ್ ನ್ಯೂ ಹಾರಿಜನ್ ಕಾಲೇಜಿನ ಸಂಸ್ಥೆಯ ಸಹಕಾರದಲ್ಲಿ ಕಾಡುಗೋಡಿಯಲ್ಲಿ ಬಯಲು ಜಿಮ್ ನಿರ್ಮಿಸಲಾಗಿದ್ದು, ದಿನವೂ ಸಾವಿರಾರು ನಾಗರಿಕರು ಅದನ್ನು ಉಪಯೋಗಿಸುತ್ತಿದ್ದಾರೆ. ಗ್ಯಾಸ್… Continue Reading
- ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… – Public safety..Various amenities… - ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… - Public safety..Various amenities… ಶಾಂತಿಯುತ ಸಹಬಾಳ್ವೆಯ ಮಹದೇವಪುರ ಬೆಂಗಳೂರು ನಗರದಲ್ಲಿ ಅಪರಾಧದ ಪ್ರಮಾಣ ಹೆಚ್ಚಿದ್ದರೂ ಮಹದೇವಪುರ ಕ್ಷೇತ್ರದಲ್ಲಿ ಅಪರಾಧ ಪ್ರಮಾಣ ಕಡಿಮೆ ಇದ್ದು ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. (Lowest Crime Rate). ಸುರಕ್ಷತೆಗೆ ಸಿ.ಸಿ ಕ್ಯಾಮರಾ ಶಾಸಕರ ನಿಧಿ (೬೦ ಲಕ್ಷ ರೂ.), ಸಂಸದರ ನಿಧಿ (೩೦ ಲಕ್ಷ ರೂ.), ವಿಧಾನ ಪರಿಷತ್ ಸದಸ್ಯರಾದ ಶ್ರೀ ಲೇಹರ್ ಸಿಂಗ್ (೨೦ ಲಕ್ಷ ರೂ.), ಶ್ರೀ… Continue Reading
- ನೀರು, ಶೌಚಾಲಯ, ಕೊಳವೆ ಬಾವಿ… – Water, Sanitation, Bore-well… - ನೀರು, ಶೌಚಾಲಯ, ಕೊಳವೆ ಬಾವಿ… - Water, Sanitation, Bore-well… ಕುಡಿಯುವ ನೀರು, ಶೌಚಾಲಯ ಹೂವೈ ಸಾಫ್ಟ್ವೇರ್ ಸಂಸ್ಥೆಯ ಸಹಯೋಗದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಶಾಸಕರ ನಿಧಿ ಹಾಗೂ ಸಂಸ್ಥೆಯ ತಲಾ ನಾಲ್ಕು ಲಕ್ಷ ರೂಗಳ ವೆಚ್ಚದಲ್ಲಿ ಪಣತ್ತೂರು, ಮುಳ್ಳೂರು, ನಲ್ಲೂರಹಳ್ಳಿ ಮತ್ತು ಸೀತಾರಾಮಪಾಳ್ಯಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪೂರ್ಣಗೊಳಿಸಲಾಗಿದೆ. ಈ ಮಾದರಿಯಲ್ಲೇ ಈ ವರ್ಷದಲ್ಲಿ ಅದೂರು, ಗುಂಜೂರುಪಾಳ್ಯ, ವಿಜಯನಗರ, ಇಮ್ಮಡಿಹಳ್ಳಿ, ದೊಡ್ಡನೆಕ್ಕುಂದಿ ಕಾಲೋನಿ ಮತ್ತು ಕಾಡುಗೋಡಿಯ ಪಟಾಲಮ್ಮ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಆರಂಭಗೊಳ್ಳಲಿವೆ.… Continue Reading
- ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… – Hygiene, Health, Adarsha Grama… - ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… - Hygiene, Health, Adarsha Grama… ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಲನಾಯಕನಹಳ್ಳಿ, ಕೊಡತಿ, ಮಾರತ್ತಹಳ್ಳಿ, ಮಂಡೂರು, ಬಿದರಹಳ್ಳಿ ಹಾಗೂ ಕಣ್ಣೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಕಟ್ಟಡ ಕಾಮಗಾರಿಗೆ ನಾನು ಆರೋಗ್ಯ ಸಚಿವನಾಗಿದ್ದಾಗಲೇ ಹಣ ಬಿಡುಗಡೆ ಮಾಡಲಾಗಿತ್ತು. ಬಿದರಹಳ್ಳಿ ಹೊರತುಪಡಿಸಿ ಉಳಿದೆಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ, ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕ್ಷೇತ್ರದಲ್ಲಿನ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ೨೪/೭… Continue Reading
- ವಸತಿ, ಬಸ್ ತಂಗುದಾಣ, ಮೇಲು ಸೇತುವೆ… – Housing, bus shelters, Flyovers - ವಸತಿ, ಬಸ್ ತಂಗುದಾಣ, ಮೇಲು ಸೇತುವೆ… - Housing, bus shelters, Flyovers ವಸತಿ ಸೌಕರ್ಯ ೯೪(ಸಿ) ಮತ್ತು ೯೪ (ಸಿಸಿ) ಅಡಿಯಲ್ಲಿ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ನೋಂದಣಿ ಮಾಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮಾರತ್ತಹಳ್ಳಿ ಮತ್ತು ಸೂಲಿಕುಂಟೆಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ. ಮೇಲು ಸೇತುವೆಗಳು ಹೊರ ವರ್ತುಲ ರಸ್ತೆ ಅಭಿವೃದ್ಧಿ ಪಡಿಸಿದ್ದು, ಬೆಳ್ಳಂದೂರು, ದೇವರಬಿಸನಹಳ್ಳಿ, ಕಾಡುಬಿಸನಹಳ್ಳಿ ಮೇಲು ಸೇತುವೆಗಳು ನಿರ್ಮಾಣವಾಗಿದ್ದು, ದೊಡ್ಡನೆಕ್ಕುಂದಿ ಬಳಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಬಸ್ ತಂಗುದಾಣಗಳು… Continue Reading
- ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು – Railway Bridge, Sky-walk, flyover - ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು - Railway Bridge, Sky-walk, flyover ಪಾದಚಾರಿ ಮೇಲು ಸೇತುವೆಗಳು ಪಾದಚಾರಿಗಳ ಹಿತದೃಷ್ಟಿಯಿಂದ ಮಾರತ್ತಹಳ್ಳಿ ಬ್ರಿಡ್ಜ್ ಬಳಿ, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ ಇಕೋ ಸ್ಪೇಸ್ ಬಳಿ ಪಾದಚಾರಿ ಮೇಲು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಹೊರ ವರ್ತುಲ ರಸ್ತೆ ಮತ್ತು ಇತರೆ ರಸ್ತೆಗಳ ಅಗತ್ಯ ಸ್ಥಳಗಳಲ್ಲಿ ಪಾದಚಾರಿಗಳ ಮೇಲು ಸೇತುವೆ ನಿರ್ಮಾಣ ಮಾಡಲು ಪ್ರಸ್ತಾವನೆ ಪ್ರಗತಿಯಲ್ಲಿದೆ. ಬಿ.ಎಂ.ಟಿ.ಸಿ ಘಟಕಗಳು ಮಹದೇವಪುರ ಕ್ಷೇತ್ರದ ಇ.ಪಿ.ಐ.ಪಿ ವಲಯದಲ್ಲಿ ಟಿ.ಟಿ.ಎಂ.ಸಿ, ಗುಂಜೂರು,… Continue Reading
- ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… – New Polytechnic, College, Library… - ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… - New Polytechnic, College, Library… ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿ ಪಾಳಿ ಪದ್ಧತಿಯಲ್ಲಿ ನಡೆಯುತ್ತಿದ್ದ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜನ್ನು ಬೇರ್ಪಡಿಸಿ ಪದವಿ ಪೂರ್ವ ಕಾಲೇಜನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವರ್ತೂರು ಮತ್ತು ಕಾಡುಗೋಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ವರ್ತೂರು ಮತ್ತು ಕಾಡುಗೋಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು… Continue Reading