ಮುಖಪುಟ

[ditty_news_ticker id="567"]

 ಚತುರ ಸಂಘಟಕ, ಜನನಾಯಕ, ಹೃದಯವಂತ ಮುತ್ಸದ್ದಿ

ಮಹದೇವಪುರ ಕ್ಷೇತ್ರದ ಜನತೆಯ ಮನೆ-ಮನಗಳನ್ನು ಪ್ರವೇಶಿಸಿ ಮುಕ್ತವಾಗಿ ಮಾತನಾಡುವ, ಜನರೊಂದಿಗೇ ಬೆರೆತು ಕಷ್ಟ – ಸುಖಗಳನ್ನು ಅರಿಯುವ ಸ್ವಭಾವ ಅರವಿಂದ ಲಿಂಬಾವಳಿಯವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಬಂದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ಆಂದೋಳನಗಳ ಮೂಲಕವೇ ಅರವಿಂದ ಲಿಂಬಾವಳಿ ಬೆಳೆದಿದ್ದಾರೆ. ಎಪ್ಪತ್ತರ ದಶಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಹಾಗೂ ಎಂಬತ್ತರ ದಶಕದ ಆರಂಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಅಭಾವಿಪ) ಕಾರ್ಯಕರ್ತರಾಗಿ ಸಾಮಾಜಿಕ ಜೀವನ ಆರಂಭಿಸಿದ ಅರವಿಂದ ಲಿಂಬಾವಳಿಯವರು ೧೯೮೬ರಿಂದ ಆರು ವರ್ಷಗಳ ಕಾಲ ಅಭಾವಿಪ ರಾಜ್ಯ ಸಹಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಪಾಲಿಟೆಕ್ನಿಕ್ ಶಿಕ್ಷಣ ರಂಗದ ಸಮಸ್ಯೆಗಳ ವಿರುದ್ಧ ಹೋರಾಡಲು ೧೯೮೭ರಲ್ಲಿ ಮೂಡಿದ ಕರ್ನಾಟಕ ರಾಜ್ಯ ಪಾಲಿಟೆಕ್ನಿಕ್ ಕ್ರಿಯಾಸಮಿತಿ ಸಂಚಾಲಕರಾದ ಅರವಿಂದ ಲಿಂಬಾವಳಿ ಅವರಲ್ಲಿ ಕಂಡಿದ್ದು ಯುವೋತ್ಸಾಹದ ಕಿಚ್ಚು.ಹೆಚ್ಚು ಓದಿ...

ನನ್ನ ಧ್ಯೇಯ

ಸಮಾಜದ ಸರ್ವಾಂಗೀಣ ಏಳಿಗೆಗಾಗಿ ಸತತ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವುದೇ ನನ್ನ ಜೀವನದ ಧ್ಯೇಯ.

ನನ್ನ ಗುರಿ

ಭಾರತ ದೇಶವು ವಿಶ್ವದಲ್ಲೇ ಅತ್ಯುನ್ನತ ಸ್ಥಾನ ಗಳಿಸಲು, ಕರ್ನಾಟಕ ರಾಜ್ಯದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಅಭ್ಯುದಯಕ್ಕಾಗಿ ಶ್ರಮಿಸುವುದು ನನ್ನ ಪಾಲಿನ ಗುರಿ. ನನ್ನ ಹೊಣೆಗಾರಿಕೆಯನ್ನು ಶ್ರದ್ಧೆ, ದಕ್ಷತೆ ಮತ್ತು ಕಾರ್ಯತತ್ಪರತೆಯಿಂದ ನಿರ್ವಹಿಸುವುದು ನನ್ನ ಸಾಮುದಾಯಿಕ ಜವಾಬ್ದಾರಿಯಾಗಿದೆ.

CLOSE
CLOSE