ದುರಂತ ತಂದ ಮಹಾನೆರೆ – ಅಲ್ಲಿಗೂ ನೆರವಿನ ಹಸ್ತ

ದುರಂತ ತಂದ ಮಹಾನೆರೆ – ಅಲ್ಲಿಗೂ ನೆರವಿನ ಹಸ್ತ

2009ರಲ್ಲಿ ಉತ್ತರ ಕರ್ನಾಟಕದಲ್ಲಿ ಎಂದೂ ಕಂಡರಿಯದ ಭೀಕರ ನೆರೆ ಬಂದಾಗ ಅಲ್ಲಿನ ಸಂತ್ರಸ್ತರ ನೆರವಿಗೆ ಅರವಿಂದ ಲಿಂಬಾವಳಿ ಧಾವಿಸಿದರು. ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನರನ್ನು ಪ್ರವಾಹದಿಂದ ಸಂರಕ್ಷಿಸುವ, ನಿರಾಶ್ರಿತ ಕೇಂದ್ರಗಳನ್ನು ತೆರೆಯುವ ಮತ್ತು ಶಾಶ್ವತ ಪರಿಹಾರ ನೀಡುವ ಕಾರ್ಯದ ಹೊಣೆಗಾರಿಕೆಯನ್ನು ಅವರು ಸಮರ್ಥವಾಗಿ ನಿರ್ವಹಿಸಿದರು.

ಕಾಲೇಜು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಪರಿಹಾರ ಕಾರ್ಯದಲ್ಲಿ ಅವರನ್ನೂ ತೊಡಗಿಸಿದರು. ‘ಸ್ವಚ್ಛತಾ ಅಭಿಯಾನ‘ವನ್ನೂ ನಡೆಸಿದರು. ಕಾಲೇಜು ಶಿಕ್ಷಕರಿಂದ ೪೦ ಕೋಟಿ ರೂ. ದೇಣಿಗೆಯನ್ನೂ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.

ಮಹದೇವಪುರದಿಂದ ನೆರೆ ಸಂತ್ರಸ್ತ ಬಾಗಲಕೋಟೆಗೂ ಅಪಾರವಾದ ಆಹಾರ ಮತ್ತಿತರೆ ಸೌಲಭ್ಯಗಳ ನೆರವು ಹರಿಯಿತು.