ಸಮುದಾಯ ಭವನಗಳು, ಉದ್ಯಾನವನಗಳು, ನೀರು…

  • ಕಾವೇರಿ ನೀರು: ಹಳೇ ಸಿ.ಎಂ.ಸಿ. ವ್ಯಾಪ್ತಿಯಲ್ಲಿನ ಎಲ್ಲಾ ಪ್ರದೇಶಗಳಲ್ಲಿ ಯು.ಜಿ.ಡಿ. ಮತ್ತು ಕಾವೇರಿ ನೀರಿನ ಸೌಲಭ್ಯ ಒದಗಿಸಲಾಗಿದೆ.
  • ಶುದ್ಧ ಕುಡಿಯುವ ನೀರು: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಆದ್ಯತೆಯ ಮೇರೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.
  • ಸಾರ್ವಜನಿಕ ಭವನಗಳು: ಶಾಸಕರ ಹಾಗೂ ಸಂಸದರ ನಿಧಿಯಿಂದ ಗ್ರಾಮಾಂತರ ಭಾಗದ ಬಹುತೇಕ ಹಳ್ಳಿಗಳಲ್ಲಿ ಸ್ತ್ರೀ ಶಕ್ತಿ ಭವನ, ಅಂಬೇಡ್ಕರ್ ಭವನ, ಸಮುದಾಯ ಭವನ ನಿರ್ಮಿಸಲಾಗಿದೆ.
  • ಉದ್ಯಾನವನಗಳು: ದೊಡ್ಡನೆಕ್ಕುಂದಿ ವಾರ್ಡಿನ ಎ.ಇ.ಸಿ.ಎಸ್. ಬಡಾವಣೆಯಲ್ಲಿ ಒಂದು ಉದ್ಯಾನವನ, ಅಂಬಲಿಪುರ ಹಾಗೂ ಕಾಡುಗೋಡಿಯಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ.
  • ವಿದ್ಯುತ್ ಸರಬರಾಜು ಘಟಕಗಳು: ಆವಲಹಳ್ಳಿಯಲ್ಲಿ ಹೊಸದಾಗಿ ಬೆಸ್ಕಾಂನ ಓ & ಎಂ ಉಪವಿಭಾಗ ಸ್ಥಾಪನೆಯಾಗಿದೆ; ಸಫಲ್ ಮಾರುಕಟ್ಟೆ (ಕೋನದಾಸಪುರ) ಇಲ್ಲಿ 2*20 ಎಂ.ವಿ.ಎ. ಸ್ಟೇಶನ್ ಸ್ಥಾಪಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗಿದೆ.
ಬಿ.ಎಂ.ಟಿ.ಸಿ. ಘಟಕಗಳು
ಮಹದೇವಪುರ ಕ್ಷೇತ್ರದ ಇ.ಪಿ.ಐ.ಪಿ. ವಲಯದಲ್ಲಿ ಟಿ.ಟಿ.ಎಂ.ಸಿ., ಗುಂಜೂರು, ಮಂಡೂರು ಗ್ರಾಮಗಳಲ್ಲಿ ನೂತನ ಬಿ.ಎಂ.ಟಿ.ಸಿ. ಘಟಕಗಳು ಪ್ರಾರಂಭವಾಗಿದ್ದು ಬಹುತೇಕ ಎಲ್ಲ ಗ್ರಾಮಗಳಿಗೆ ಬಿ.ಎಂ.ಟಿ.ಸಿ. ಬಸ್ ಸೇವೆಯನ್ನು ಕಲ್ಪಿಸಲಾಗಿದೆ.

ಸಾಧನೆಗಳು ೨೦೧೮ – 2