ಲೋಕಸಭಾ ಚುನಾವಣೆ ನಿಮಿತ್ತ ತುಮಕೂರಿನ ಬಾವಿ ಕಟ್ಟೆ ಕಲ್ಯಾಣ ಮಂಟಪದಲ್ಲಿ ಭೋವಿ ಸಮಾಜದ ಸಭೆ ನಡೆಸಲಾಯಿತು. ದೇಶಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು. ಹೀಗಾಗಿ ಕ್ಷೇತ್ರದ ಅಭ್ಯರ್ಥಿಯನ್ನು ಬಹುಮತಗಳಿಂದ ಗೆಲ್ಲಿಸುವ ಸಂಕಲ್ಪ ತೊಡಬೇಕು ಎಂದು ತಿಳಿಸಿದೆ. ಈ ವೇಳೆ ಭೋವಿ ಸಮಾಜದ ಮುಖಂಡರು ಸೇರಿದಂತೆ ಸಮಾಜದ ಅಪಾರ ಜನರು ಉಪಸ್ಥಿತರಿದ್ದರು.