ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳಾದ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ರೋಡ್ ಶೋ ನಡೆಸುವ ಮೂಲಕ ದಿನ್ನೂರು, ಕಾಡುಗೋಡಿ, ಎ.ಕೆ.ಜಿ ಕಾಲೋನಿಯಲ್ಲಿ ಪ್ರಚಾರ ಮಾಡಲಾಯಿತು. ಕೇಂದ್ರ ಸರಕಾರದಿಂದ ಅತೀ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಶ್ರೀ ಮೋಹನ್ ಅವರು ಅಭಿವೃದ್ಧಿಗೊಳಿಸಿದ್ದಾರೆ. ಜನಪರ ಕಾಳಜಿ ಇರುವ ಇವರಿಗೆ ಹ್ಯಾಟ್ರಿಕ್ ಗೆಲುವು ನೀಡುವ ಮೂಲಕ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿಕೊಡಬೇಕು. ದೇಶದ ಉಳಿವಿಗೆ ಬಿಜೆಪಿ ಬೆಂಬಲಿಸಬೇಕು ಎಂದು ತಿಳಿಸಲಾಯಿತು.