ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆ

  • ಭಾರತವನ್ನು ಜಗತ್ತಿನ ಕೌಶಲ್ಯ ಕೇಂದ್ರವನ್ನಾಗಿ ರೂಪಾಂತರಿಸಲೆಂದೇ ವೃತ್ತಿ ಶಿಕ್ಷಣವನ್ನು ಇನ್ನಷ್ಟು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯವು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಮಾದರಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಅತ್ಯಾಧುನಿಕವಾದ ಸೌಲಭ್ಯಗಳನ್ನು ಹೊಂದಿರುವ ಈ ಕೇಂದ್ರಗಳನ್ನು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ (ಪಿಎಂಕೆಕೆ) ಎಂದು ಕರೆಯಲಾಗಿದೆ.
  • ಅರ್ಹತೆ ಆಧಾರಿತ ಕೌಶಲ್ಯ ತರಬೇತಿ ನೀಡಿಕೆ, ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟ, ಸುಸ್ಥಿರತೆ ಸಾಧಿಸುವುದು, ಸುಸ್ಥಿರ ಸಾಂಸ್ಥಿಕ ಮಾದರಿಯನ್ನು ರೂಪಿಸುವುದು – ಇವೇ ಪಿಎಂಕೆಕೆಯ ಉದ್ದೇಶಗಳು.
  • ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಿಎಂಕೆಕೆ ಕೇಂದ್ರವು ಮಹದೇವಪುರ ವಿಧಾನಸಭಾ ಕ್ಷೇತ್ರದ ಕುಂದಲಹಳ್ಳಿಯಲ್ಲಿ 2018ರ ಜನವರಿ 6ರಂದು ಉದ್ಘಾಟನೆಗೊಂಡಿದೆ. ಈಗ 900 ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

 

ಸಾಧನೆಗಳು ೨೦೧೮ – 2