ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ…

ಸುರಕ್ಷತೆಗೆ ಸಿ.ಸಿ ಕ್ಯಾಮರಾ

ಶಾಸಕರ ನಿಧಿ (೬೦ ಲಕ್ಷ ರೂ.), ಸಂಸದರ ನಿಧಿ (೩೦ ಲಕ್ಷ ರೂ.), ವಿಧಾನ ಪರಿಷತ್ ಸದಸ್ಯರಾದ ಶ್ರೀ ಲೇಹರ್ ಸಿಂಗ್ (೨೦ ಲಕ್ಷ ರೂ.), ಶ್ರೀ ರಘುನಾಥ ಮಲ್ಕಾಪುರೆ (೨೦ ಲಕ್ಷ ರೂ.) ರವರ ನಿಧಿಯಿಂದ ಕಾಡುಗೋಡಿ, ವರ್ತೂರು, ಮಾರತ್ತಹಳ್ಳಿ, ಹೆಚ್.ಎ.ಎಲ್, ಮಹದೇವಪುರ ಮತ್ತು ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುರಕ್ಷತಾ ದೃಷ್ಟಿಯಿಂದ ಸಿ.ಸಿ ಕ್ಯಾಮರಾ ಅಳವಡಿಸಲು ಹಣ ಬಿಡುಗಡೆ ಮಾಡಲಾಗಿದೆ.

ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು

  • ವಿದ್ಯುತ್ ಸಮಸ್ಯೆಯನ್ನು ನಿವಾರಿಸಲು ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಿದ್ದು, ಗ್ರಾಮಾಂತರ ಗ್ರಿಡ್‌ನ ವ್ಯಾಪ್ತಿಯಲ್ಲಿದ್ದ ೧೩ ಗ್ರಾಮಗಳನ್ನು ನಗರ ವಿದ್ಯುತ್ ಗ್ರಿಡ್ ವ್ಯಾಪ್ತಿಗೆ ಸೇರಿಸಿ ನಿರಂತರ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
  • ಕ್ಷೇತ್ರದ ಪ್ರಮುಖ ವೃತ್ತಗಳಲ್ಲಿ ಹೈ-ಮಾಸ್ಟ್ ದೀಪಗಳನ್ನು ಆಳವಡಿಸಲಾಗಿದೆ.

ನೂತನ ಆರಕ್ಷಕ ಠಾಣೆಗಳು

ಸುರಕ್ಷತೆಯ ದೃಷ್ಟಿಯಿಂದ ಆವಲಹಳ್ಳಿ, ಮಾರತ್ತಹಳ್ಳಿ ಮತ್ತು ಬೆಳ್ಳಂದೂರುಗಳಲ್ಲಿ ನೂತನ ಅರಕ್ಷಕ ಠಾಣೆಗಳನ್ನು ಪ್ರಾರಂಭಿಸಲಾಗಿದೆ. ವೈಟ್‌ಫೀಲ್ಡ್‌ನಲ್ಲಿ ಡಿ.ಸಿ.ಪಿ ಕಛೇರಿಗೆ ನೂತನ ಕಟ್ಟಡ ಪಿ.ಪಿ.ಪಿ ಮಾದರಿಯಲ್ಲಿ ಪ್ರಾರಂಭಿಸಲಾಗಿದೆ.

ಬೆಳ್ಳಂದೂರು ವಾರ್ಡಿನ ಕೈಕೊಂಡರಹಳ್ಳಿಯಲ್ಲಿ ಪಿ.ಪಿ.ಪಿ ಅಡಿಯಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಲಾಗಿದೆ.

ಸಾಧನೆಗಳು ೨೦೧೮ – 2