ಮಹಾದೇವಪುರ ಟಾಸ್ಕ್ ಫೋರ್ಸ್ ನ ಟ್ರಾಫಿಕ್ ಮತ್ತು ಪ್ರಮುಖ ರಸ್ತೆಗಳ ವಿಭಾಗದ ಸಭೆಯನ್ನು ಶಾಸಕರ ಕಛೇರಿಯಲ್ಲಿ ನಡೆಸಲಾಯಿತು. ಟಾಸ್ಕ್ ಫೋರ್ಸ್ ಸದಸ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು‌.
ಸಭೆಯಲ್ಲಿ ಚರ್ಚಿಸಿದ ವಿಷಯಗಳು.

-ಹಿಂದಿನ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ವಿಮರ್ಶೆ ಮಾಡಲಾಯಿತು.

-ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಯಾ ಇಲಾಖೆಗಳು ತಕ್ಷಣದ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಲಾಯಿತು.

-ಕ್ಷೇತ್ರದಲ್ಲಿ ಅವಶ್ಯವಿರುವ ಮುಂದೆ ನಡೆಯಬೇಕಾದ ಯೋಜನೆಗಳನ್ನು ಗುರ್ತಿಸಿ ಕಾರ್ಯಪಡೆಯ ಸಭೆಯಲ್ಲಿ ಚರ್ಚಿಸಿ ಡಿಪಿಆರ್ ಸಿದ್ಧಗೊಳಿಸುವಂತೆ ಸೂಚಿಸಲಾಯಿತು.

-ದೊಡ್ಡನೆಕ್ಕುಂದಿ ಗ್ರಾಮದ ಅಂಡರ್ ಪಾಸ್ ನಲ್ಲಿ ಮಳೆಯಾದ ಸಂದರ್ಭದಲ್ಲಿ ನಿಲ್ಲುವ ನೀರಿನ ಸಮಸ್ಯೆ ತಪ್ಪಿಸಲು ಅಗತ್ಯಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

-2018-19 ನೇ ಸಾಲಿನಲ್ಲಿ ನಡೆಯುತ್ತಿರುವ ಎಲ್ಲಾ ಪ್ರಮುಖ ಮತ್ತು ಒಳ ರಸ್ತೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಲು ಕಾರ್ಯಪಡೆಯ ಸದಸ್ಯರನ್ನು ನೇಮಿಸಲಾಯಿತು.

-ಚಿನ್ನಪ್ಪನಹಳ್ಳಿ,ಕಾರ್ಮಿಲಾರಮ್ಮುಮತ್ತು ಮುನೇಕೊಳಾಲದಲ್ಲಿ ನಡೆಯುತ್ತಿರುವ ರೈಲ್ವೇ ಮೇಲ್ಸೇತುವೆಗಳು ಹಾಗೂ ದೊಡ್ಡನೆಕ್ಕುಂದಿಯಲ್ಲಿ ನಡೆಯುತ್ತಿರುವ ರೈಲ್ವೇ ಕೆಳ ಸೇತುವೆ ಕಾಮಗಾರಿಗಳನ್ನು ಬಹುಬೇಗ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

-ಜೆ.ಪಿ.ಮೋರ್ಗನ್, ಸೆಂಟ್ರಲ್ ಮಾಲ್,ಕಲಾಮಂದಿರ, ಕಾರ್ತಿಕ್ ನಗರ,ಐಬ್ಲೂ ಮತ್ತು ನ್ಯೂ ಹಾರಿಜನ್ ಕಾಲೇಜಿನ ಹತ್ತಿರ ನಡೆಯುತ್ತಿರುವ ಪಾದಚಾರಿ ಮೇಲ್ಸೇತುವೆ ರಸ್ತೆ ಯೋಜನೆಗಳನ್ನು ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

– ಕುಂದನಹಳ್ಳಿಯಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಯೋಜನೆ ಕಾಮಗಾರಿಯನ್ನು ಬೇಗ ಮುಗಿಸುವಂತೆ ಸೂಚಿಸಲಾಯಿತು.

– ಟಾಸ್ಕ್ ಫೋರ್ಸ್ ನ ಸದಸ್ಯರಿಂದ ಹೊಸ ಪ್ರಸ್ತಾವನೆಗಳು ಮತ್ತು ಸಲಹೆಗಳನ್ನು ಪಡೆಯಲಾಯಿತು.