ಟಾಸ್ಕ್ ಪೋರ್ಸ್ ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಭೆಯನ್ನು ವೈಟ್ ಫೀಲ್ಡ್‌‌‌ನ ಡಿಸಿಪಿ ಕಛೇರಿ ನಲ್ಲಿ ನಡೆಸಲಾಯಿತು. ಈ ವೇಳೆ ಪೊಲೀಸ್‌ ಅಧಿಕಾರಿಗಳು, ಹಾಗೂ ಟಾಸ್ಕ್ ಪೋರ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚರ್ಚಿಸಿದ ವಿಷಯಗಳು

– ಡ್ರಗ್ಸ್‌ ಮಾಫಿಯಾಗೆ ಕಡಿವಾಣ ಹಾಕುವುದು.
– ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ಅವರಿಗೆ ಆಶ್ರಯ ನೀಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದು.
– ಕಸವನ್ನು ಎಲ್ಲೆಂದರಲ್ಲಿ ಸುಡುತ್ತಿರುವುದನ್ನು ತಡೆಯಬೇಕು.
– ಖಾಲಿ ಜಾಗದಲ್ಲಿ ಕಸ ಸುರಿಯುವುದನ್ನು ತಡೆಯಬೇಕು.
– ನಿರ್ಭಯಾ ಯೋಜನೆಯಡಿಯಲ್ಲಿ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಸುವುದು.
– ಧಾರ್ಮಿಕ ಸ್ಥಳಗಳು, ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳ ಹತ್ತಿರ ಬಾರ್‌ ಮತ್ತು ಪಬ್‌ಗಳ ಶಬ್ದಮಾಲಿನ್ಯ ತಡೆಯುವುದು.
– ಪೊಲೀಸ್‌ ಅಧಿಕಾರಿಗಳು ಮಾರತ್‌ಹಳ್ಳಿ ಮತ್ತು ಬೆಳ್ಳಂದೂರು ಪೊಲೀಸ್‌ ಠಾಣೆಗಳಿಗೆ ಸ್ಥಳಾವಕಾಶ ನೀಡಲು ಕೋರಿದರು.