ಗೇರ್‌ ಸ್ಕೂಲ್‌ ರಸ್ತೆಯ ಪರಿವೀಕ್ಷಣೆ ಮಾಡಲಾಯಿತು.ಈ ವೇಳೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
-ಈ ವೇಳೆ ಎಐಟಿ ಜಂಕ್ಷನ್‌ ಹತ್ತಿರ ವಿದ್ಯುತ್‌ ಕಂಬಗಳನ್ನು ಒಂದು ವಾರದ ಒಳಗೆ ತೆರವುಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಗಡುವು ನೀಡಲಾಯಿತು ಹಾಗೂ ಚರಂಡಿ ಮೇಲಿನ ಮುರಿದುಹೋಗಿದ್ದ ಸ್ಲಾಬ್‌ ಗಳನ್ನು ತೆರವುಗೊಳಿಸಿ ಹೊಸ ಸ್ಲಾಬ್‌ ಗಳನ್ನು ಹಾಕಿ ಸರಿಪಡಿಸಬೇಕೆಂದು ಸೂಚಿಸಲಾಯಿತು.

-ಗ್ಯ್ರಾಂಡ್‌ ಸಿಟಿ ಮುಂಭಾಗ ಚರಂಡಿ ಕಂಟ್ಟಿಕೊಂಡಿದ್ದು ಅದನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು ಹಾಗೂ ಅಲ್ಲಿ ಯುಜಿಡಿ ಕಾಮಗಾರಿ ಮಾಡುವಂತೆ ಸೂಚಿಸಲಾಯಿತು. ಅಧಿಕಾರಿಗಳು 2 ತಿಂಗಳು ಕಾಲಾವಕಾಶ ಕೋರಿದ್ದಾರೆ.

– ಆದರ್ಶ್ ವಿಲ್ಲಾಸ್‌ ಹತ್ತಿರ 2 ಕಡೆ ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದು ಅದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡುವಂತೆ ಸೂಚಿಸಲಾಯಿತು.

-ಹೊರವರ್ತುಲ ರಸ್ತೆಯ ನ್ಯೂ ಹಾರಿಸನ್‌ ಕಾಲೇಜಿನ ಹತ್ತಿರ BWSSB ಪೈಪ್‌ ಲೈನ್‌ ಕಾಮಗಾರಿ ನಡೆಯುತ್ತಿದ್ದು ಪೂರ್ಣಗೊಳಿಸಲು ೩ ದಿನಗಳ ಗಡುವು ನೀಡಲಾಯಿತು.