ಕಾಚಮಾರನಹಳ್ಳಿ, ಮಾಲೂರು, ಗುಂಜೂರು, ಕೊಡತಿ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ಗಮನಿಸಲಾಯಿತು. ಈ ವೇಳೆ ಕಾರ್ಯಕರ್ತರಿಂದ ಮತದಾನ ಪ್ರಮಾಣದ ಮಾಹಿತಿ ಪಡೆಯಲಾಯಿತು. ಮತದಾನ ಜವಾಬ್ದಾರಿಯುತ ಕರ್ತವ್ಯವಾಗಿದ್ದು, ಇನ್ನೂ ಮತ ಚಲಾಯಿಸದವರು ಬೇಗನೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಜನಪರ ನಾಯಕನನ್ನು ಆರಿಸಬೇಕು.