ಮಹದೇವಪುರದಲ್ಲಿ ‘ಮೈ ಭಿ ಚೌಕಿದಾರ್’ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಪಕ್ಷದ ಹಲವು ಮುಖಂಡರು, ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಹಾಗು ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಯಿತು. ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ, ಮುಂದಿನ ಐದು ವರ್ಷಗಳಿಗೆ ಹಾಕಿಕೊಂಡ ಯೋಜನೆಗಳ ಬಗ್ಗೆ ಸಂವಾದದಲ್ಲಿ ತಿಳಿಸಲಾಯಿತು.